ಆಯತಪ್ಪಿ 40 ಅಡಿ ಬಾವಿಗೆ ಬಿದ್ದ ರಾಷ್ಟ್ರ ಪಕ್ಷಿ ನವಿಲು: ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ

ಆಯತಪ್ಪಿ 40 ಅಡಿ ಬಾವಿಗೆ ಬಿದ್ದ ರಾಷ್ಟ್ರ ಪಕ್ಷಿ ನವಿಲು: ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ
ಆಯತಪ್ಪಿ 40 ಅಡಿ ಬಾವಿಗೆ ಬಿದ್ದ ರಾಷ್ಟ್ರ ಪಕ್ಷಿ ನವಿಲು: ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ

ಮನೆ ಬಳಿ ಹಾಕಿರುವ ತಂತಿ ಬೇಲಿ ಮುಟ್ಟಿ ವಿದ್ಯುತ್ ಶಾಕ್ ಹೊಡೆದು ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 29, 2022 | 5:58 PM

ವಿಜಯಪುರ: ಇಂಡಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಹೊರ ಭಾಗದದಲ್ಲಿ ಆಯತಪ್ಪಿ 40 ಅಡಿ ಬಾವಿಯಲ್ಲಿ ಬಿದ್ದಿದ್ದ ರಾಷ್ಟ್ರ ಪಕ್ಷಿ ನವಿಲು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಬಾವಿಯಲ್ಲಿ ಬಿದ್ದಿದ್ದು, ಸುಭಾಸ ಬನಸೋಡೆ ಎನ್ನುವವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನವಿಲನ್ನು ಹೊರ ತೆಗೆಯಲು ಸ್ಥಳಿಯರು ನಡೆಸಿದ ಪ್ರಯತ್ನ ವಿಫಲವಾಗಿತ್ತು. ನೀರಿದ್ದ ಬಾವಿಯ ಕಲ್ಲು ಚಪ್ಪಡಿ ಮೇಲೆ ನವಿಲು ಠಿಕಾಣಿ ಹುಡಿದ್ದು, ಸ್ಥಳಕ್ಕೆ ಆಗಮಿಸಿದ ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ, 40 ಅಡಿ ಬಾವಿಯಲ್ಲಿ ಹಗ್ಗ ಕಟ್ಟಿಕೊಂಡು ಅಗ್ನಿಶಾಮಕ ದಳ ಸಿಬ್ಬಂದಿ ಶಾಂತಪ್ಪ ಬಿರಾದಾರ ನವಿಲನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಾದ ಸುರೇಶ್ ವೇದಪಾಠಕ್, ಸಿದ್ದರಾಯ ಪಾರ್ಥನಳ್ಳಿ ಕಲ್ಯಾಣಕುಮಾರ ಭಜಂತ್ರಿ ಹಾಗೂ ಶರಣಬಸು ಬಾಗೇವಾಡಿ ಸಾಥ್ ನೀಡಿದ್ದು, ರಾಷ್ಟ್ರಪಕ್ಷಿಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿದ್ಯುತ್ ಶಾಕ್ ಹೊಡೆದು ಮೂರು ವರ್ಷದ ಬಾಲಕಿ ಸಾವು:

ಶಿವಮೊಗ್ಗ: ಮನೆ ಬಳಿ ಹಾಕಿರುವ ತಂತಿ ಬೇಲಿ ಮುಟ್ಟಿ ವಿದ್ಯುತ್ ಶಾಕ್ ಹೊಡೆದು ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಇಂಚರ ಮೃತ ಬಾಲಕಿ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿತ್ತು. ಈ ಕೇಬಲ್​​ನಲ್ಲಿ ವಿದ್ಯುತ್ ಹರಿದ ಹಿನ್ನಲೆಯಲ್ಲಿ ಅವಘಡ ಸಂಭವಿಸಿದೆ. ಮನೆಗೆ ಕೇಬಲ್ ಹಾಕಿದ ಆಪರೇಟರ್ ವಿರುದ್ದ ಮೃತ ಕುಟುಂಬಸ್ಥರ ಆಕ್ರೋಶ ವ್ಯಕ್ತ ಪಡಿಸಿದ್ದು, ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಎರಡು ಕಾರುಗಳ ನಡುವೆ ಡಿಕ್ಕಿ. ಸ್ಥಳದಲ್ಲೇ ನಾಲ್ವರ ಸಾವು:

