ಬೆಂಗಳೂರಿನಲ್ಲಿ ನಿಗೂಢವಾಗಿ ಕೊಲೆಯಾದ ಮಹಿಳಾ ಉದ್ಯಮಿ ಕೇಸ್; ಮರ್ಡರ್ ಮಾಹಿತಿ ಟಿವಿ9ಗೆ ಲಭ್ಯ

ಬೆಂಗಳೂರಿನಲ್ಲಿ ನಿಗೂಢವಾಗಿ ಕೊಲೆಯಾದ ಮಹಿಳಾ ಉದ್ಯಮಿ ಕೇಸ್; ಮರ್ಡರ್ ಮಾಹಿತಿ ಟಿವಿ9ಗೆ ಲಭ್ಯ
ಆರೋಪಿ ಕಿರಣ್, ಕೊಲೆಯಾದ ಉದ್ಯಮಿ ಸುನೀತಾ

ಮಾರ್ಚ್ 31 ರಂದು ಮಲ್ಲೇಶ್ವರ ನಿವಾಸದಿಂದ ಬ್ಯುಸಿನೆಸ್ ಮೀಟಿಂಗ್ ಅಂತ ಹೇಳಿ ಉದ್ಯಮಿ ಮಹಿಳೆ ಹೊರಟಿದ್ದರು. ನಾಲ್ಕು ದಿನದ ಬಳಿಕ ವರ್ತೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

TV9kannada Web Team

| Edited By: sandhya thejappa

Apr 30, 2022 | 8:44 AM

ಬೆಂಗಳೂರು: ಸದಾಶಿವನಗರದ ಇ-ಕಾಮರ್ಸ್ ಉದ್ಯಮಿ ಸುನೀತಾ(54) ನಿಗೂಢವಾಗಿ ಕೊಲೆಯಾದ (Murder) ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ವರ್ತೂರು ಪೊಲೀಸರು ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಕಿರಣ್​ನ ಬಂಧಿಸಿದ್ದಾರೆ. ಪರಿಚಿತರೆ ಮಹಿಳಾ ಉದ್ಯಮಿಯನ್ನು (Business Woman) ಹತ್ಯೆಗೈದಿರುವ ಬಗ್ಗೆ ಪೊಲೀಸರಿಗೆ ಅನುಮಾನ ಇತ್ತು. ಮಾರ್ಚ್ 31 ರಂದು ಮಲ್ಲೇಶ್ವರ ನಿವಾಸದಿಂದ ಬ್ಯುಸಿನೆಸ್ ಮೀಟಿಂಗ್ ಅಂತ ಹೇಳಿ ಉದ್ಯಮಿ ಮಹಿಳೆ ಹೊರಟಿದ್ದರು. ನಾಲ್ಕು ದಿನದ ಬಳಿಕ ವರ್ತೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹಲವು ಆಯಾಮಗಳಲ್ಲಿ ವರ್ತೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಇನ್ನು ಮಹಿಳಾ ಉದ್ಯಮಿ ಮಿಸ್ಸಿಂಗ್ ಕೇಸ್-ಮರ್ಡರ್ ಮಿಸ್ಟರಿ ಬಗ್ಗೆ ಟಿವಿ9​ಗೆ ಮಾಹಿತಿ ಲಭ್ಯವಾಗಿದೆ. ಸುನೀತಾ ಸದಾಶಿವನಗರದಲ್ಲಿ ತತ್ವ ವಂಶಿ ಇ- ಕಾಮರ್ಸ್ ಬ್ಯುಸಿನೆಸ್ ನಡೆಸುತ್ತಿದ್ದರು. ಉದ್ಯಮಿ ತೆರಳಿದ್ದ ಕಾರಿನ ಸಮೇತ ಕಿರಣ್ ನಾಪತ್ತೆಯಾಗಿದ್ದ. ಉದ್ಯಮಿ ಸುನೀತಾಗೆ ಆರು ತಿಂಗಳ ಹಿಂದೆ ಕಿರಣ್ ಪರಿಚಿತನಾಗಿದ್ದ. ಶ್ರೀಮಂತೆ ಸುನೀತಾ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿ ಕಿರಣ್, ಪರಿಚಿತನಾಗಿ ಕೊಲೆ ಮಾಡಿದ್ದಾನೆ.

