Video Viral: ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಗೆ ಬೆಲ್ಟ್ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ ವ್ಯಕ್ತಿ
ಮಹಿಳೆಯೊಬ್ಬರನ್ನು ಹಿಂದಿನಿಂದ ಬಂದು ಕುತ್ತಿಗೆಗೆ ಬೆಲ್ಟ್ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಸಿಟಿವಿ ವಿಡಿಯೋ ಕೂಡ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನ್ಯೂಯಾರ್ಕ್ ನಗರದಲ್ಲಿ ವ್ಯಕ್ತಿಯೊಬ್ಬ ಹಿಂದೆಯಿಂದ ಬಂದು ಮಹಿಳೆಯ ಕುತ್ತಿಗೆಗೆ ಬೆಲ್ಟ್ನಿಂದ ಬಿಗಿದಿದ್ದಾನೆ, ಈ ವೇಳೆ ಮಹಿಳೆ ನೆಲಕ್ಕೆ ಬಿದ್ದಿದ್ದು, ಆಕೆಯನ್ನು ಕಾರಿನ ಬಳಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಇದೀಗ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಗರದ ಬ್ರಾಂಕ್ಸ್ ಬರೋದಲ್ಲಿ ಮಹಿಳೆ ಮೇಲೆ ಈ ದಾಳಿ ನಡೆದಿದೆ. ಆದರೆ ಮಹಿಳೆ ಮೇಲೆ ದಾಳಿ ಮಾಡಿದವವನ್ನು ಯಾರೆಂದು ಇಲ್ಲಿಯವರೆಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆ ವ್ಯಕ್ತಿ ಮುಖಕ್ಕೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡು ಮಹಿಳೆಯನ್ನು ಸುಮಾರು ದೂರದಿಂದ ಹಿಂಬಾಲಿಸಿಕೊಂಡು ಬಂದು, ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ತುಂಬಾ ಒದ್ದಾಡಿರುವುದನ್ನು ಈ ಸಿಸಿಟಿವಿಯಲ್ಲಿ ಕಾಣಬಹುದು. ಕಾರಿನ ಸಂದಿಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಕುತ್ತಿಗೆಗೆ ಬೆಲ್ಟ್ ಬಿಗಿದ ಕಾರಣ ಮಹಿಳೆ ಪ್ರಜ್ಞಾ ತಪ್ಪಿದ್ದಾಳೆ. ನಂತರ ಆಕೆಯ ಮೇಲೆ ಮನಬಂದಂತೆ ಅತ್ಯಾಚಾರ ಮಾಡಿದ್ದಾನೆ.
ಇದನ್ನೂ ಓದಿ: ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು
ವೈರಲ್ ವಿಡಿಯೋ ಇಲ್ಲಿದೆ:
JUST IN: Woman strangled by a belt while getting dragged in between two cars where she was assaulted.
The video was posted online with little information besides that it happened in New York.
Crimes against women continue to plague NYC. Just yesterday for example, a 17-year-old… pic.twitter.com/hwzSJ2rUYI
— Collin Rugg (@CollinRugg) May 9, 2024
ನಂತರ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆತನನ್ನು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಹೇಳಿಕೆಯನ್ನು ಕೂಡ ಪಡೆಯಲಾಗಿದ್ದು, ಆಕೆ ಹೇಳಿರುವಂತೆ ಈ ವ್ಯಕ್ತಿ ಸಾಧಾರಣ ಮೈಬಣ್ಣವನ್ನು ಹೊಂದಿದ್ದು, 5 ಅಡಿ 9 ಇಂಚು ಎತ್ತರವನ್ನು ಹೊಂದಿದ್ದು, ಬಿಳಿ ಸ್ವೆಟ್‌ಪ್ಯಾಂಟ್‌ಗಳು ಮತ್ತು ಕಪ್ಪು-ಕೆಂಪು-ಬಿಳಿ ಸ್ನೀಕರ್‌ಗಳಲ್ಲಿ ಬಿಳಿ ಅಕ್ಷರದಿಂದ ಬರೆಯಲಾದ ಕಪ್ಪು ಸ್ವೆಟ್‌ಶರ್ಟ್ ಧರಿಸಿದ್ದಾನೆ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:38 pm, Fri, 10 May 24