ದೆಹಲಿ ಡಿಸೆಂಬರ್ 09: ದಕ್ಷಿಣ ದಿಲ್ಲಿಯ ವಸಂತ್ ಕುಂಜ್ (Vasant Kunj) ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಲಾರೆನ್ಸ್ ಬಿಷ್ಣೋಯ್ (Lawrance Bishnoi )ಕ್ರಿಮಿನಲ್ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ದೆಹಲಿ ಪೊಲೀಸ್ (Delhi Police) ವಿಶೇಷ ದಳ ಬಂಧಿಸಿದೆ ಎಂದು ಪೊಲೀಸರು ಇಂದು(ಶನಿವಾರ) ತಿಳಿಸಿದ್ದಾರೆ. ಅವರಲ್ಲಿ ಒಬ್ಬ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಹುಡುಗ ಇದ್ದಾನೆ ಎಂದು ಹೇಳಿದ್ದಾರೆ. ಗ್ಯಾಂಗ್ ಸದಸ್ಯರಾದ ಅನೀಶ್(23), ಮತ್ತು 15 ವರ್ಷದ ಹುಡುಗ – ಶುಕ್ರವಾರ ರಾತ್ರಿ ದೆಹಲಿಯ ವಸಂತ್ ಕುಂಜ್‌ನ ಪಾಕೆಟ್ -9 ಬಳಿಯಿಂದ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದಕ್ಷಿಣ ದೆಹಲಿಯ ಪ್ರಮುಖ ಹೋಟೆಲ್‌ನ ಹೊರಗೆ ಇಬ್ಬರಿಗೆ “ಗುಂಡು ಹಾರಿಸಲು” ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸರಿಗೆ ಮಾಹಿತಿ ಇತ್ತು. ಅವರ ಉದ್ದೇಶವು ಸುಲಿಗೆಯೆಂದು ತೋರುತ್ತದೆ ಎಂದಿದ್ದಾರೆ ಪೊಲೀಸರು. ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್ ನಿರ್ದೇಶನದ ಮೇರೆಗೆ ಪಂಜಾಬ್‌ನ ಜೈಲಿನಲ್ಲಿರುವ ಅಮಿತ್‌ನಿಂದ ಅವರು ಸೂಚನೆಗಳನ್ನು ಸ್ವೀಕರಿಸಿದ್ದರು. ಅನ್ಮೋಲ್ ಬಿಷ್ಣೋಯ್, ಲಾರೆನ್ಸ್ ಬಿಷ್ಣೋಯ್ ಅವರ ಸೋದರ ಸಂಬಂಧಿಯಾಗಿದ್ದು, ಈತ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ. ಆರೋಪಿಗಳು ಐದು ಸುತ್ತು ಗುಂಡು ಹಾರಿಸಿದ್ದು, ಪ್ರತೀಕಾರವಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ: ಬಾಲಕಿ ಮೇಲೆ ಆ್ಯಸಿಡ್ ಎರಚಿದ ಅತ್ಯಾಚಾರ ಪ್ರಕರಣ ಆರೋಪಿ; ಕೃತ್ಯವೆಸಗಿದ ನಂತರ ಆತ್ಮಹತ್ಯೆ
ಪೊಲೀಸರು ಎರಡು ಪಿಸ್ತೂಲ್‌ಗಳು ಮತ್ತು ನಾಲ್ಕು ಲೈವ್ ಕಾಟ್ರಿಡ್ಜ್‌ಗಳು ಮತ್ತು ಒಂದು ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಅನೀಶ್ ಆರು ಶಸ್ತ್ರಸಜ್ಜಿತ ದರೋಡೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಹಲ್ಲೆ ಮತ್ತು ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಸಶಸ್ತ್ರ ದರೋಡೆ ಪ್ರಕರಣದಲ್ಲಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವವ ಎಂದು ಹೆಸರಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