AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೆಜಿಲ್: ಸಾಮಾಜಿಕ ಜಾಲತಾಣಗಳ ಜನಪ್ರಿಯ ಇನ್​ಫ್ಲುಯೆನ್ಸರ್ ಸಂಬಂಧ ಮುರಿದಿದ್ದಕ್ಕೆ ಅವಳ ಮಾಜಿ ಸಂಗಾತಿ 30 ಬಾರಿ ಇರಿದು ಕೊಂದನೇ?

26-ವರ್ಷ-ವಯಸ್ಸಿನವಳಾಗಿದ್ದ ಲರಿಸ್ಸಾ ಕೊಲೆ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದಳು. ಅವಳು ನೋವಿನಲ್ಲಿ ಚೀತ್ಕರಿಸಿದ್ದನ್ನು ನೆರಹೊರೆಯವರು ಕೇಳಿಸಿಕೊಂಡಿದ್ದಾರಲ್ಲದೆ ರಕ್ತಸಿಕ್ತವಾಗಿದ್ದ ಬಟ್ಟೆಗಳಲ್ಲಿ ತೆವಳುತ್ತಾ ಮನೆಯಿಂದ ಹೊರಬರುವುದನ್ನು ನೋಡಿದ್ದಾರೆ.

ಬ್ರೆಜಿಲ್: ಸಾಮಾಜಿಕ ಜಾಲತಾಣಗಳ ಜನಪ್ರಿಯ ಇನ್​ಫ್ಲುಯೆನ್ಸರ್ ಸಂಬಂಧ ಮುರಿದಿದ್ದಕ್ಕೆ ಅವಳ ಮಾಜಿ ಸಂಗಾತಿ 30 ಬಾರಿ ಇರಿದು ಕೊಂದನೇ?
ಲರಿಸ್ಸಾ ಗ್ರಜೀಲಾ ಡ ಸಿಲ್ವಾ ಅಂಟೋನಿಯೋ
TV9 Web
| Edited By: |

Updated on: Dec 04, 2022 | 7:57 AM

Share

ಸಾಮಾಜಿಕ ಜಾಲತಾಣಗಳಲ್ಲಿ ಇನ್​ಫ್ಲುಯೆನ್ಸರ್ (ಸಾಮಾಜಿಕ ಜಾಲತಾಣಗಳಲ್ಲಿ ಉತ್ಪಾದನೆಗಳನ್ನು ಪ್ರಮೋಟ್ ಮಾಡುವವರು) (influencer) ಆಗಿ ಕೆಲಸ ಮಾಡುತ್ತಾ ಸಾಕಷ್ಟು ಜನಪ್ರಿಯಳಾಗಿದ್ದ ಎರಡು ಮಕ್ಕಳ ತಾಯಿ ಲರಿಸ್ಸಾ ಗ್ರಜೀಲಾ ಡ ಸಿಲ್ವಾ ಅಂಟೋನಿಯೋಳನ್ನು (Larissa Grazeila da Silava Antonio) ಭೀಕರವಾಗಿ 30 ಬಾರಿ ಇರಿದು ಹತ್ಯೆ ಮಾಡಲಾಗಿದೆ. ಲರಿಸ್ಸಾಗೆ ಸೋಶಿಯಲ್ ಮಿಡಿಯಾದಲ್ಲಿ (social media) ಸಾವಿರಾರು ಅಭಿಮಾನಿಗಳಿದ್ದು ಆಕೆಯ ಕೊಲೆ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಮಕ್ಕಳು ಮತ್ತು ತಾಯಿಯೊಂದಿಗೆ ಬ್ರೆಜಿಲ್ ನ ಸಾವೊ ಪೌಲೋ ರಾಜ್ಯದ ಲಿನ್ಸ್ ಹೆಸರಿನ ಪಟ್ಟಣದಲ್ಲಿ ವಾಸವಾಗಿದ್ದ ಅವಳ ಮನೆಯಲ್ಲೇ ಕೊಲೆ ಮಾಡಲಾಗಿದೆ. ನವೆಂಬರ್ 25 ರಂದು ಲರಿಸ್ಸಾಳನ್ನು ಕೊಂದಿರುವ ಹಂತಕ ಹೆಚ್ಚಿನ ಬಾರಿ ಅವಳ ಕುತ್ತಿಗೆ ಮೇಲೆ ಪ್ರಹಾರ ಮಾಡಿದ್ದಾನೆ.

26-ವರ್ಷ-ವಯಸ್ಸಿನವಳಾಗಿದ್ದ ಲರಿಸ್ಸಾ ಕೊಲೆ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದಳು. ಅವಳು ನೋವಿನಲ್ಲಿ ಚೀತ್ಕರಿಸಿದ್ದನ್ನು ನೆರಹೊರೆಯವರು ಕೇಳಿಸಿಕೊಂಡಿದ್ದಾರಲ್ಲದೆ ರಕ್ತಸಿಕ್ತವಾಗಿದ್ದ ಬಟ್ಟೆಗಳಲ್ಲಿ ತೆವಳುತ್ತಾ ಮನೆಯಿಂದ ಹೊರಬರುವುದನ್ನು ನೋಡಿದ್ದಾರೆ.