ಕಿರಣ್ ಸೇರಿ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವರ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಮಾರ್ಚ್ 31 ರಂದು ವರ್ತೂರಿನ ಕಾಚರಕನಹಳ್ಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಸುನೀತಾ ಕಾಣೆಯಾಗಿ ನಾಲ್ಕು ದಿನದ ಬಳಿಕ ಸಂಬಂಧಿಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮೃತಪಟ್ಟ ಬಳಿಕ ನಾಲ್ಕು ದಿನಗಳವರೆಗೂ ಮೊಬೈಲ್ ರಿಂಗ್ ಆಗುತ್ತಿತ್ತು. ಸುನೀತಾ ಮೃತದೇಹದ ಬಳಿ ಸಿಕ್ಕ ಮೊಬೈಲ್ ಸುಳಿವು ನೀಡಿತ್ತು.

ಸುನೀತಾ ಮೊಬೈಲ್ ನಂಬರ್ ಪಡೆದು ಪತ್ತೆಗೆ ಮುಂದಾಗಿದ್ದ ಪೊಲೀಸರಿಗೆ ವರ್ತೂರಿನಲ್ಲಿ ಸುನೀತಾ ಮೃತದೇಹ ಸಿಕ್ಕಿತ್ತು. ನಂತರ ಟೆಕ್ನಿಕಲ್ ಅನಾಲಿಸಿಸ್ ಮಾಡಿ ಆರೋಪಿಗಳನ್ನ ಅಂದರ್ ಮಾಡಿದ್ದಾರೆ.

ಆರೋಪಿ ಕಿರಣ್​ನ ಮಗನಂತೆ ಎಂದು ಪುಸಲಾಯಿಸಿ ವಿಶ್ವಾಸ ಗಳಿಸಿದ್ದ. ನಂತರ ತಾಯಿ ವಾತ್ಸಲ್ಯ ತೋರಿದ್ದ ಸುನೀತಾರನ್ನು ಕೊಲೆ‌ಮಾಡಿ ಎಸ್ಕೇಪ್ ಆಗಿದ್ದ. ಹದಿನೈದು ಲಕ್ಷ ಹಣಕ್ಕಾಗಿ ಉದ್ಯಮಿಯನ್ನು ಕೊಂದೆ ಎಂದು ಹೇಳಿದ್ದಾನೆ. ಸುನೀತಾ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದರು. ವಿಕಲಚೇತನ ಸೋದರಿ ಸಂಬಂಧಿಯೊಂದಿಗೆ ಮಲ್ಲೇಶ್ವರದ ಮನೆಯಲ್ಲಿ ವಾಸವಿದ್ದರು. ಲಿಫ್ಟ್ ಸೌಲಭ್ಯವುಳ್ಳ ಬಾಡಿಗೆ ಮನೆಗಾಗಿ ಹುಡುಕಾಡುತ್ತಿದ್ದರು. ವರ್ತೂರಿನ ಕಾಚರಕನಹಳ್ಳಿಯಲ್ಲಿ ಮನೆ ಇದೆ ಎಂದು ಕರೆಸಿಕೊಂಡಿದ್ದ ಆರೋಪಿ ಕಿರಣ್ ಕೊಲೆ ಮಾಡಿದ್ದ.

ಮೊದಲನೆ ಬಾರಿ ಅಂದುಕೊಂಡಂತೆ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ. ಎರಡನೇ ಬಾರಿ ಮನೆ ತೋರಿಸಲು ಕಾಚರಕನಹಳ್ಳಿಗೆ ಕರೆಸಿಕೊಂಡಿದ್ದ. ಅದೇ ಮನೆಯಲ್ಲಿ ಇಮ್ರಾನ್ ಮತ್ತು ವೆಂಕಟೇಶ ಸೇರಿಸಿಕೊಂಡು ಮರ್ಡರ್ ಮಾಡಿದ್ದಾರೆ.

ಇದನ್ನೂ ಓದಿ

‘ಝೆಲೆನ್ಸ್ಕಿ ಮತ್ತು ಕುಟುಂಬವನ್ನು ಬಂಧಿಸಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು’; ಆಮೇಲೇನಾಯ್ತು ಎಂದು ವಿವರಿಸಿದ ಆಪ್ತರು

‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

Follow us on

Related Stories

Most Read Stories

Click on your DTH Provider to Add TV9 Kannada