ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಸಂತ್ರಸ್ತ ಯುವತಿ ಸ್ಥಿತಿ ಚಿಂತಾಜನಕ

ಯುವತಿ ಬೆನ್ನು, ಎದೆ, ತಲೆ ಹಿಂಭಾಗ ಸುಟ್ಟಿದೆ. ಇನ್ನು ಸಂತ್ರಸ್ತ ಯುವತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಸಂತ್ರಸ್ತ ಯುವತಿ ಸ್ಥಿತಿ ಚಿಂತಾಜನಕ
ಸಂತ್ರಸ್ತ ಯುವತಿ
Follow us
TV9 Web
| Updated By: sandhya thejappa

Updated on:Apr 30, 2022 | 2:33 PM

ಬೆಂಗಳೂರು: ಪ್ರೀತಿ (Love) ಮಾಡುವಂತೆ ಪೀಡಿಸಿ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ (Acid) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆ್ಯಸಿಡ್ ದಾಳಿಗೊಳಗಾದ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಯುವತಿ ದೇಹದ ಭಾಗ ಶೇ.50ಕ್ಕಿಂತಲೂ ಹೆಚ್ಚು ಸುಟ್ಟಿದೆ. ಯುವತಿ ಬೆನ್ನು, ಎದೆ, ತಲೆ ಹಿಂಭಾಗ ಸುಟ್ಟಿದೆ. ಇನ್ನು ಸಂತ್ರಸ್ತ ಯುವತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಆರೋಪಿ ನಾಗೇಶ್​ಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಸಂಬಂಧಿಕರು, ಸ್ನೇಹಿತರನ್ನ ಠಾಣೆಗೆ ಕರೆತಂದು ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಕೃತ್ಯ ನಡೆದು‌ 48 ಗಂಟೆಯಾದರೂ ಆರೋಪಿ ಸುಳಿವು ಸಿಕ್ಕಿಲ್ಲ. ನಾಗೇಶ್ ಎಲ್ಲಿದ್ದಾನೆ? ಏನ್ ಮಾಡ್ತಿದ್ದಾನೆ ಎಂದು ಸುಳಿವು ಕೂಡ ಇಲ್ಲ. ಆರೋಪಿ ಪತ್ತೆಗಾಗಿ 5 ತಂಡಗಳಿಂದ ಶೋಧ ಮುಂದುವರಿದಿದೆ. ಒಂದು ಕಡೆ ಆರೋಪಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಯುತ್ತಿದೆ. ಇನ್ನೊಂದೆಡೆ ಪೊಲೀಸರು ಬಲವಾದ ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ. ಮ್ಯಾಜಿಸ್ಟ್ರೇಟ್​ನಿಂದ ಸಂತ್ರಸ್ತೆಯ ಹೇಳಿಕೆ ಪಡೆದಿದ್ದಾರೆ. ಡೈಯಿಂಗ್ ಡಿಕ್ಲರೇಷನ್ ದಾಖಲು ಮಾಡಿಕೊಳ್ಳಲು ಹೇಳಿಕೆಗಳನ್ನ ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿ‌ ಸಾಯುವ ಮುನ್ನ ತನ್ನ ಸಾವಿಗೆ ಕಾರಣ ತಿಳಿಸುವುದಕ್ಕೆ ಡೈಯಿಂಗ್ ಡಿಕ್ಲರೇಷನ್ ಸ್ಟೇಟ್​ಮೆಂಟ್ ಎನ್ನಲಾಗುತ್ತೆ. ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ 32(1)ಅಡಿ ಹೇಳಿಕೆ ದಾಖಲು ಮಾಡಲಾಗುತ್ತದೆ. ಬಲವಾದ ಸಾಕ್ಷ್ಯವಾಗಿ ಆರೋಪಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ. ಪೊಲೀಸರ ಎದುರು ಯುವತಿ ನೀಡಿದ ಸ್ಟೇಟ್​ಮೆಂಟ್​ಗಿಂತಲೂ ಮುಖ್ಯವಾಗಲಿದೆ.

ಮ್ಯಾಜಿಸ್ಟ್ರೇಟ್​ಗೆ ನೀಡಿದ್ದ ಹೇಳಿಕೆ ಟಿವಿ9ಗೆ ಲಭ್ಯ:

ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್​ಗೆ ನೀಡಿದ್ದ ಹೇಳಿಕೆ ಟಿವಿ9ಗೆ ಲಭ್ಯವಾಗಿದೆ. ಮುತ್ತೂಟ್ ಮಿನಿ‌ ಫೈನಾನ್ಸ್​​​​ ಕಂಪನಿಯಲ್ಲಿ ಕೆಲಸ ಮಾಡ್ತಿರುವೆ. ತಂದೆ, ತಾಯಿ ಮನೆ ಬಳಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ. ತಂದೆ, ತಾಯಿಗೆ ನಾನು ಸೇರಿ ಮೂವರು ಮಕ್ಕಳು ಇದ್ದೇವೆ. ನನ್ನ ಅಕ್ಕ ಸಾಫ್ಟ್​​ವೇರ್​ ಇಂಜಿನಿಯರ್ ಆಗಿದ್ದಾಳೆ. ನಾನು ಮಧ್ಯದವಳು, ಕೊನೆಯವನು ನನ್ನ ತಮ್ಮ. ಏಪ್ರಿಲ್‌ 28ರಂದು ಬೆಳಗ್ಗೆ 8.30ಕ್ಕೆ ನಾನು ಕೆಲಸಕ್ಕೆ ಬಂದಿದ್ದೆ. ತಂದೆ ಕಚೇರಿವರೆಗೆ ಬಂದು ಬೈಕ್​ನಲ್ಲಿ ನನ್ನ ಡ್ರಾಪ್ ನೀಡಿದ್ರು.  ನಾನು ಮೊದಲನೇ ಮಹಡಿಯಲ್ಲಿರುವ ಕಚೇರಿಗೆ ಹೋದೆ. ಕಚೇರಿಗೆ ಇನ್ನೂ ಸಿಬ್ಬಂದಿ ಬಾರದಿದ್ದಕ್ಕೆ ಹೊರಬಂದು ನಿಂತಿದ್ದೆ. ಕಚೇರಿ ಬಾಗಿಲು ಬಳಿ ನಿಂತುಕೊಂಡಿದ್ದಾಗ ನಾಗೇಶ್ ಬಂದ ಎಂದು ತಿಳಿಸಿದ್ದಾರೆ.

ನಾಗೇಶ್​ ನಮ್ಮ ದೊಡ್ಮಮನ ಮನೆಯಲ್ಲಿ ಬಾಡಿಗೆಗೆ ಇದ್ದ. 7 ವರ್ಷದ ಹಿಂದೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ನಾನು ಪ್ರೀತಿ ಮಾಡಲ್ಲ ಎಂದಾಗ ಆತ ಸುಮ್ಮನೆ ಆಗಿದ್ದ. ಈಗ ಮತ್ತೆ 1 ವಾರದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಏ.27ರಂದು 9 ಗಂಟೆಗೆ ನನ್ನನ್ನು ನಾಗೇಶ್ ಭೇಟಿ ಮಾಡಿದ್ದ. ನಾನು ಕೆಲಸ ಮಾಡುವ ಕಚೇರಿಗೆ ನಾಗೇಶ್ ಬಂದಿದ್ದ. ನೀನು ನನ್ನನ್ನು ಪ್ರೀತಿಸಿ ಮದುವೆಯಾಗಬೇಕು ಎಂದ. ಇಲ್ಲದಿದ್ರೆ ಯಾರಿಗೂ ಸಿಗದಂತೆ ಮಾಡ್ತೀನಿ ಎಂದು ಧಮ್ಕಿ ಹಾಕಿದ್ದ. ನಂತರ ನಮ್ಮ ಕಚೇರಿ ಮ್ಯಾನೇಜರ್​ಗೂ ಧಮ್ಕಿ ಹಾಕಿದ್ದ. ಅವಳಿಗೆ ಏನು ಮಾಡ್ತೀನಿ ನೋಡ್ತಿರಿ ಎಂದು ಹೇಳಿ ಹೋಗಿದ್ದ. ಈ ವಿಚಾರವನ್ನು ಅಂದೇ ನನ್ನ ದೊಡ್ಡಮ್ಮನಿಗೂ ತಿಳಿಸಿದ್ದೆ. ದೊಡ್ಡಮ್ಮ ಕರೆ ಮಾಡಿ ನಾಗೇಶ್​​​​​ ಅಣ್ಣನಿಗೂ ವಿಚಾರ ಹೇಳಿದ್ರು. ನಾಗೇಶ್​ಗೆ ಅಣ್ಣ ಬುದ್ಧಿವಾದ ಹೇಳೋದಾಗಿ ಹೇಳಿದ್ರು. ಆದರೆ ಏಪ್ರಿಲ್ 28ರಂದು ನನ್ನನ್ನು ಅಡ್ಡಗಟ್ಟಿ ಌಸಿಡ್ ದಾಳಿ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ ಅಂತ ಯುವತಿ ಮಾಹಿತಿ ನೀಡಿದ್ದಾಳೆ.

ತಮಿಳುನಾಡಿನತ್ತ ಪರಾರಿಯಾಗಿರುವ ಶಂಕೆ: ಆರೋಪಿ ಬೆಂಗಳೂರಿಂದ ತಮಿಳುನಾಡಿನತ್ತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತಂಡ ಆರೋಪಿ ಹೆಜ್ಜೆ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಆರೋಪಿ ತಮಿಳುನಾಡಿಗೆ ತೆರಳಿದ್ದಾಗಿ  ಪೊಲೀಸರು ಹೇಳಿದ್ದಾರೆ.