ಲರಿಸ್ಸಾಳ ಮಾಜಿ ಸಂಗಾತಿ 22-ವರ್ಷ-ವಯಸ್ಸಿನ ಥಲ್ಲಿಕ್ ಎಡುರಾಡೊ ಪೆರಿರಾ ಡಿ ನೊವೈಸ್ ನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಲರಿಸ್ಸಾಳನ್ನು ನೆರೆಹೊರೆಯವರು ರಸ್ತೆವರೆಗೆ ತಂದು ಅಂಬ್ಯುಲೆನ್ಸ್ ಫೋನ್ ಮಾಡಿದ್ದರಾದರೂ ಅಷ್ಟರಲ್ಲಾಗಲೇ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು. ಕೊಲೆಗೆ ಬಳಸಿದ ಆಯಧವನ್ನು ಸ್ಥಳದಿಂದ ಬರಾಮತ್ತು ಮಾಡಿಕೊಳ್ಳಲಾಗಿದೆ.

Murder suspect Thallik Eduardo Pereira de Novais

ಕೊಲೆ ಆರೋಪಿ ಥಲ್ಲಿಕ್ ಎಡುರಾಡೊ ಪೆರಿರಾ ಡಿ ನೊವೈಸ್

ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಲರಿಸ್ಸಾ ತನ್ನ ಮಾಜಿ ಸಂಗಾತಿಯೊಂದಿಗೆ ಸಂಬಂಧ ಕೊನೆಗೊಳ್ಳಿಸುವ ನಿರ್ಧಾರ ಹೇಳಿದಾಗ ಅವನು ಒಪ್ಪಿರಲಿಲ್ಲ. ಥಲ್ಲಿಕ್ ಅವಳಿಗೆ ಬೆದರಿಕೆ ಹಾಕಲು ಆರಂಭಿಸಿದ್ದ. ಅವನಿಂದ ತೊಂದರೆಯಾಗಬಹುದೆಂಬ ಕಾರಣಕ್ಕೆ ಅವಳು ಎಚ್ಚರಿಕೆಯಲ್ಲಿದ್ದಳು. ಕೊಲೆ ಮಾಡಿ ಪರಾರಿಯಾಗುವಾಗ ಥಲ್ಲಿಕ್ ಎರಡು ಕಾರುಗಳನ್ನೂ ಕದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕಾರುಗಳನ್ನು ಅವನು ಬೇರೆ ಬೇರೆ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದ.

ಪೊಲೀಸರು ವಾಹನಗಳ ತಪಾಸಣೆ ನಡೆಸಿ ಅವುಗಳ ಮಾಲೀಕರಿಗೆ ಒಪ್ಪಿಸಿದ್ದಾರೆ. ಅವರಲ್ಲಿ ಒಬ್ಬರು 49-ವರ್ಷ-ವಯಸ್ಸಿನ ಪುರುಷನಾಗಿದ್ದರೆ ಮತ್ತೊಬ್ಬರು 40-ವರ್ಷ-ವಯಸ್ಸಿನ ಮಹಿಳೆಯಾಗಿದ್ದಾರೆ. ಥಲ್ಲಿಕ್ ಕಾರುಗಳನ್ನು ಕದ್ದೊಯ್ಯುವಾಗ ಅವನ ಬಟ್ಟೆಗಳ ರಕ್ತಮಯವಾಗಿದ್ದವು ಎಂದು ಅವರಿಬ್ಬರೂ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ನವೆಂಬರ್ 30ರಂದು ಥಲ್ಲಿಕ್ ತನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ. ಅವನ ಕೈ ಮೇಲೆ ಗಾಯಗಳಿದ್ದಿದ್ದನ್ನು ಪೊಲೀಸರು ವರದಿ ಮಾಡಿದ್ದಾರೆ. ಲರಿಸ್ಸಾಳ ಫೇಸ್ ಬುಕ್ ಪೇಜ್ ತಡಕಾಡಿದಾಗ ಅವಳು ಬ್ರಕೊಲ್ ಹೆಸರಿನ ಕಂಪನಿಗೆ ಕೆಲಸ ಮಾಡುತಿದ್ದಿದ್ದು ಗೊತ್ತಾಗಿದೆ. ಆದರೆ ಸಾಯುವ ಸಮಯದಲ್ಲಿ ಅವಳು ಡಿಜಿಟಲ್ ಕ್ರಿಯೇಟರ್ ಗುರುತಿಸಿಕೊಂಡಿದ್ದಳು. ದಾರುಣ ಹತ್ಯೆಗೀಡಾಗಿರುವ ಲರಿಸ್ಸಾಗೆ 6,000 ಕ್ಕೂ ಹೆಚ್ಚು ಫೇಸ್ ಬುಕ್ ಫಾಲೋಯರ್ಸ್ ಇದ್ದರೆ ಇನ್ಸ್ಟಾಗ್ರಾಮ್ ನಲ್ಲಿ ಅದಕ್ಕಿಂತ ಜಾಸ್ತಿ ಇದ್ದರು.

ಪೊಲೀಸರು ಲರಿಸ್ಸಾ ಪ್ರಕರಣವನ್ನು ಅಬಲೆಯ ಹತ್ಯೆ ಎಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್