ಸೆನ್ಸೇಷನಲ್ ಕ್ರೈಮ್ ಕತೆಗಳು: ರೇಪ್​ಗೊಳಗಾದ ಹತ್ರಾಸ್ ಯುವತಿಯ ಬೆನ್ನುಮೂಳೆ ಮುರಿದಿತ್ತು ಮತ್ತು ಆಸ್ಪತ್ರೆಗೆ ಒಯ್ಯುವಾಗ ರಕ್ತ ಕಾರುತ್ತಿದ್ದಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2022 | 8:07 AM

ದಿನವಿಡೀ ನಡೆಸಿದ ಮುಷ್ಕರದ ನಂತರ ಸಂತ್ರಸ್ತೆಯ ದೇಹವನ್ನು ಬೂಲ್ಗರ್ಹಿ ಗ್ರಾಮದಲ್ಲಿ ತರಾತುರಿಯಲ್ಲಿ ರಾತ್ರೋರಾತ್ರಿ ಸುಟ್ಟಬಿಡಲಾಯಿತು. ಪೊಲೀಸರು ಈ ಆರೋಪವನ್ನು ನಿರಾಕರಿಸಿದರು. ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ಧನ ನೀಡಿತು.

ಸೆನ್ಸೇಷನಲ್ ಕ್ರೈಮ್ ಕತೆಗಳು: ರೇಪ್​ಗೊಳಗಾದ ಹತ್ರಾಸ್ ಯುವತಿಯ ಬೆನ್ನುಮೂಳೆ ಮುರಿದಿತ್ತು ಮತ್ತು ಆಸ್ಪತ್ರೆಗೆ ಒಯ್ಯುವಾಗ ರಕ್ತ ಕಾರುತ್ತಿದ್ದಳು!
ಸಂತ್ರಸ್ತೆಯ ಮನೆ ಮತ್ತು ಸಿಆರ್​​ಪಿಎಫ್ ಭದ್ರತೆ
Image Credit source: The Quint
Follow us on

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ಇವತ್ತು ನಿಮಗೆ ಭಯಾನಕ ಹತ್ರಾಸ್ ಪ್ರಕರಣದ ಬಗ್ಗೆ ಹೇಳುತ್ತಿದ್ದೇವೆ. ಈ ಘಟನೆ ಎಲ್ಲರಿಗೂ ಗೊತ್ತಿರುಂಥದ್ದೇ. ನಮ್ಮ ದೇಶದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಯ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ. ಸವರ್ಣೀಯರು ದಲಿತ ಹಾಗೂ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಇತರ ಜನಾಂಗಗಳ ಮೇಲೆ ನಡೆಸುವೆ ದೌರ್ಜನ್ಯದ ಪ್ರಕರಣಗಳು ಒಂದೆರಡಲ್ಲ. ಅವುಗಳನ್ನು ಟಿವಿಗಳಲ್ಲಿ ನೋಡುತ್ತೇವೆ, ಪತ್ರಿಕೆಗಳಲ್ಲಿ ಓದಿ ಕೆಲದಿನಗಳ ನಂತರ ಮರೆತುಬಿಡುತ್ತೇವೆ. ಎಲ್ಲಿಯವರೆಗೆ ಅತ್ಯಾಚಾರಿಗಳನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ಜಾರಿಗೆ ಬರುವುದಿಲ್ಲವೋ ರೇಪ್ ನಂಥ ಅಮಾನವೀಯ ಕೃತ್ಯಗಳು ಜರುಗುತ್ತಲೇ ಇರುತ್ತವೆ.

ಸಂತ್ರಸ್ತೆಯ ಬೆನ್ನುಮೂಳೆ ಮುರಿದಿತ್ತು!

ಅವತ್ತು ಸೆಪ್ಟೆಂಬರ್ 14, 2020. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19-ವರ್ಷ-ವಯಸ್ಸಿನ ದಲಿತ ಯುವತಿಯ ಮೇಲೆ ಮೇಲ್ಜಾತಿಗೆ ಸೇರಿದ ನಾಲ್ವರು ಅದ್ಯಾವ ಭೀಕರತೆ ಮತ್ತು ಪಶುಗಳಂತೆ ಅತ್ಯಾಚಾರ ನಡೆಸಿದರೆಂದರೆ ಯುವತಿಯ ಬೆನ್ನು ಮೂಳೆ ಮುರಿದುಹೋಗಿತ್ತು ಮತ್ತು ಆಸ್ಪತ್ರೆಗೆ ಸಾಗಿಸುವಾಗ ಪಾಪದ ಹುಡುಗಿ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಳು! ಅವಳ ಖಾಸಗಿ ಭಾಗದಿಂದಲೂ ರಕ್ತಸ್ರಾವ ಆಗುತಿತ್ತು.

