Crime News: 70 ವರ್ಷದ ಅರ್ಚಕನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆಮೇಲೆ ಆತ ಮಾಡಿದ್ದೇನು ಗೊತ್ತಾ?
ತಮಿಳುನಾಡಿನ 70 ವರ್ಷದ ಅರ್ಚಕ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಳಿಕ ಶಿಕ್ಷೆಗೆ ಹೆದರಿ ದೇವಾಲಯದೊಳಗೆ ಬೀಗ ಹಾಕಿಕೊಂಡಿದ್ದಾನೆ. ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳದ ಆರೋಪದ ನಂತರ 70 ವರ್ಷದ ತಿಲಗರ್ ಎಂಬ ಅರ್ಚಕನನ್ನು ಬಂಧಿಸಲಾಗಿದೆ.
ಚೆನ್ನೈ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ದೇವಾಲಯದ ತಿಲಗರ್ ಎಂಬ 70 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸಾದ ನೀಡುವ ನೆಪದಲ್ಲಿ ಅರ್ಚಕ 5 ವರ್ಷದ ಮಗು ಹಾಗೂ ಆಕೆಯ ಸ್ನೇಹಿತರನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದರು.
ತಿಲಗರ್ ಎಂಬ ಅರ್ಚಕ ದೇವಸ್ಥಾನದ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೆ ಪ್ರಸಾದ ನೀಡುವುದಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಅವರು 5 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಮನೆಗೆ ಹಿಂದಿರುಗಿದ ನಂತರ, ಆ ಹುಡುಗಿ ಧೈರ್ಯದಿಂದ ತನ್ನ ಹೆತ್ತವರಿಗೆ ಈ ಭಯಾನಕ ಘಟನೆಯನ್ನು ಹೇಳಿದಳು. ಬಳಿಕ ಊರಿನವರು ಆ ಅರ್ಚಕನನ್ನು ಹೊಡೆಯಲು ದೇವಸ್ಥಾನದ ಬಳಿ ಜಮಾಯಿಸಿದರು.
ಇದನ್ನೂ ಓದಿ: ಹರಿಯಾಣದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 13 ಕಾಂಗ್ರೆಸ್ ಶಾಸಕರ ಉಚ್ಛಾಟನೆ
ಇದರಿಂದ ಆತಂಕಗೊಂಡ ಅರ್ಚಕ ತನ್ನನ್ನು ರಕ್ಷಿಸಿಕೊಳ್ಳಲು ದೇವಸ್ಥಾನದ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದ ಗ್ರಾಮಸ್ಥರು ಒಗ್ಗಟ್ಟಾಗಿ ಬಂದು ಆತನಿಗೆ ಥಳಿಸಲು ಸಜ್ಜಾಗಿದ್ದಾರೆ. ಬಳಿಕ ಪೊಲೀಸರು ಬಂದು ಆ ಅರ್ಚಕನನ್ನು ವಶಕ್ಕೆ ಪಡೆದಿದ್ದಾರೆ.
तमिलनाडु में 70 वर्षीय पुजारी ने 5 साल की मासूम बच्ची को मिठाई के बहाने मंदिर मंदिर में बुलाकर यौन उत्पीड़न किया।
Hello झूठा, दलाल @AmanChopra_ इस खबर को दिखाओ अपने चैनल पर । pic.twitter.com/emRKBkzuBy
— Kavish Aziz (@azizkavish) September 27, 2024
ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಿಲಗರ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Fri, 27 September 24