Tamilnadu: ತಿರುಚ್ಚಿ ಮಾರುಕಟ್ಟೆಯಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟ, ಓರ್ವ ಸಾವು, ಹಲವು ಮಂದಿಗೆ ಗಾಯ

ತಿರುಚ್ಚಿಯ ಮಾರುಕಟ್ಟೆಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

Tamilnadu: ತಿರುಚ್ಚಿ ಮಾರುಕಟ್ಟೆಯಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟ, ಓರ್ವ ಸಾವು, ಹಲವು ಮಂದಿಗೆ ಗಾಯ
Tamilnadu
Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2022 | 2:11 PM

ತಮಿಳುನಾಡು: ತಮಿಳುನಾಡಿನ (Tamilnadu) ತಿರುಚ್ಚಿಯ ಮಾರುಕಟ್ಟೆಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ, (ಸೆಪ್ಟೆಂಬರ್ 2) ಈ ಘಟನೆ ನಡೆದಿದೆ. ಇಡೀ ಘಟನೆಯು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಸ್ಫೋಟ ಸಂಭವಿಸಿದ ಕೊಟ್ಟೈ ವಾಸಲ್ ಪ್ರದೇಶವು ಜನಸಂದನಿ ಇರುವ ಮಾರುಕಟ್ಟೆಯಾಗಿದೆ. ಭಾನುವಾರದ ಕಾರಣ ತುಂಬಾ ಅಲ್ಲಿ ಸೇರಿದರು. ಏಕಾಏಕಿ ಸಂಭವಿಸಿದ ಸ್ಫೋಟವು ಜನರನ್ನು ಬೆಚ್ಚಿಬೀಳಿಸಿದೆ, ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಾಹನಗಳ ಗಾಜು ಕೂಡ ಪುಡಿಪುಡಿಯಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ವ್ಯಕ್ತಿಯನ್ನು ಮಟ್ಟು ರವಿ ಎಂದು ಗುರುತಿಸಿದ್ದು, ಸ್ಫೋಟದ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಹೀಲಿಯಂ ಟ್ಯಾಂಕ್ ಸ್ಫೋಟಗೊಂಡ ಬಲೂನ್ ಮಾರಾಟಗಾರರನ್ನು ಪೊಲೀಸರು ಪತ್ತೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

Published On - 2:10 pm, Mon, 3 October 22