ಎರಡು ವಾರಗಳ ಕಾಲ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ ಯುವತಿ ಕೊನೆಗೆ ಸೋತು ಸತ್ತುಬಿಟ್ಟಳು. ಅವಳು ಸತ್ತ ಸುದ್ದಿ ಹೊರಬೀಳುತ್ತಿದ್ದಂತೆ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದವು.

ಪೊಲೀಸರು ರಾತ್ರೋರಾತ್ರಿ ಅವಳ ಮೃತದೇಹ ಸುಟ್ಟರು!

ಧರಣಿ ನಡೆಸಿದ ಕಾಂಗ್ರೆಸ್ ಮತ್ತು ಚಂದ್ರಶೇಖರ್ ನೇತೃತ್ವದ ಭೀಮ್ ಆರ್ಮಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಪಟ್ಟುಹಿಡಿದವು. ಸಂತ್ರಸ್ತೆಯ ದೇಹದ ಅಂತ್ಯಸಂಸ್ಕಾರವನ್ನು ಪೊಲೀಸರು ಗೌಪ್ಯವಾಗಿ ಧಫನ್ ಮಾಡುವ ಪ್ರಯತ್ನದಲ್ಲಿದ್ದಾರೆಂದು ಆಕೆಯ ಕುಟುಂಬದವರು ಹೇಳಿದ್ದು ನಿಜವಾಯಿತು.

ದಿನವಿಡೀ ನಡೆಸಿದ ಮುಷ್ಕರದ ನಂತರ ಸಂತ್ರಸ್ತೆಯ ದೇಹವನ್ನು ಬೂಲ್ಗರ್ಹಿ ಗ್ರಾಮದಲ್ಲಿ ತರಾತುರಿಯಲ್ಲಿ ರಾತ್ರೋರಾತ್ರಿ ಸುಟ್ಟಬಿಡಲಾಯಿತು. ಪೊಲೀಸರು ಈ ಆರೋಪವನ್ನು ನಿರಾಕರಿಸಿದರು. ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ಧನ ನೀಡಿತು.

ಕಾನೂನಿನ ದೃಷ್ಟಿಯಲ್ಲಿ ರೇಪ್ ಎಂಥ ಅಪರಾಧ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರತಿವರ್ಷ ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಅಂಕಿ-ಅಂಶಗಳನ್ನು ಪ್ರಕಟಿಸುತ್ತದೆ. ಸಮೀಕ್ಷೆಗಳ ಪ್ರಕಾರ ಅವರ ವಿರುದ್ಧ ಜರುಗುವ ಅಪರಾಧಗಳಲ್ಲಿ ರೇಪ್ ಅಗ್ರಸ್ಥಾನದಲ್ಲಿದೆ.

ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 375 ರ ಅಡಿಯಲ್ಲಿ ರೇಪ್ ಒಂದು ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣ ಕಡಿಮೆ ಅನಿಸುವುದರಿಂದ ಈ ಭಯಾನಕ ಮತ್ತು ಹೀನ ಅಪರಾಧದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ.

ರೇಪ್ ಪ್ರಕರಣಗಳು ಹೆಚ್ಚುತ್ತಿವೆ!

ನಮ್ಮ ದೇಶದಲ್ಲಿ ರೇಪ್ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಬೆಳಕಿಗೆ ಬರುವುದೇ ಇಲ್ಲ. ಮಹಿಳೆಯರಿಗೆ ತಮ್ಮ ಕಾನೂನಾತ್ಮಕ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.

