ಪುಣೆಗೆ ಪೊಲೀಸರು ಬಂದಿದ್ದಾರೆಂದು ತಿಳಿದಾದ ಸಾಕ್ಷ್ಯ ನಾಶಮಾಡಲು ದಿವ್ಯಾ ಹಾಗರಗಿ ತನ್ನ ಮೊಬೈಲ್ನ ಏನು ಮಾಡಿದ್ದರು ಗೊತ್ತಾ?
ಉಳಿದ ಐವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಮೊಬೈಲ್ನಲ್ಲಿ ಏನಾದ್ರೂ ಇದೆಯಾ ಎಂದು ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ 6 ಆರೋಪಿಗಳು ಮೊಬೈಲ್ನಲ್ಲಿರುವ ಡಾಟಾವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ನಿನ್ನೆ (ಏಪ್ರಿಲ್ 29) ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು (Divya Hagargi) ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗಿದ್ದರು. ಪೊಲೀಸರು ಬಂದಿದ್ದಾರೆಂದು ತಿಳಿದಾಗ ದಿವ್ಯಾ ಮೊಬೈಲ್ ಒಡೆದು ಹಾಕಿದ್ದರಂತೆ. ಈ ಮೂಲಕ ಮೊಬೈಲ್ನಲ್ಲಿರುವ ಸಾಕ್ಷ್ಯ ನಾಶಮಾಡಲು ಯತ್ನಿಸಿದ್ದಾರೆ. ಒಡೆದುಹಾಕಿದ್ದ ಮೊಬೈಲ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಐವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಮೊಬೈಲ್ನಲ್ಲಿ ಏನಾದ್ರೂ ಇದೆಯಾ ಎಂದು ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ 6 ಆರೋಪಿಗಳು ಮೊಬೈಲ್ನಲ್ಲಿರುವ ಡಾಟಾವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತಡರಾತ್ರಿವರೆಗೂ ಪರದಾಡಿದ ದಿವ್ಯಾ: ಇನ್ನು ಬಂಧನಕ್ಕೊಳಗಾಗಿರುವ ದಿವ್ಯಾ ಕಲಬುರಗಿಯ ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ತಡರಾತ್ರಿವರೆಗೂ ಪರದಾಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಿದ್ದೆ ಬಾರದೆ ಒದ್ದಾಡಿದ್ದಾರೆ. ಎಸಿ ರೂಮ್ನಲ್ಲಿ ಮಲಗುತ್ತಿದ್ದ ದಿವ್ಯಾ ಫ್ಯಾನ್ ಕೆಳಗೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಮಧ್ಯಾಹ್ನ ಊಟ ನಿರಾಕರಿಸಿದ್ದರು. ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಸ್ವಲ್ಪ ಊಟ ಮಾಡಿದ್ದರು. ಕೋಟಿ ಕೋಟಿ ಸಂಪತ್ತಿದ್ದರೂ ಅಕ್ರಮ ಜಾಲದಲ್ಲಿ ಸಿಲುಕಿ ಪಶ್ಚಾತ್ತಾಪ ಪಡುವಂತಾಗಿದೆ. ತನ್ನನ್ನು ಭೇಟಿಯಾದವರ ಬಳಿ ಪಶ್ಚಾತ್ತಾಪದ ಮಾತಾಡಿದ್ದಾರೆ.
