Shocking News: ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ!

Viral News: ಮಹಾರಾಷ್ಟ್ರದ ಭಾಂದರದ ಮಸಲ್​ನಲ್ಲಿ ಗಂಡ ತನ್ನ ಮೊಬೈಲ್​ ಅನ್ನು ವಾಪಾಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ಆತನ ತುಟಿಯನ್ನೇ ಕತ್ತರಿಸಿದ್ದಾಳೆ!

Shocking News: ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ!
Instagram
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 16, 2021 | 8:19 PM

ಗಂಡ-ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂಬ ಮಾತೆಲ್ಲ ಹಳೆಯದಾಯ್ತು. ಈಗಂತೂ ಗೊರಕೆ ಹೊಡೆದಿದ್ದಕ್ಕೆ, ಕೆಮ್ಮಿದ್ದಕ್ಕೆ, ಸೀನಿದ್ದಕ್ಕೂ ಡೈವೋರ್ಸ್ ಕೊಡುವವರಿದ್ದಾರೆ. ಆದರೆ, ಕೆಲವು ಘಟನೆಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಆ ರೀತಿಯ ವಿಚಿತ್ರವಾದ ಮತ್ತು ಶಾಕಿಂಗ್ ಘಟನೆಯೊಂದು ಇಲ್ಲಿದೆ. ಮಹಾರಾಷ್ಟ್ರದ ಭಾಂದರದ ಮಸಲ್​ನಲ್ಲಿ ಗಂಡ ತನ್ನ ಮೊಬೈಲ್​ ಅನ್ನು ವಾಪಾಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ಆತನ ತುಟಿಯನ್ನೇ ಕತ್ತರಿಸಿದ್ದಾಳೆ!

ಅಚ್ಚರಿಯಾದರೂ ಇದು ಸತ್ಯ. ಮಸಲ್​ನಲ್ಲಿ 40 ವರ್ಷದ ಖೇಮ್​ರಾಜ್ ಬಾಬೂರಾವ್ ಮುಲ್ ಎಂಬ ವ್ಯಕ್ತಿ ಭಾಂದರದಲ್ಲಿ ವಾಸವಾಗಿದ್ದರು. ತನ್ನ ಮೊಬೈಲ್ ಹಾಳಾಗಿದ್ದರಿಂದ ಮನೆಯಲ್ಲಿದ್ದಾಗ ಅವರು ಹೆಂಡತಿಯ ಮೊಬೈಲ್ ಅನ್ನು ಬಳಸುತ್ತಿದ್ದರು. ತನ್ನ ಮೊಬೈಲನ್ನು ಯಾವಾಗಲೂ ಗಂಡನೇ ಹಿಡಿದುಕೊಂಡಿರುತ್ತಾನೆ ಎಂದು ಕೋಪಗೊಂಡ ಹೆಂಡತಿ ಆತನೊಂದಿಗೆ ಅದೇ ವಿಷಯಕ್ಕೆ ಜಗಳ ಮಾಡಿದರು.

ಕಳೆದ ಗುರುವಾರ ಮೊಬೈಲ್ ವಿಷಯಕ್ಕೆ ಗಂಡನೊಂದಿಗೆ ಜಗಳವಾಡಿದ ಹೆಂಡತಿ ಮೊಬೈಲ್ ವಾಪಾಸ್ ಕೊಡುವಂತೆ ಕೇಳಿದಳು. ಅದಕ್ಕೆ ಗಂಡ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆಕೆ ಗಂಡನ ತುಟಿಯನ್ನು ಚಾಕುವಿ​ನಿಂದ ಕತ್ತರಿಸಿದ್ದಾಳೆ. ಚಾಕುವನ್ನು ಗಂಡನ ಮುಖದ ಮೇಲೆ ಎಸೆದಾಗ ಆ ಚಾಕು ಆತನ ತುಟಿಗೆ ತಾಗಿ ತುಟಿ ಕತ್ತರಿಸಿಹೋಗಿದೆ.

ಬಳಿಕ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ಮೇಲೆ ಹಲ್ಲೆ ಮಾಡಿದ ಹೆಂಡತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್​ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