ಮಥುರಾ: ಮದುವೆ ಫಿಕ್ಸ್ ಆಗಿದೆ ಎಂದ ಮಾತ್ರಕ್ಕೆ ಮದುವೆ (Marriage) ನಡೆದೇ ಬಿಡುತ್ತದೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. 2 ದಿನಗಳ ಹಿಂದಷ್ಟೇ ವರ ಕಂಠಪೂರ್ತಿ ಕುಡಿದು, ಮದುವೆ ಮಂಟಪಕ್ಕೆ ತಡವಾಗಿ ಬಂದ ಎಂಬ ಕಾರಣಕ್ಕೆ ವಧುವಿನ ತಂದೆ-ತಾಯಿ ತಮ್ಮ ಮಗಳನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ ವಿಷಯ ಭಾರೀ ಚರ್ಚೆಯಾಗಿತ್ತು. ಇಂದು ಮದುವೆ ಮಂಟಪದಲ್ಲೇ ವಧುವಿನ ಮಾಜಿ ಪ್ರಿಯಕರ ತಾನು ಮದುವೆಯಾಗಬೇಕಾಗಿದ್ದ ಯುವತಿಯನ್ನು ಶೂಟ್ ಮಾಡಿ, ಕೊಂದಿರುವ ಘಟನೆ ನಡೆದಿದೆ.
ಮಥುರಾದ ನೌಜಿಲ್ ಪ್ರದೇಶದ ಮುಬಾರಿಕ್‌ಪುರ ಗ್ರಾಮದಲ್ಲಿ ಇಂದು ನಡೆದ ವಿವಾಹ ಸಮಾರಂಭದಲ್ಲಿ ವಧುವನ್ನು ಆಕೆಯ ಮಾಜಿ ಪ್ರಿಯಕರನೇ ಗುಂಡಿಕ್ಕಿ ಕೊಂದಿದ್ದಾನೆ. ವಧು ಕಾಜಲ್ ತಾನು ಮದುವೆಯಾಗಬೇಕಿದ್ದ ವರನಿಗೆ ವರಮಾಲೆ ಹಾಕಿದ ಕೂಡಲೇ ಆಕೆಯ ಮೇಲೆ ಗುಂಡು ಹಾರಿಸಿ, ಕೊಲ್ಲಲಾಗಿದೆ.
ಆರೋಪಿಯು ಆ ವಧುವಿನೊಂದಿಗೆ ಸಂಬಂಧ ಹೊಂದಿದ್ದ. ಆಕೆಯನ್ನೇ ಮದುವೆಯಾಗಬೇಕು ಎಂದುಕೊಂಡಿದ್ದ. ಆದರೆ, ಆಕೆಯು ಬೇರೆ ಪುರುಷನೊಂದಿಗೆ ಮದುವೆಯಾಗುತ್ತಿದ್ದುದರಿಂದ ಕೋಪಗೊಂಡಿದ್ದ ಆತ ಆಕೆಯ ಮದುವೆ ನಡೆಯುವ ಸ್ಥಳಕ್ಕೆ ಹೋಗಿ ಮಂಟಪದಲ್ಲೇ ಆಕೆಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…
ಗುಂಡಿನ ಸದ್ದು ಕೇಳಿದ ಕೂಡಲೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ವಧು ಸಾವನ್ನಪ್ಪಿದ್ದಳು. ವೇದಿಕೆಯಲ್ಲಿ ವರಮಾಲೆ ಹಾಕಿದ ನಂತರ ನನ್ನ ಮಗಳು ಫ್ರೆಶ್ ಆಗಲು ಕೋಣೆಗೆ ಹೋದಾಗ ಅಪರಿಚಿತ ವ್ಯಕ್ತಿ ಬಂದು ಗುಂಡಿಕ್ಕಿ ಕೊಂದಿದ್ದಾನೆ. ಮದುವೆಯಾಗಬೇಕಿದ್ದ ನನ್ನ ಮಗಳು ಸಾವನ್ನಪ್ಪಿರುವುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ! ಎಂದಿದ್ದಾರೆ.
ಈ ಘಟನೆ ನಡೆದ ಕೂಡಲೇ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಎಲ್ಲ ಆಯಾಮಗಳಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.