ಇಬ್ಬರು ಕಿಂಗ್ಪಿನ್ಗಳ ನಡುವೆ ದ್ವೇಷ: ಪಿಎಸ್ಐ ಪರೀಕ್ಷೆ ಮುಗಿಯುತ್ತಿದ್ದಂತೆ ಇಬ್ಬರು ಕಿಂಗ್ಪಿನ್ಗಳ ನಡುವೆ ದ್ವೇಷ ಪ್ರಾರಂಭವಾಗಿದೆ. ಹಣಕಾಸಿನ ವಿಚಾರ, ವೈಯಕ್ತಿಕ ಬೆಳವಣಿಗೆಗೆ ದ್ವೇಷ ಹುಟ್ಟಿಕೊಂಡಿದೆ. ಕಿಂಗ್ಪಿನ್ ರುದ್ರಗೌಡ ಪಾಟೀಲ್ ಮತ್ತು ಮಂಜುನಾಥ ಮೇಳಕುಂದಿ ನಡುವೆ ವೈಮನಸ್ಸು ಶುರುವಾಗಿದೆ. ಮಂಜುನಾಥ ಮೇಳಕುಂದಿ ಕಲಬುರಗಿ ನೀರಾವರಿ ಇಲಾಖೆಯಲ್ಲಿ ಎಇ ಆಗಿದ್ದಾನೆ. ಮಂಜುನಾಥ ಮೇಳಕುಂದಿ ವಿರುದ್ಧವೇ ರುದ್ರಗೌಡ ಪಾಟೀಲ್ ದೂರು ನೀಡಿದ್ದ. ನೀರಾವರಿ ಇಲಾಖೆ ಮುಖ್ಯ ಇಂಜನೀಯರ್ಗೆ ದೂರು ನೀಡಿದ್ದ. ಲೋಕೋಪಯೋಗಿ ಇಲಾಖೆ ಪರೀಕ್ಷೆಯ ಅಕ್ರಮದಲ್ಲಿ ಮಂಜುನಾಥ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಂದು ದಿನ ಜೈಲಲ್ಲಿದ್ದು ಬಂದಿದ್ದಾನೆ. ಹೀಗಾಗಿ ಆತನನ್ನು ಅಮಾನತ್ತು ಮಾಡಬೇಕು ಅಂತ ರುದ್ರಗೌಡ ಪಾಟೀಲ್ ಮನವಿ ಮಾಡಿದ್ದ. ದೂರಿನ ಹಿನ್ನೆಲೆ ಮಂಜುನಾಥ ಮೇಳಕುಂದಿಗೆ ಹಿರಿಯ ಅಧಿಕಾರಿ ನೋಟಿಸ್ ನೀಡಿದ್ದರು.
ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಧಾನಿ ಕಚೇರಿಗೆ ದೂರು ನೀಡಿದ ಬಿಜೆಪಿ ನಾಯಕನ ಆಪ್ತ: ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕನ ಆಪ್ತ ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ಸರ್ಕಾರದ ವಿರುದ್ಧ ಪ್ರಧಾನಿ ಕಚೇರಿಗೆ ದೂರು ತಪುಲಿದೆ. ರಾಜ್ಯ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಪೊಲೀಸ್ ಇಲಾಖೆ ಅಲ್ಲದೆ ಬೇರೆ ಇಲಾಖೆಯಲ್ಲೂ ಅಕ್ರಮ ನಡೆದಿದೆ.ಪಿಎಸ್ಐ ಪರೀಕ್ಷೆ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಜೆಪಿ ಮುಖಂಡ ಮನವಿ ಮಾಡಿದ್ದಾರೆ. ವಿಜಯಪುರ ನಗರ ಶಾಸಕ ಯತ್ನಾಳ್ ಪರಮಾಪ್ತ ರಾಘವ್ ಅಣ್ಣಿಗೇರಿಯಿಂದ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ.
ಕಳೆದ ವಾರವಷ್ಟೇ ಈ ಪ್ರಕರಣದ ಆರೋಪಿ ದಿವ್ಯಾ ಅವರಿಗೆ ಮಾಜಿ ಸಿಎಂ ಬೆಂಬಲ ಇದೆ ಎಂದು ಯತ್ನಾಳ್ ಆರೋಪಿಸಿದ್ದರು. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಟ್ಟಾ ಆಪ್ತರಿಂದಲೇ ಪ್ರಧಾನಿ ಕಚೇರಿಗೆ ದೂರು ಹೋಗಿದೆ. ಪರೋಕ್ಷವಾಗಿ ಪ್ರಕರಣದಲ್ಲಿ ಇನ್ನೂ ದೊಡ್ಡವರ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.
ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದ್ದು, ಜನರು ರೋಸಿ ಹೋಗಿದ್ದಾರೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಹೀಗಾಗಿ ಇವುಗಳ ಬಗ್ಗೆಯೂ ತನಿಖೆ ಮಾಡಬೇಕು. ಸಿಐಡಿ ತನಿಖೆಯಿಂದ ಪ್ರಕರಣದ ಪ್ರಮುಖ ಆರೋಪಿಯನ್ನು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐಗೆ ನೀಡಿ ಅಂತ ರಾಘವ್ ಅಣ್ಣಿಗೇರಿ ಪ್ರಧಾನಿ ಕಚೇರಿಗೆ ಆನಲೈನ್ ಮೂಲಕ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ
Health Tips: ಖರ್ಜೂರ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ತಿಳಿಯಿರಿ; ಇಲ್ಲಿದೆ ಮಾಹಿತಿ
Poco M4 5G: ಪೋಕೋದಿಂದ ಬಜೆಟ್ ಬೆಲೆಗೆ ಆಕರ್ಷಕ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ಇಲ್ಲಿದೆ ನೋಡಿ
Published On - 7:26 am, Sat, 30 April 22