Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಐಪಿಎಲ್ ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು

ಮೃತ ಸ್ವಾಮಿಗೆ ಕ್ರಿಕೆಟ್ ಬೆಟ್ಟಿಂಗ್ ಅಂದ್ರೆ ಏನೆಂಬುದೇ ಗೊತ್ತಿಲ್ಲ. ನಿನ್ನೆ ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿ ಓಡಿದ್ದಾನೆ. ಈ ವೇಳೆ ಎಡವಿಬಿದ್ದು ಸ್ವಾಮಿ ಮೃತಪಟ್ಟಿದ್ದಾನೆಂದು ಮೃತ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

Crime News: ಐಪಿಎಲ್ ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Apr 13, 2022 | 8:40 AM

ರಾಯಚೂರು: ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಬಲು ಜೋರಾಗಿದೆ. ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ ನಡೆದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ರಾಯಚೂರು ತಾಲೂಕಿನ ವಡವಾಟಿಯಲ್ಲಿ ಸ್ವಾಮಿ(35) ಎಂಬ ವ್ಯಕ್ತ ಸಾವನ್ನಪ್ಪಿದ್ದಾನೆ. ವಡವಾಟಿ ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಹಿನ್ನೆಲೆ ಗ್ರಾಮದ ಮೇಲೆ ಯರಗೇರಾ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ವಾಮಿ ಮೃತಪಟ್ಟಿದ್ದಾನೆ. ಸ್ವಾಮಿ ಸಾವಿಗೆ ಪಿಎಸ್‌ಐ ಅಂಬರೀಶ್ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಸ್ವಾಮಿಗೆ ಕ್ರಿಕೆಟ್ ಬೆಟ್ಟಿಂಗ್ ಅಂದ್ರೆ ಏನೆಂಬುದೇ ಗೊತ್ತಿಲ್ಲ. ನಿನ್ನೆ ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿ ಓಡಿದ್ದಾನೆ. ಈ ವೇಳೆ ಎಡವಿಬಿದ್ದು ಸ್ವಾಮಿ ಮೃತಪಟ್ಟಿದ್ದಾನೆಂದು ಮೃತ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

ಪೊಲೀಸರ ಮೇಲೆ ಹಲ್ಲೆಗೆ ಮುಂದಾಗ ರೌಡಿ ಕಾಲಿಗೆ ಗುಂಡೇಟು ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ಆಗಿದೆ. ಭೂಪಸಂದ್ರದಲ್ಲಿ ರೌಡಿಶೀಟರ್ ಶರಣಪ್ಪ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಆರೋಪಿ ಶರಣಪ್ಪ, ವ್ಯಕ್ತಿಯೊಬ್ಬರ ಮೇಲೆ ಮನಸೋಇಚ್ಛೆ ದಾಳಿ ಮಾಡಿದ್ದ. ಇದೇ ವಿಚಾರವಾಗಿ ಆರೋಪಿ ಶರಣಪ್ಪ ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ರೌಡಿಶೀಟರ್ ದಾಳಿಗೆ ಮುಂದಾಗಿದ್ದ. ಶರಣಾಗುವಂತೆ ಸೂಚಿಸಿದರೂ ಪರಾರಿಯಾಗುವುದಕ್ಕೆ ಯತ್ನಿಸಿದ್ದಾನೆ. ಹೀಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಬಾಲರಾಜ್‌ರಿಂದ ಫೈರಿಂಗ್ ನಡೆದಿದ್ದು ಆರೋಪಿ ಶರಣಪ್ಪಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಿತ್ರದುರ್ಗದಲ್ಲಿ ಹೆಚ್ಚಿದ ಕಳ್ಳರ ಹಾವಳಿ ಚಿತ್ರದುರ್ಗ: ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಬೆಳ್ಳಿ ಕಿರೀಟ, ನಾಗಾಭರಣ, ಒಡವೆಗಳ ಕಳ್ಳತನವಾಗಿದೆ. ಹಾಡಹಗಲೇ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರಿಂದ ಕೃತ್ಯ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಎರಡು ಹುಂಡಿಯಲ್ಲಿದ್ದ ಕಾಣಿಕೆ ಕಳ್ಳತನವಾಗಿದೆ. ದೇವಾಲಯದ ಬೀಗ ಮುರಿದು ಹುಂಡಿ ಹಣ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಹಿರಿಯೂರು ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್​ ಮೆಟ್ರೊ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ಶಂಕಿತನ ಚಿತ್ರ ಬಿಡುಗಡೆ: ಈವರೆಗಿನ 10 ಬೆಳವಣಿಗೆಗಳಿವು

ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್​ಐಆರ್ ದಾಖಲು