ಲೈವ್ ಕಾಲ್ ಅನುಸರಿಸಿ ಅಂಗಡಿ ದೋಚ್ತಿದ್ದ, ಲೈವ್ ಬ್ಯಾಂಡ್ ಶೋಕಿ ಗ್ಯಾಂಗ್ ಅಂದರ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ವಿಡಿಯೋ ಕಾಲ್ ಮುಖಾಂತರ  ಅಂಗಡಿ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಲೈವ್ ಬ್ಯಾಂಡ್ ಶೋಕಿ ಹಿಂದೆ ಬಿದ್ದಿದ್ದ ಐನಾತಿ ಗ್ಯಾಂಗ್​ನ ಸದಸ್ಯ ಸೈಯದ್ ಮಹಮದ್ ಫೈಸಲ್ ಬಂಧಿತ ಆರೋಪಿ. ನಾಗವಾರದ ನಿವಾಸಿ ಸೈಯದ್ ಮೇಲೆ ನಗರದಲ್ಲಿ 9 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ. ಮಧ್ಯರಾತ್ರಿ ಒಂಟಿಯಾಗಿ […]

ಲೈವ್ ಕಾಲ್ ಅನುಸರಿಸಿ ಅಂಗಡಿ ದೋಚ್ತಿದ್ದ, ಲೈವ್ ಬ್ಯಾಂಡ್ ಶೋಕಿ ಗ್ಯಾಂಗ್ ಅಂದರ್!
ಸಾಧು ಶ್ರೀನಾಥ್​

Updated on: Jan 28, 2020 | 4:20 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ವಿಡಿಯೋ ಕಾಲ್ ಮುಖಾಂತರ  ಅಂಗಡಿ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಲೈವ್ ಬ್ಯಾಂಡ್ ಶೋಕಿ ಹಿಂದೆ ಬಿದ್ದಿದ್ದ ಐನಾತಿ ಗ್ಯಾಂಗ್​ನ ಸದಸ್ಯ ಸೈಯದ್ ಮಹಮದ್ ಫೈಸಲ್ ಬಂಧಿತ ಆರೋಪಿ.

ನಾಗವಾರದ ನಿವಾಸಿ ಸೈಯದ್ ಮೇಲೆ ನಗರದಲ್ಲಿ 9 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ. ಮಧ್ಯರಾತ್ರಿ ಒಂಟಿಯಾಗಿ ಬಂದು ಅಂಗಡಿಗಳ ಬೀಗ ಮುರಿದು ವಸ್ತುಗಳನ್ನು ಕದಿಯುತ್ತಿದ್ದ. ಬಳಿಕ ಕದ್ದ ಮಾಲು ಮಾರಿ ಲೈವ್ ಬ್ಯಾಂಡ್​ನಲ್ಲಿ ನೋಟು ಪಡೆಯುತ್ತಿದ್ದ. ಆರೋಪಿ ಕೃತ್ಯಕ್ಕೆ ಹೆಚ್ಚಾಗಿ ವಾಟ್ಸಪ್ ವಿಡಿಯೋ ಕಾಲ್ ಬಳಸುತ್ತಿದ್ದ ಎಂದು ತಿಳಿದು ಬಂದಿದೆ.

ಮನೆಯಲ್ಲೇ ಕೂತು ನಿರ್ದೇಶನ:
ವಾಟ್ಸಪ್ ವಿಡಿಯೋ ಕಾಲ್ ಮುಖಾಂತರ ಮತ್ತೊಬ್ಬ ಆರೋಪಿ ಬರುತ್ತಿದ್ದ. ಮನೆಯಲ್ಲೇ ಕೂತು ಅಂಗಡಿಯನ್ನು ದೋಚಲು ವಿಡಿಯೋ ಕಾಲ್ ಮುಖಾಂತರ ಆರೋಪಿ ವಿಕ್ರಮ್ ಬಂಧಿತ ಫೈಸಲ್​ಗೆ ಸೂಚನೆ ನೀಡುತ್ತಿದ್ದ. ಅಂಗಡಿಯಲ್ಲಿ ಕದಿಯೋದನ್ನು ಮೊಬೈಲ್​ನಲ್ಲೇ ವಿಕ್ರಮ್ ನೋಡುತ್ತಿದ್ದ. ಆರೋಪಿಗಳ ಮಾಸ್ಟರ್ ಮೈಂಡ್ ಗೇಮ್​ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ಆಧರಿಸಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಖೆಡ್ಡಾಕ್ಕೆ ಬೀಳಿಸಿದೆ.

ಬಂಧಿತ ಫೈಸಲ್ ಬಳಿ ಲಕ್ಷಾಂತರ ಮೌಲ್ಯದ ಬ್ರ್ಯಾಂಡೆಡ್ ವಾಚ್​ಗಳು, ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಮತ್ತೊಬ್ಬ ಆರೋಪಿ ವಿಕ್ರಮ್​ಗಾಗಿ ಅಶೋಕನಗರ ಪೊಲೀಸರು ಬಲೆ ಬೀಸಿದ್ದಾರೆ.



Published On - 9:21 am, Tue, 28 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us