ಚೆನ್ನೈ: ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದನ್ನು ಸಾಕಷ್ಟು ನೋಡಿದ್ದೇವೆ. ಕೇಳಿದ್ದೇವೆ. ಅಲ್ಲದೇ ಬಾಲ್ಯ ವಿವಾಹದ ಅಡಿಯಲ್ಲಿ ಜೈಲಿಗೆ ಹೋಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆದ್ರೆ, ಇಲ್ಲೋರ್ವ ಯುವತಿ ತನಗಿಂತ ಚಿಕ್ಕ ಅಂದ್ರೆ, ಅಪ್ರಾಪ್ತ ವಯಸ್ಸಿನವನನ್ನು ಮದುವೆಯಾಗಿ ಇದೀಗ ಜೈಲು ಸೇರಿದ್ದಾಳೆ.
ಹೌದು….ಅಪ್ರಾಪ್ತನ ಜೊತೆ ವಿವಾಹವಾಗಿ ಗರ್ಭಿಣಿಯಾಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದಾರೆ.
ಪ್ರೇಯಸಿ ಜೊತೆ ಪ್ರವಾಸಕ್ಕೆ ಹೊರಟ ಗಂಡ! 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಮನನೊಂದು ನೇಣಿಗೆ ಶರಣು
ಕಳೆದ ಏಪ್ರಿಲ್ ತಿಂಗಳಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿ ಪೋಷಕರು ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು, ಅಪ್ರಾಪ್ತ ವಿದ್ಯಾರ್ಥಿ ಯುವತಿ ಜೊತೆ ವಾಸವಾಗಿರುವುದನ್ನು ಪತ್ತೆ ಮಾಡಿದ್ದಾರೆ.
ಬಳಿಕ ಪೊಲೀಸರು ಯುವತಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಸೇಲಂ ನಗರ ಪೊಲೀಸ್ ಕಮಿಷನರ್ ನಜ್ಮುಲ್ ಹೂಡಾ ಮಾಹಿತಿ ನೀಡಿದ್ದಾರೆ.
ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಅಪ್ರಾಪ್ತ ಬಾಲಕ ಬಂಧಿತಳಾದ ಯುವತಿಯ ಜೂನಿಯರ್ ಆಗಿದ್ದಾನೆ ಎಂದು ಈ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ.
ಬಸ್ ನಿಲ್ದಾಣದಲ್ಲೇ ತಾಳಿಕಟ್ಟಿದ ಭೂಪ
ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು, 17 ವರ್ಷದ ಹುಡುಗನೊಬ್ಬ, 16 ವರ್ಷದ ಬಾಲಕಿ ಜೊತೆ ವಿವಾಹವಾಗಿದ್ದ. ಬಸ್ ನಿಲ್ದಾಣದಲ್ಲಿ ಹುಡುಗ ಬಾಲಕಿಗೆ ತಾಳಿ ಕಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪ್ರಕರಣದ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.
ಹೆಚ್ಚುತ್ತಿರುವ ಬಾಲ್ಯ ವಿವಾಹ
ಬಾಲ್ಯವಿವಾಹ ತಡೆಗೆ ಕೇಂದ್ರ ಹಾಗೂ ದೇಶದ ಆಯಾ ರಾಜ್ಯ ಸರ್ಕಾರಗಳು ಹಲವು ಕ್ರಮಗಳ ಜೊತೆ ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಲೇ ಇವೆ. ಆದರೂ ಸಹ ದೇಶದಲ್ಲಿ ಬಾಲ್ಯವಿವಾಹ ಪ್ರಕರಣಗಳು ಅಧಿಕವಾಗುತ್ತಲೇ ಇವೆ. ಮೊನ್ನೇ ಅಷ್ಟೇ ಕೇಂದ್ರ ಗೃಹ ಇಲಾಖೆ ಸಮೀಕ್ಷೆಯ ವರಿದಿ ಬಹಿರಂಗವಾಗಿದ್ದು, ಜಾರ್ಖಂಡ್ನಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿವೆ.
ಜಾರ್ಖಂಡ್ನಲ್ಲಿ ವಯಸ್ಸಿಗೆ ಬರುವ ಮೊದಲೇ (18 ವರ್ಷಕ್ಕಿಂತ ಮೊದಲು) ಮದುವೆಯಾಗುವ ಹುಡುಗಿಯರ ಶೇಕಡವಾರು ಪ್ರಮಾಣ 5.8 ರಷ್ಟಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 54.9 ಪ್ರತಿಶತದಷ್ಟು ಹುಡುಗಿರು 21 ವಯಸ್ಸಿಗೆ ಬರುವ ಮೊದಲೇ ವಿವಾಹವಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
Published On - 9:12 pm, Wed, 12 October 22