ಪುಣೆ: ಪುಣೆ-ಅಹಮದ್‌ನಗರ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ. ಈ ಆಘಾತಕಾರಿ ಅಪಘಾತದ (Road Accident) ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಪಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಅಪಘಾತದ ದೃಶ್ಯ ರೆಕಾರ್ಡ್ ಆಗಿದೆ.
ವರದಿಗಳ ಪ್ರಕಾರ, ಪುಣೆ ನಗರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಬಜರಂಗವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ 11.25ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪುಣೆಯತ್ತ ವೇಗವಾಗಿ ಚಲಿಸುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಕಾರಣ ಐಷಾರಾಮಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರೆಸ್ಟೋರೆಂಟ್ ಕಡೆ ಹೋಗಿ ಉರುಳಿ, ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
A luxury bus overturns in #Ahmednagar in #Pune and #crashed into a nearby hotel.
Many vehicles crushed as a result – 1 dead and 25 injured in this accident.#Accident #traffic #Maharashtra #News #Road #India pic.twitter.com/3CGMglKHSw— Siraj Noorani (@sirajnoorani) April 11, 2022
ಮೃತರನ್ನು ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದ 34 ವರ್ಷದ ವಿಶಾಲ್ ಬಬನ್ ಸಾಸ್ವಾಡೆ ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಶಿಕ್ರಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದ್ದು, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೆಲವು ಪ್ರಯಾಣಿಕರನ್ನು ಮಾಣಿಕಚಂದ್ ಚಿಮನ್‌ಲಾಲ್ ಜೈನ್ (67), ಹರೀಶ್‌ಕುಮಾರ್ ವಿಯನಾನಾದ್ ದುಬೆ (33), ದೀಪಕ್ ನರೇಂದ್ರ ಅಗರ್ವಾಲ್ (28), ಪ್ರಕಾಶ್ ಅಪ್ಪಾಸಾಹೇಬ್ ತುರತ್ಮಾಕ್ (64), ಪೂಜಾ ಕಿಸಾನ್ ಖೈರ್ನಾರ್ (29), ಮುಖೇಶ್ ವೇದಪ್ರಕಾಶ್ ಸುರವಾಸೆ (29), ದೀಪಲ್ ಚೌಘುಲೆ (33), ಶರಯೌ ಮನೀಶ್ ಜಾಖ್ತೆ (22), ಕುಶಾಗ್ರಾ ದೀಪಕ್ ಚೌಗುಲೆ (8) ಮತ್ತು ನಾಗೇಶ ಹರಿಭಾವು ಶಿಂಗಾಡೆ (48) ಎಂದು ಗುರುತಿಸಲಾಗಿದೆ.
ಕಾರು ಚಾಲಕನ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 279, 304 (ಎ), 337, 338, 427 ಮತ್ತು ಎಂವಿಎ ಆಕ್ಟ್ 184 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಅಪಘಾತದ ನಂತರ ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಭಯಾನಕ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ
ಜಾರ್ಖಂಡ್ ಕೇಬಲ್ ಕಾರ್ ಅಪಘಾತದಲ್ಲಿ ಇಬ್ಬರು ದುರ್ಮರಣ; ಜನರ ರಕ್ಷಣೆಗೆ ಧಾವಿಸಿದ ವಾಯುಪಡೆ