ಬೇಲೂರು ರಥೋತ್ಸವಕ್ಕೂ ಕುರಾನ್​ಗೂ ಏನು ಸಂಬಂಧ? ಕುರಾನ್ ಪಠಿಸಲು ಅವಕಾಶ ಕೊಟ್ಟರೆ ಪ್ರತಿಭಟಿಸ್ತೇವೆ -ಪ್ರಮೋದ್ ಮುತಾಲಿಕ್

Pramod Muthalik: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ನೂರು ಮೀಟರ್ ಅಂತರದಲ್ಲಿ ಹಿಂದುಯೇತರರ ಅಂಗಡಿಗಳಿಗೆ ಅವಕಾಶ ಕೊಡಬಾರದು ಅಂತ ಕಾನೂನಿದೆ. ಆದರೆ ಬೇಲೂರು ಶ್ರೀಚನ್ನಕೇಶವ ದೇವಾಲಯದ ಮುಂದೆ ಒಬ್ಬ ಮುಸಲ್ಮಾನನ ಅಂಗಡಿ ಇದೆ. ನೀವು ನೋಟಿಸ್ ನೀಡಿದಿರಾ? ಆತ ಇನ್ನೂ ಅಂಗಡಿ ಖಾಲಿ ಮಾಡಿಲ್ಲ. ಇನ್ನೊಂದು ವಾರದೊಳಗೆ ಆ ಅಂಗಡಿ ಖಾಲಿ ಮಾಡಿಸಬೇಕು - ಮೋದ್ ಮುತಾಲಿಕ್ ಎಚ್ಚರಿಕೆ

ಬೇಲೂರು ರಥೋತ್ಸವಕ್ಕೂ ಕುರಾನ್​ಗೂ ಏನು ಸಂಬಂಧ? ಕುರಾನ್ ಪಠಿಸಲು ಅವಕಾಶ ಕೊಟ್ಟರೆ ಪ್ರತಿಭಟಿಸ್ತೇವೆ -ಪ್ರಮೋದ್ ಮುತಾಲಿಕ್
ಬೇಲೂರು ರಥೋತ್ಸವಕ್ಕೂ ಕುರಾನ್​ಗೂ ಏನು ಸಂಬಂಧ? ಕುರಾನ್ ಪಠಿಸಲು ಅವಕಾಶ ನೀಡಿದರೆ ಪ್ರತಿಭಟನೆ ಮಾಡ್ತೇವೆ -ಪ್ರಮೋದ್ ಮುತಾಲಿಕ್
Follow us
| Updated By: ಸಾಧು ಶ್ರೀನಾಥ್​

Updated on:Apr 29, 2022 | 7:42 PM

ಹಾಸನ: ಬೇಲೂರು ರಥೋತ್ಸವಕ್ಕೂ ಕುರಾನ್​ಗೂ ಏನು ಸಂಬಂಧ? ಮುಂದಿನ ವರ್ಷ ಕುರಾನ್ ಪಠಿಸಲು (Quran recitation) ಅವಕಾಶ ನೀಡಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಬೇಲೂರಿನಲ್ಲಿ(Belur Chennakeshava Temple) ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Sri Ram Sene chief Pramod Muthalik) ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಹಿಜಾಬ್, ಲವ್ ಜಿಹಾದ್, ಅಂಗಡಿ ವ್ಯಾಪಾರ ಬಹಿಷ್ಕಾರ ಸಂಘರ್ಷಗಳು ರಾಜ್ಯದಲ್ಲಿ ಮೂಮದುವರಿದಿವೆ.

ಬೇಲೂರು ರಥೋತ್ಸವಕ್ಕು ಕುರಾನ್‌ಗು ಏನ್ ಸಂಬಂಧ? ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ… ಮುಂದಿನ ವರ್ಷ ಖುರಾನ್ ಪಠಣ ಮಾಡಲು ಹೋದರೆ ಶ್ರೀರಾಮಸೇನೆಯಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈ ವರ್ಷ ಶ್ರೀರಾಮಸೇನೆ ಸಂಘಟನೆ ಬೇಲೂರಿನಲ್ಲಿ ಇರಲಿಲ್ಲ. ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ‌ ಮಾಡಿ ನೋಡೋಣ. ಕೂಡಲೇ ಇದನ್ನು ವಾಪಾಸ್ ಪಡೆಯಬೇಕು. ಇಲ್ಲವಾದರೆ ಸಂಘರ್ಷ, ಗಲಾಟೆ, ಗಲಭೆಗಳು ಆಗ್ತವೆ. ಬೆಂಕಿ ಹತ್ಕೊಳುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ನೂರು ಮೀಟರ್ ಅಂತರದಲ್ಲಿ ಹಿಂದುಯೇತರರ ಅಂಗಡಿಗಳಿಗೆ ಅವಕಾಶ ಕೊಡಬಾರದು ಅಂತ ಕಾನೂನಿದೆ. ಆದರೆ ಬೇಲೂರು ಶ್ರೀಚನ್ನಕೇಶವ ದೇವಾಲಯದ ಮುಂದೆ ಒಬ್ಬ ಮುಸಲ್ಮಾನನ ಅಂಗಡಿ ಇದೆ. ನೀವು ನೋಟಿಸ್ ನೀಡಿದಿರಾ? ಆತ ಇನ್ನೂ ಅಂಗಡಿ ಖಾಲಿ ಮಾಡಿಲ್ಲ. ಇನ್ನೊಂದು ವಾರದೊಳಗೆ ಆ ಅಂಗಡಿ ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಖಾಲಿ ಮಾಡಿಸಲು ನಾನೇ ಬರ್ತಿನಿ. ಆಗ ಗಲಾಟೆ ಆಯ್ತು, ಘರ್ಷಣೆ ಆಯ್ತು ಅಂದರೆ ನಾನು ಕೇಳೊಲ್ಲ. ಮಸೀದಿ ಒಳಗೆ ನಮಗೆ ಪ್ರವೇಶ ಕೊಡ್ತರಾ? ಆವರಣದಲ್ಲಿ ವ್ಯಾಪಾರ ಮಾಡಲು ಬಿಡ್ತರಾ? ಶ್ರೀಚನ್ನಕೇಶವ ದೇವಾಲಯದ ಆಡಳಿತಾಧಿಕಾರಿ ಅವರೇ ಕಾನೂನನ್ನು ಪಾಲನೆ ಮಾಡಿ ಎಂದು ಶ್ರೀರಾಮಸೇನೆ ಬೇಲೂರು ತಾಲ್ಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Also Read: Acid Attack: ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ -ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?

Also Read: JDS ಅಧಿಕಾರಕ್ಕೆ ಬಾರದಿದ್ದರೆ ವಿಸರ್ಜನೆ ಮಾಡುವ ಮಾತನ್ನು ಒತ್ತಿ ಒತ್ತಿ ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

Published On - 7:36 pm, Fri, 29 April 22