ಯುವತಿಯ ಆರೋಗ್ಯವನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿಚಾರಿಸಿದರು. ನಂತರ ಮಾತನಾಡಿದ ಅವರು, ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ.  ಎಲ್ಲ ರೀತಿಯ ಚಿಕಿತ್ಸೆ ವೆಚ್ಚ ಭರಿಸುತ್ತೆ. ಪ್ರಕರಣ ಎಲ್ಲ ಮಾಹಿತಿ ಪಡೆದಿದ್ದೇನೆ. ಸರ್ಕಾರವೇ ಎಲ್ಲ ವೆಚ್ಚವನ್ನು ಭರಿಸುತ್ತೆ. ವೈಯಕ್ತಿಕವಾಗಿ 5 ಲಕ್ಷ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಆ್ಯಸಿಡ್ ಎರಚಿದ ಬಳಿಕ ತನ್ನ ಅಣ್ಣನಿಗೆ ಕರೆ ಮಾಡಿದ್ದ ನಾಗೇಶ್: ಆರೋಪಿ ನಾಗೇಶ್​​ನ ಅಣ್ಣನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆ್ಯಸಿಡ್ ಎರಚಿದ ಬಳಿಕ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಕರೆ ಮಾಡಿದ್ದ. ಆಕೆಯ ಮೇಲೆ ಆ್ಯಸಿಡ್ ಹಾಕಿದ್ದೀನಿ ಎಂದಿದ್ದ. ಅಜ್ಞಾತ ಸ್ಥಳದಲ್ಲಿ ಪೊಲೀಸರು ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆತಂಕಗೊಂಡು ನಾಗೇಶ್​ ಪರಾರಿಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಹೇಳಿಕೆ ನೀಡಿರುವ ನಾಗೇಶ್ ಅಣ್ಣ, ಯುವತಿ ಮೇಲೆ ಆ್ಯಸಿಡ್ ಹಾಕಿದ ಬಗ್ಗೆ ಕರೆ ಮಾಡಿ ಹೇಳಿದ. ಕೂಡಲೇ ನಾವು ಭಯಭೀತರಾಗಿ ಮನೆಬಿಟ್ಟು ಓಡಿ ಹೋದೆವು ಅಂತ ತಿಳಿಸಿದ್ದಾರೆ.

ಯುವತಿ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?: ಸೆಂಟ್ ಜಾನ್ಸ್ ವೈದ್ಯ ಅರವಿಂದ್ ಕಸ್ತೂರಿ ಮಾತನಾಡಿ ಯುವತಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಯುವತಿ 3 ದಿನಗಳ ಹಿಂದೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಶೇಕಾಡ 35 ರಷ್ಟು ದೇಹದ ಹಲವು ಭಾಗಗಳು ಸುಟ್ಟಿದೆ. ಸರಿ ಸುಮಾರು ಚಿಕಿತ್ಸೆ 2 ತಿಂಗಳು ನಡೆಯ ಬೇಕಾಗುತ್ತದೆ. ಸ್ಕಿನ್ ಬ್ಯಾಂಕ್​‌ನಿಂದ ಸ್ಕಿನ್ ತರಿಸಿ ಸರ್ಜರಿ ನಡೆಸಬೇಕಿದೆ. ಸಾಕಷ್ಟು ಸರ್ಜರಿಗಳ ಅಗತ್ಯವಿದೆ. ಆಸಿಡ್ ದಾಳಿ ಆಗಿರುವುದರಿಂದ ದೇಹದಲ್ಲಿ ಡೀಪ್ ಗಾಯಗಳಾಗಿದೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆಕೆಗೆ ಕಾನ್ಶಿಯಸ್ ಇದೆ. ವೈದ್ಯರ ತಂಡ ನಿರಂತರವಾಗಿ ಯುವತಿಯ ಚಿಕಿತ್ಸೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದರು.

ಇದನ್ನೂ ಓದಿ

ಪುಣೆಗೆ ಪೊಲೀಸರು ಬಂದಿದ್ದಾರೆಂದು ತಿಳಿದಾದ ಸಾಕ್ಷ್ಯ ನಾಶಮಾಡಲು ದಿವ್ಯಾ ಹಾಗರಗಿ ತನ್ನ ಮೊಬೈಲ್​ನ ಏನು ಮಾಡಿದ್ದರು ಗೊತ್ತಾ?

ಪಕ್ಷಗಳು ಚುನಾವಣಾ ತಯಾರಿ ಮಾಡಿಕೊಳ್ಳುವಾಗಲೇ ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ!

Published On - 7:53 am, Sat, 30 April 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