ದೊಣ್ಣೆಯಿಂದ ಹೊಡೆದು ಮಂಗಳ ಮುಖಿ ಕೊಲೆ: ಓರ್ವ ಅಪ್ರಾಪ್ತ ಸೇರಿದಂತೆ 5 ಜನರ ಬಂಧನ
ನೆಲಮಂಗಲ: ಆ ಕುಡಿ ಮೀಸೆ ಹುಡುಗರ ಗ್ಯಾಂಗ್ (Gang) ಒಂದು ಕೊಲೆ ಮಾಡಿ ಒಂದು ಸಣ್ಣ ಸುಳಿವು ಸಹ ಬಿಡದಂಗೆ ಎಸ್ಕೇಪ್ ಆಗಿದ್ರು, ಆದ್ರೆ ರಸ್ತೆಯಲ್ಲಿ ಸಿಸಿ ಕ್ಯಾಮೆರಾಗಳು ಅವರನ್ನ ಬಿಡಲೇ ಇಲ್ಲ, ಕೊಂದು ಪಕ್ಕದ ಊರಲ್ಲೆ ಇದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಪೊಲೀಸರಿಂದ ಸ್ಥಳ ಮಹಜರ್, ಇಲ್ಲಿ ಯಾವಾಗ ಏನು ನಡೆಯಿತು ಎಂದು ಎಕ್ಲ್ಪೈನ್ ಮಾಡ್ತಾ ಇರೋ ಖತರ್ನಾಖ್ ಕೊಲೆ ಪಾತಕರು, ಹೌದು ಈ ಐದು ಜನರು ಒರ್ವ ಮಂಗಳ ಮುಖಿಯನ್ನ ಹೊಡೆದು ಕೊಲೆಗೈದಿರುವ […]
ನೆಲಮಂಗಲ: ಆ ಕುಡಿ ಮೀಸೆ ಹುಡುಗರ ಗ್ಯಾಂಗ್ (Gang) ಒಂದು ಕೊಲೆ ಮಾಡಿ ಒಂದು ಸಣ್ಣ ಸುಳಿವು ಸಹ ಬಿಡದಂಗೆ ಎಸ್ಕೇಪ್ ಆಗಿದ್ರು, ಆದ್ರೆ ರಸ್ತೆಯಲ್ಲಿ ಸಿಸಿ ಕ್ಯಾಮೆರಾಗಳು ಅವರನ್ನ ಬಿಡಲೇ ಇಲ್ಲ, ಕೊಂದು ಪಕ್ಕದ ಊರಲ್ಲೆ ಇದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಪೊಲೀಸರಿಂದ ಸ್ಥಳ ಮಹಜರ್, ಇಲ್ಲಿ ಯಾವಾಗ ಏನು ನಡೆಯಿತು ಎಂದು ಎಕ್ಲ್ಪೈನ್ ಮಾಡ್ತಾ ಇರೋ ಖತರ್ನಾಖ್ ಕೊಲೆ ಪಾತಕರು, ಹೌದು ಈ ಐದು ಜನರು ಒರ್ವ ಮಂಗಳ ಮುಖಿಯನ್ನ ಹೊಡೆದು ಕೊಲೆಗೈದಿರುವ ಪಾಪಿಳಾದ ನವೀನ್, ಕುಮಾರ್, ಸಂತೋಷ್, ಮಹೇಶ್, ಮಣಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬುರುಗಮರ ಪಾಳ್ಯ ಗ್ರಾಮದಲ್ಲಿ ಇದೇ ತಿಂಗಳ 8 ನೇ ತಾರೀಕೂ ಮಂಗಳಮುಖಿ 23 ವರ್ಷಸ ಅನಿಕಾಳನ್ನ ಕೊಲೆ ಮಾಡಿರುವ ಆರೋಪಿಗಳು.
ಹೀಗೆ ಕೊಲೆಗೂ ಹಿಂದಿನ ದಿನ ಯಾರದ್ದೋ ಬರ್ತಡೆ ಹಬ್ಬದ ಕಾರ್ಯಕ್ರಮದಲ್ಲಿ ಕುಣಿದಿರುವ ಈಕೆ ಕಳೆದ 8 ನೇ ತಾರೀಕೂ ಆರೋಪಿಗಳಾದ ಕುಮಾರ್ ಹಾಗೂ ಸಂತೋಷ್ ತಮ್ಮ ತೃಷೇ ತೀರಿಸಿಕೊಳ್ಳಲು ಮಂಗಳ ಮುಖಿ ಅನಿಕಾ ಬಳಿಗೆ ಹೋಗಿದ್ರಂತೆ, ಈ ವೇಳೆ ಸಣ್ಣ ಕಿರಿಕ್ ಆಗಿ ಮಂಗಳ ಮುಖಿ ಅನಿಕಾ ಹಾಗೂ ಆರೋಪಿಗಳಿಬ್ಬರಿಗೂ ಗಲಾಟೆ ಆಗಿತ್ತಂತೆ. ಗಲಾಟೆ ಆದ ಮೇಲೆ ಆರೋಪಿಗಳಾದ ಸಂತೋಷ್ ಹಾಗು ಕುಮಾರ್ ಅಲ್ಲಿಂದ ಹೊರಟು ನೆಲಮಂಗಲಗೆ ಬಂದು ತನ್ನ ಸ್ನೇಹಿತರಾದ ಬೆಂಗಳೂರು ನಗರ ಮಾಲದ ನವೀನ್, ಮಣಿ, ಮಹೇಶ್‌ರನ್ನ ಕರೆಸಿಕೊಂಡಿದ್ದಾನೆ. ನಂತರ ಐದು ಜನ ಮೃತೆ ಮಂಗಳಮುಖಿ ಇದ್ದ ಮನೆಗೆ ಹೋಗಿ ದೊಣ್ಣೆಗಳಿಂದ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿದ್ರು, ಆಗ ಮೃತಳಿಗೆ ಗಂಭೀರ ಗಾಯಗಳಾಗಿದ್ದು ತನ್ನ ಸ್ನೇಹಿತರು ಆಸ್ಪತ್ರೆಗೆ ಸೇರಿದ್ದರು, ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ಅನಿಕಾ ಕೊನೆಯುಸಿರೆಳೆದಿದ್ದಾಳೆ.
ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣ ಪೊಲೀಸರು ಆರಂಭದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಮೃತೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುತ್ತಿದ್ದಂತೆ ಕೊಲೆ ಪ್ರಕರಣವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳ ಬಗ್ಗೆ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ, ಆಗ ಆರೋಪಿಗಳ ಸುಳಿವು ಪತ್ತೆ ಹಚ್ಚೋದೆ ತಲೆನೋವಾದ ಸಂದರ್ಭದಲ್ಲಿ ಆರೋಪಿಗಳ ಪತ್ತೆಗಾಗಿ ಮೂರು ಟೀಂ ರಚನೆ ಮಾಡಿಕೊಂಡ ಪೊಲೀಸರಿಗೆ ಮೊದಲು ನೆರವಾಗೋದು ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾಗಳು. ಹೆದ್ದಾರಿಯ ಟೋಲ್‌ಗಳು ಹಾಗೂ ನೆಲಮಂಗಲ ನಗರದ ಆಯಕಟ್ಟಿನ ಪ್ರದೇಶಗಳಲ್ಲಿನ ಟೋಲ್‌ಗಳಲ್ಲಿ ಆರೋಪಿಗಳ ಪತ್ತೆಗಾಗಿ ಸಿಸಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ಐದು ಜನರ ಗುಂಪು ಕಾಣ ಸಿಗುತ್ತದೆ, ಈ ವೇಳೆ ಪೊಲೀಸರಿಗೆ ಮತ್ತೊಂದು ಸುಳಿವು ನೀಡಿದ್ದು ಮತ್ತೊಂದು ಆರೋಪಿಗಳ ಮೊಬೈಲ್ ಟವರ್ ಲೊಕೇಷನ್.
ಮೊಬೈಕ್ ಟವರ್ ಲೊಕೇಶನ್ ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಮೂಲಕ ಆರೋಪಿಗಳ ಬೆನ್ನು ಬಿದ್ದ ಪೊಲಿಸರಿಗೆ ಆರೋಪಿಗಳ ಸುಳಿವು ಸಿಕ್ಕಿದ ಬೆನ್ನಲ್ಲೇ ಕೊಲೆ ನೆಡೆದ ಕೇವಲ ಒಂದು ಕಿಲೋ ಮೀಟರ್ ದೂರದ ತಮ್ಮ ಮನೆಯಲ್ಲಿ ಆರಾಮಾಗಿ ವಾಸವಿದ್ರು, ಪ್ರಮುಖ ಆರೋಪಿಗಳಾದ ಕುಮಾರ್ ಹಾಗೂ ಸಂತೋಷ್‌ನನ್ನ ಬಂಧಿಸಿದ ನಂತರ ಇನ್ನುಳಿದ ಮೂರು ಜನರ ಪತ್ತೆ ಸುಲಭವಾಯಿತು. ಐವರನ್ನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿ ನವೀನ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬೆಳಕಿಗೆ ಬಂದಿದೆ, ಅಲ್ಲದೆ ಕೊಲೆ ನಡೆದ ದಿನ ನವೀನ್ ಸೇರಿದಂತೆ ಮಣಿ ಹಾಗೂ ಮಹೇಶ್ ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಲಾಗಿತ್ತು. ಅವರು ಮತ್ತಷ್ಟು ಅಪರಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಮಾನಿ ಹಿನ್ನೆಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
ವರದಿ: ಮೂರ್ತಿ. ಬಿ ಟಿವಿ 9 ನೆಲಮಂಗಲ
ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ಸಾವು
ಗದಗ: ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದ ಸಮೀಪದ ಹೊಂಡ ನಡೆದಿದೆ. ಬಸವರಾಜ್(17), ಈರಣ್ಣ(17) ಮೃತಪಟ್ಟ ದುರ್ದೈವಿಗಳು. ಸ್ನಾನಕ್ಕೆ ಹೊಂಡಕ್ಕೆ ಇಳಿದಾಗ ಮುಳುಗಿ ಮೃತಪಟ್ಟಿದ್ದಾರೆ. ಹೊಂಡದ ಬಳಿ ಯುವಕರ ಬಟ್ಟೆ ಪತ್ತೆ ಬಳಿಕ ಗೊತ್ತಾಗಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಿಂದ ಯುವಕರ ಶೋಧ ಕಾರ್ಯ ಆರಂಭಿಸಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
Viral News: ರಸ್ತೆ ಮಧ್ಯೆ ಅಡ್ಡ ನಿಂತ ಆನೆ; ಆ್ಯಂಬುಲೆನ್ಸ್ನಲ್ಲೇ ಗರ್ಭಿಣಿಗೆ ಹೆರಿಗೆ!