Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ಚಂದನ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: ಸುಮಾರು 300 ಕೆಜಿ ರಕ್ತ ಚಂದನ ವಶ

ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಕಟಾವಿಗೆ ಬಂದ ಭತ್ತ ನೆಲಕಚ್ಚಿದ್ದು, ರೈತರು ಕಂಗಾಲಾಗಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಹಾಗೂ ಗಂಗಾವತಿ ತಾಲೂಕಿನನಾದ್ಯಂತವಾಗಿದೆ.

ರಕ್ತ ಚಂದನ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: ಸುಮಾರು 300 ಕೆಜಿ ರಕ್ತ ಚಂದನ ವಶ
ರಕ್ತ ಚಂದನ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: ಸುಮಾರು 300 ಕೆಜಿ ರಕ್ತ ಚಂದನ ವಶ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 29, 2022 | 3:38 PM

ಕೋಲಾರ: ರಕ್ತ ಚಂದನ (Red Sandalwood) ಮಾರಾಟ ಮಾಡುತ್ತಿದ್ದಂತಹ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ನಂಗಲಿಯ ಬೆಟ್ಟಹಳ್ಳಿ ಸಮೀಪ ಕಾರ್ಯಾಚರಣೆ ಮಾಡಲಾಗಿದೆ. ರಕ್ತ ಚಂದನವನ್ನು ಖರೀದಿಸುವ ಮಾರುವೇಷದಲ್ಲಿದ್ದ ಪೊಲೀಸರಿಂದ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ, ಆಂದ್ರ, ಕರ್ನಾಟಕಕ್ಕೆ ಸೇರಿರುವ ನಾಲ್ವರು ಆರೋಪಿಗಳು, ಕಾರು ಮತ್ತು ಸುಮಾರು 300 ಕೆಜಿ ರಕ್ತ ಚಂದನ ವಶಕ್ಕೆ ಪಡೆಯಲಾಗಿದೆ.  ರಕ್ತ ಚಂದನವನ್ನು ಖಾಸಗಿ ಕಾರ್​ಗೆ ಭರ್ತಿ ಮಾಡುತ್ತಿದ್ದಾಗ ಎಸ್​ಪಿ ದೇವರಾಜ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳ ಬಂಧನ ಮಾಡಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ₹ 1.27000 ಸಾವಿರ ಮೌಲ್ಯದ ಗೋವಾ ಮದ್ಯ ಸಾಗಾಟ: ಇಬ್ಬರ ಬಂಧನ

ಕಾರವಾರ:  ಸಾಗರ-ಪಣಜಿ ಕೆ.ಎಸ್.ಆರ್.ಟಿ.ಸಿ ಬಸ್​ನಲ್ಲಿ ₹ 1.27000 ಸಾವಿರ ಮೌಲ್ಯದ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಕಾರವಾರ ತಾಲೂಕಿನ ಮಾಜಾಳಿ ಚಕ್ ಪೋಸ್ಟ್​ನಲ್ಲಿ ಬಂಧನ ಮಾಡಲಾಗಿದೆ. ಶಿವಮೊಗ್ಗ ಮೂಲದ ನಾಗರಾಜ (35), ಸಾಗರ್ (25) ಬಂಧಿತ ಆರೋಪಿಗಳು. ಚಿತ್ತಾಕುಲ ಪೊಲೀಸರು ಹಾಗೂ ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಗೋವಾದಿಂದ ಶಿವಮೊಗ್ಗಕ್ಕೆ ಬ್ಯಾಗ್​ನಲ್ಲಿ ತುಂಬಿಕೊಂಡು ಬಸ್​ನಲ್ಲಿ ಆರೋಪಿಗಳು ತೆರಳುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಗಾಳಿ ಮಳೆಗೆ ನೆಲ ಕಚ್ಚಿದ ಭತ್ತ:

ಕೊಪ್ಪಳ: ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಕಟಾವಿಗೆ ಬಂದ ಭತ್ತ ನೆಲಕಚ್ಚಿದ್ದು, ರೈತರು ಕಂಗಾಲಾಗಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಹಾಗೂ ಗಂಗಾವತಿ ತಾಲೂಕಿನನಾದ್ಯಂತವಾಗಿದೆ. ಭತ್ತದ ಗದ್ದೆಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಭತ್ತ ಬೆಳೆ ನಾಶದಿಂದ ಕಂಗಾಲಾದ ರೈತರೊಂದಿಗೆ ಹಾನಿ ಬಗ್ಗೆ ಚರ್ಚೆ ಮಾಡಿದರು. ಪ್ರತಿ ಹೆಕ್ಟೇರ್​ಗೆ 40 ರಿಂದ 50 ಸಾವಿರ ಬೆಳೆ ನಾಶವನ್ನು ಶಿಘ್ರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಶಿಘ್ರ ಸರ್ವೆ ಕಾರ್ಯ ಆರಂಭಿಸಿ, ರೈತರಿಗೆ ನೆರವಾಗುವಂತೆ ತಂಗಡಗಿ ಒತ್ತಾಯ ಮಾಡಿದ್ದಾರೆ.

ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಕೋಡಿಗೆಹಳ್ಳಿ ಠಾಣೆ ಹೆಡ್ ಕಾನ್ಸ್ಟೇಬಲ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದಾಗಿ ಮಂಜುನಾಥ್(44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರೆಲ್ಲರೂ ಊರಿಗೆ ತೆರಳಿದ್ದಾಗ ಘಟನೆ ನಡೆದಿದೆ. ಮೂರು ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಈ ಹಿಂದೆಯೂ ಇದೇ ರೀತಿ ಖಿನ್ನತೆಗೊಳಗಾಗಿದ್ದರು. ಆದ್ರೆ ಈ ಬಾರಿ ಖೀನ್ನತೆಯಿಂದ ಆಚೆ ಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪಘಾತ ಬೈಕ್ ಸವಾರ ಸಾವು ಶಿವಮೊಗ್ಗದ ಆಯನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿ. ಶಿವಮೊಗ್ಗದಿಂದ ಆಯನೂರಿನ ಕಡೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ:

ONGC Recruitment 2022 ಒಎನ್​​ಜಿಸಿಯಲ್ಲಿ 3614 ಅಪ್ರೆಂಟಿಸ್ ಹುದ್ದೆ; ಅರ್ಜಿ ಸಲ್ಲಿಸುವುದು ಹೇಗೆ?

KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