ಹತ್ರಾಸ್ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ವಿಚಾರಣೆ ಯಾವ ಹಂತದಲ್ಲಿದೆ?
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19-ವರ್ಷದ ಯುವತಿಯ ಮೇಲೆ ನಡೆದ ಭೀಭತ್ಸ ಅತ್ಯಾಚಾರ ಮತ್ತು ತದನಂತರ ನಡೆದ ಅಮಾನವೀಯ ಅಂತ್ಯಸಂಸ್ಕಾರ ದೇಶದ ಸ್ವಾಸ್ಥ್ಯವನ್ನು ಕದಡಿ ದೊಡ್ಡ ಪರಿಣಾಮ ಬೀರಿದ್ದರಿಂದ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಘೋರ ಶಿಕ್ಷೆ ವಿಧಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಕ್ರಿಮಿನಲ್ ರಿಟ್ ಮನವಿ ಸಲ್ಲಿಸಲಾಯಿತು.

ಮೂರು ಹಂತದ ಭದ್ರತೆ

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಚಂದ್ಪಾ ಗ್ರಾಮದಲ್ಲಿ ವಾಸವಾಗಿರುವ ಸಂತ್ರಸ್ತೆಯ ಪೋಷಕರು, ಇಬ್ಬರು ಸಹೋದರರು ಮತ್ತು ಒಬ್ಬ ಅತ್ತಿಗೆ, ಅಜ್ಜಿ-ಮೊದಲಾದವರಿಗೆ ಮತ್ತು ಗ್ರಾಮವನ್ನು ಸವರ್ಣೀಯರಿಂದ ರಕ್ಷಿಸಲು ಮೂರು-ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಇದರಲ್ಲಿ ಸಶಸ್ತ್ರಧಾರಿ ಪೊಲೀಸ್ ಪಡೆ, ಸಿವಿಲ್ ಪೊಲೀಸ್ ಪಡೆ ಮತ್ತು ಸಿಸಿಟಿವಿ ಮತ್ತು ದಾರಿದೀಪಗಳ ಅಳವಡಿಕೆ ಸೇರಿವೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕೇಂದ್ರ ತನಿಖಾ ದಳ ಸಂದೀಪ್ ಠಾಕೂರ್, ಲವಕುಶ್ ಠಾಕೂರ್, ರವಿ ಠಾಕೂರ್ ಮತ್ತು ರಾಮು ಠಾಕೂರ್ ಹೆಸರಿನ ನಾಲ್ವರು ಮೇಲ್ಜಾತಿಗೆ ಸೇರಿದ ಯುವಕರನ್ನು ಬಂಧಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಿಬಿಐ ತನಿಖೆ ಸೇರಿದಂತೆ ಪ್ರಕರಣದ ಪ್ರತಿಯೊಂದು ಆಯಾಮ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವಂತೆ ಸುಪ್ರೀಪ್ ಕೋರ್ಟ್ ಅಲಹಾಬಾದ ಹೈಕೋರ್ಟ್ ಗೆ ಸೂಚನೆ ನೀಡಿದೆ.

ವಿಚಾರಣೆ ನಡೆಯುತ್ತಲೇ ಇದೆ!

ವಿಚಾರಣೆಯನ್ನು ಉತ್ತರ ಪ್ರದೇಶ ಬಿಟ್ಟು ರಾಜ್ಯದಲ್ಲಿ ನಡೆಸಬೇಕೆಂದು ಅರ್ಜಿದಾರರಿಗೆ ಬೇಡಿಕೆಗೆ ಪ್ರತಿಕ್ರಿಯಿಸಿದ ಅಪೆಕ್ಸ್ ಕೋರ್ಟ್ ಅದಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿದೆ.
ಆದರೆ ಕೋವಿಡ್ ಪಿಡುಗುನಿಂದಾಗಿ ಸುಮಾರು ತಿಂಗಳುಗಳ ಕಾಲ ಪ್ರಕರಣದ ವಿಚಾರಣೆ ನಡೆಯಲೇ ಇಲ್ಲ. ಹೈಕೋರ್ಟ್ನಲ್ಲಿ ವಿಚಾರಣೆ ಶುರುವಾದ ಬಳಿಕ ಮೊದಲು ವಾರಕ್ಕೊಮ್ಮೆ ನಡೆಯುತ್ತಿದ್ದ ಅದು ಈಗ 15 ದಿನಗಳಿಗೊಮ್ಮೆ ನಡೆಯುತ್ತಿದೆ ಎಂದು ಸಂತ್ರಸ್ತೆ ಕುಟುಂಬದ ಪರ ವಕೀಲರು ಹೇಳಿದ್ದಾರೆ. ವಿಚಾರಣೆ ನಡೆಯುತ್ತಲೇ ಇದೆ.