ಬೆಂಗಳೂರು: ಬೆಂಗಳೂರಿನ (Bengaluru) ತಲಘಟ್ಟಪುರದಲ್ಲಿ ಜೂ.28ರಂದು ನಡೆದಿದ್ದ ಅರುಣ್ ಕುಮಾರ್ ಎನ್ನುವ ವ್ಯಕ್ತಿ ಕೊಲೆ ಪ್ರಕರಣವನ್ನು ಪೊಲೀಸರು 40 ಗಂಟೆಗಳಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್ ಕುಮಾರ್ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಕಟ್ಟಿಕೊಂಡಿದ್ದ ಹೆಂಡತಿ (Wife). ಹೌದು…ರಂಜಿತಾ ಎನ್ನುವಾಕೆ ತನ್ನ ಪ್ರಿಯಕರನೊಂದಿಗೆ (Lover) ಸೇರಿಕೊಂಡು ಪತಿ ಅರುಣ್ ಕುಮಾರ್ನನ್ನು ಕೊಲೆ ಮಾಡಿದ್ದಾಳೆ. ಈ ಸಂಬಂಧ ಇದೀಗ ತಲಘಟ್ಟಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ರಂಜಿತಾ, ಪ್ರಿಯಕರ ಗಣೇಶ್, ಶರತ್ ಶಿವಾನಂದ, ದೀಪು ಬಂಧಿತ ಆರೋಪಿಗಳು.
ಆರೋಪಿ ಗಣೇಶ್, ರಂಜಿತಾ ನಡುವೆ ಅಕ್ರಮ ಸಂಬಂಧ ಇತ್ತು. ಆದ್ರೆ, ತಮ್ಮಿಬ್ಬರ ಲವ್ವಿಡವ್ವಿಗೆ ಪತಿ ಅರುಣ್ ಕುಮಾರ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ರಂಜಿತಾ ಜೂ.28ರಂದು ಪ್ರಿಯಕರ ಜತೆ ಸೇರಿ ಪತಿ ಅರುಣ್ನನ್ನು ಕೊಲೆ ಮಾಡಿಸಿದ್ದಳು ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೂ.28ರಂದು ಅರುಣ್ ಕುಮಾರ್ ಕೊಲೆಯಾಗಿತ್ತು. ಈ ಬಗ್ಗೆ ಬೆಂಗಳೂರಿನ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಪತ್ನಿ ಮೇಲೆ ಅನುಮಾನ ಬಂದಿದ್ದು, ಕೂಡಲೇ ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಟಾಬಯಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಪ್ರತಿಕ್ರಿಯಿಸಿದ್ದು, ಜೂನ್ 28ರ ಬೆಳಗ್ಗೆ 7 ಗಂಟೆಗೆ ಹತ್ಯೆ ಬಗ್ಗೆ ಮಾಹಿತಿ ಬಂದಿತ್ತು. ಹತ್ಯೆಯಾದ ವ್ಯಕ್ತಿ 27 ವರ್ಷದ ಅರುಣ್ ಕುಮಾರ್ ಎಂದು ಪತ್ತೆ ಮಾಡಲಾಗಿತ್ತು. ಮಾಹಿತಿ ಬಂದ 40 ಗಂಟೆಯಲ್ಲಿ ಪ್ರಕರಣವನ್ನ ಬೇಧಿಸಲಾಗಿದೆ. ಅರುಣ್ ಕುಮಾರ್ ಹೆಂಡತಿ ಹಾಗೂ ಆಕೆಯ ಜೊತೆ ಇನ್ನೂ ನಾಲ್ಕು ಜನ ಪುರುಷರು ಸೇರಿ ಕೊಲೆ ಮಾಡಿದ್ದಾರೆ. ಅರುಣ್ ಕುಮಾರ್ ಆರ್ ಆರ್ ನಗರದ ಜೆಎಸ್ ಎಸ್ ಕಾಲೇಜು ಬಳಿ ಇರುವ ಗೌಡರ ಮನೆ ಬೀಗರ ಊಟ ಹೋಟೆಲ್ ನಡೆಸುತ್ತಿದ್ದ. ಖಾರದ ಪುಡಿ ಎರಚಿ ಬೀಯರ್ ಬಾಟಲ್, ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ. ಮೊದಲೇ ಪ್ಲಾನ್ ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಖಾರದಪುಡಿ ಹಾಕಿ ಹೋಗಿದ್ದಾರೆ. ಆರೋಪಿಗಳ ಪೈಕಿ ಒಬ್ಬ ಫೈನಾನ್ಸಿರ್ ಇದ್ದಾನೆ. ಆತನಿಗೂ ಕೊಲೆಯಾದ ಅರುಣ್ ಪತ್ನಿಗೂ ಪರಿಚಯವಿತ್ತು. ಕೊಲೆಗೆ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:31 am, Mon, 3 July 23