ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ

| Updated By: ganapathi bhat

Updated on: Jul 06, 2021 | 3:41 PM

ಜೆ.ಸಿ. ನಗರ ಹಾಗೂ ಸಂಜಯನಗರ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ನೈಜಿರಿಯನ್ ಪ್ರಜೆ ಸೇರಿ ಒಟ್ಟು 10 ಆರೋಪಿಗಳ ಬಂಧನವಾಗಿದೆ.

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ 11 ಜನ ವಿದ್ಯಾರ್ಥಿಗಳ ಬಂಧನ; ಉತ್ತರ ವಿಭಾಗದ ಪೊಲೀಸರಿಂದ ವಿಚಾರಣೆ
ಡ್ರಗ್ ಕೇಸ್​ನಲ್ಲಿ ಬಂಧಿತ ಆರೋಪಿಗಳು
Follow us on

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿರುವ ಆತಂಕಕಾರಿ ಘಟನೆ ನಗರದಲ್ಲಿ ನಡೆದಿದೆ. ಜೆ.ಸಿ. ನಗರ ಹಾಗೂ ಸಂಜಯನಗರ ಪೊಲೀಸರಿಂದ ಡ್ರಗ್ಸ್ ಪ್ರಕರಣದಲ್ಲಿ 11 ಜನರ ಸೆರೆಯಾಗಿದೆ. 60 ಗ್ರಾಂ ವೀಡ್ ಆಯಿಲ್, 1.1 ಕೆಜಿ ಗಾಂಜಾವನ್ನು ವಿದ್ಯಾರ್ಥಿಗಳ ಗುಂಪಿನಿಂದ ವಶಪಡಿಸಿಕೊಳ್ಳಲಾಗಿದೆ. ಸ್ಯಾಂಡಲ್​ವುಡ್, ಸೆಲೆಬ್ರಿಟಿ ಮುಂತಾದ ಕಡೆಯಲ್ಲಿ ಸದ್ದುಮಾಡಿದ್ದ ಡ್ರಗ್ಸ್ ಜಾಲದ ಪ್ರಕರಣ ಇದೀಗ ವಿದ್ಯಾರ್ಥಿ ವಲಯವನ್ನೂ ಬಿಟ್ಟಿಲ್ಲ ಎಂಬುದನ್ನು ಸೂಚಿಸಿದೆ. ವಿದ್ಯಾರ್ಥಿಗಳೂ ಈ ಜಾಲಕ್ಕೆ ಸಿಲುಕಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಿಂದ 137 ಎಂಡಿಎಂಎ, 8.5 ಗ್ರಾಂ ಕೊಕೇನ್, 1 ಲ್ಯಾಪ್‌ಟಾಪ್ ಹಾಗೂ ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನೈಜೀರಿಯಾ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ಸ್ಟುಡೆಂಟ್ ವೀಸಾದಡಿ ಭಾರತಕ್ಕೆ ಬಂದು ಅಕ್ರಮ ವಾಸ್ತವ್ಯ ಮಾಡಿದ್ದರು. ವೀಸಾ ಅವಧಿ ಮುಗಿದರೂ ಆಕ್ರಮವಾಗಿ ನೆಲೆಸಿದ್ದ ನ್ವಾನ್ಯಾ ಅವರು ಕೃತ್ಯದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಕಮ್ಮನಹಳ್ಳಿಯ ಪ್ರದೀಪ್ ಕುಮಾರ್ ಡ್ರಗ್ ಪೆಡ್ಲರ್ ಆಗಿದ್ದ. ಮಂಗಳೂರು ಮೂಲದ ಪ್ರದೀಪ್ ಕುಮಾರ್ ಬೆಂಗಳೂರಿನಲ್ಲಿ ಹೋಟೆಲ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ನಡೆಸುತ್ತಿದ್ದ. ಜೊತೆಗೆ ರೆಡ್ ಬಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಡಾರ್ಕ್ ವೆಬ್ ಮತ್ತು ವಿಕ್ಕರ್ ಮೆಸೆಂಜರ್ ಮೂಲಕ ಅಮಲು ಪದಾರ್ಥ ಖರೀದಿ ಮಾಡುತ್ತಿದ್ದ ಎಂದು ಮಾಹಿತಿ ತಿಳಿದುಬಂದಿದೆ. ಉತ್ತರ ವಿಭಾಗ ಪೊಲೀಸರಿಂದ ವಿಚಾರಣೆ ಮುಂದುವರಿದೆ.

ಜೆ.ಸಿ. ನಗರ ಹಾಗೂ ಸಂಜಯನಗರ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ನೈಜಿರಿಯನ್ ಪ್ರಜೆ ಸೇರಿ ಒಟ್ಟು 10 ಆರೋಪಿಗಳ ಬಂಧನವಾಗಿದೆ.

ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆ ಗಾಂಜಾ ಸೇವಿಸುವಾಗ ಬಲೆಗೆ ಬಿದ್ದ ಮತ್ತೋರ್ವ ನಟಿ; ವೈದ್ಯಕೀಯ ಪರೀಕ್ಷೆಯಲ್ಲೂ ನಿಷೇಧಿತ ವಸ್ತು ಸೇವನೆ ದೃಢ

ಬೆಂಗಳೂರು: ಮೀನಿನ ಬಾಕ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರ ಸೆರೆ