ಹಾವೇರಿ: ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ನಾಲ್ವರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ರಾಣೆಬೆನ್ನೂರು ಹೊರವಲಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಗುಜರಾತ್‌ ಮೂಲದ ಕಾರಿನಲ್ಲಿದ್ದ‌ ಮೂವರು ಹಾಗೂ ಕೇರಳ ಮೂಲದ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಣೆಬೆನ್ನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ₹ 1.27000 ಸಾವಿರ ಮೌಲ್ಯದ ಗೋವಾ ಮದ್ಯ ಸಾಗಾಟ: ಇಬ್ಬರ ಬಂಧನ:

ಕಾರವಾರ: ಸಾಗರ-ಪಣಜಿ ಕೆ.ಎಸ್.ಆರ್.ಟಿ.ಸಿ ಬಸ್​ನಲ್ಲಿ ₹ 1.27000 ಸಾವಿರ ಮೌಲ್ಯದ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಕಾರವಾರ ತಾಲೂಕಿನ ಮಾಜಾಳಿ ಚಕ್ ಪೋಸ್ಟ್​ನಲ್ಲಿ ಬಂಧನ ಮಾಡಲಾಗಿದೆ. ಶಿವಮೊಗ್ಗ ಮೂಲದ ನಾಗರಾಜ (35), ಸಾಗರ್ (25) ಬಂಧಿತ ಆರೋಪಿಗಳು. ಚಿತ್ತಾಕುಲ ಪೊಲೀಸರು ಹಾಗೂ ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಗೋವಾದಿಂದ ಶಿವಮೊಗ್ಗಕ್ಕೆ ಬ್ಯಾಗ್​ನಲ್ಲಿ ತುಂಬಿಕೊಂಡು ಬಸ್​ನಲ್ಲಿ ಆರೋಪಿಗಳು ತೆರಳುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಗಾಳಿ ಮಳೆಗೆ ನೆಲ ಕಚ್ಚಿದ ಭತ್ತ:

ಕೊಪ್ಪಳ: ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಕಟಾವಿಗೆ ಬಂದ ಭತ್ತ ನೆಲಕಚ್ಚಿದ್ದು, ರೈತರು ಕಂಗಾಲಾಗಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಹಾಗೂ ಗಂಗಾವತಿ ತಾಲೂಕಿನನಾದ್ಯಂತವಾಗಿದೆ. ಭತ್ತದ ಗದ್ದೆಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಭತ್ತ ಬೆಳೆ ನಾಶದಿಂದ ಕಂಗಾಲಾದ ರೈತರೊಂದಿಗೆ ಹಾನಿ ಬಗ್ಗೆ ಚರ್ಚೆ ಮಾಡಿದರು. ಪ್ರತಿ ಹೆಕ್ಟೇರ್​ಗೆ 40 ರಿಂದ 50 ಸಾವಿರ ಬೆಳೆ ನಾಶವನ್ನು ಶಿಘ್ರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಶಿಘ್ರ ಸರ್ವೆ ಕಾರ್ಯ ಆರಂಭಿಸಿ, ರೈತರಿಗೆ ನೆರವಾಗುವಂತೆ ತಂಗಡಗಿ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:

ಕೊರೊನಾ ವೈರಸ್ ಪುನರಾವರ್ತಿಸದಂತೆ ತಡೆಯಬಲ್ಲದು ಅಸ್ತಮಾ ಔಷಧ: ಬೆಂಗಳೂರಿನ ಐಐಎಸ್​ಸಿ ಅಧ್ಯಯನ ವರದಿ

Follow us on

Related Stories

Most Read Stories

Click on your DTH Provider to Add TV9 Kannada