ಬೆಂಗಳೂರು: ನಾಯಿ ವಿಚಾರಕ್ಕೆ ಹೊಡೆದಾಡಿಕೊಂಡ ಬಾಡಿಗೆದಾರರು ಹಾಗೂ ಮಾಲೀಕರು

| Updated By: Rakesh Nayak Manchi

Updated on: Feb 04, 2024 | 8:47 AM

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ನಾಯಿ ವಿಚಾರಕ್ಕೆ ಒಂದಲ್ಲಾ ಒಂದು ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇದೀಗ, ಜೀವನ್ ಭೀಮಾ ನಗರದಲ್ಲಿ ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕ ತನ್ನ ಸಹಚರರೊಂದಿಗೆ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಡರಾತ್ರಿ ಅಪಾರ್ಟ್​ಮೆಂಟ್​ನ ಫ್ಲಾಟ್​ಗೆ ನುಗ್ಗಿ ಹಲ್ಲೆ ನಡೆಸಲಾಗಿದ್ದು, ದೂರು ನೀಡಿದರೂ ಪೊಲೀಸರು FIR ದಾಖಲಿಸಿಲ್ಲ ಎಂದು ಆರೋಪಿಸಲಾಗಿದೆ.

ಬೆಂಗಳೂರು: ನಾಯಿ ವಿಚಾರಕ್ಕೆ ಹೊಡೆದಾಡಿಕೊಂಡ ಬಾಡಿಗೆದಾರರು ಹಾಗೂ ಮಾಲೀಕರು
ಬೆಂಗಳೂರು: ನಾಯಿ ಸಾಕುವ ವಿಚಾರಕ್ಕೆ ಹೊಡೆದಾಡಿಕೊಂಡ ಬಾಡಿಗೇದಾರರು ಹಾಗೂ ಮಾಲೀಕರು
Follow us on

ಬೆಂಗಳೂರು, ಫೆ.4: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ನಗರದಲ್ಲಿ ನಾಯಿ ವಿಚಾರಕ್ಕೆ ಒಂದಲ್ಲಾ ಒಂದು ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇದೀಗ, ಜೀವನ್ ಭೀಮಾ ನಗರದಲ್ಲಿ ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಡರಾತ್ರಿ ಅಪಾರ್ಟ್​ಮೆಂಟ್​ನ ಫ್ಲಾಟ್​ಗೆ ನುಗ್ಗಿ ಹಲ್ಲೆ ನಡೆಸಲಾಗಿದೆ.

ನಾಯಿ ಸಾಕಬಾರದು ಎಂದು ಫ್ಲಾಟ್ ಮಾಲೀಕ ಸೂಚಿಸಿದ್ದು, ಇದಕ್ಕೆ ಬಾಡಿಗೆದಾರರು ಒಪ್ಪಿಕೊಂಡಿಲ್ಲ. ಈ ವೇಳೆ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದಾಗ ಕಿರಿಕ್ ನಡೆದಿದೆ. ಫೆಬ್ರವರಿ 3 ರಂದು ಮಧ್ಯರಾತ್ರಿ ಒಂದು ಗಂಟೆಗೆ ಫ್ಲಾಟ್​ಗೆ ನುಗ್ಗಿದ ನಾಲ್ಕೈದು ಮಂದಿ ಇದ್ದ ಗ್ಯಾಂಗ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಗ್ವಾಲಿಯರ್​: ತನ್ನ ಮಾಲೀಕನಿಗೆ 60 ಕಡೆ ಕಚ್ಚಿ ಮಾಂಸ ತಿಂದ ಹಸಿದ ಸಾಕು ನಾಯಿ

ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಎಫ್​ಐಆರ್ ದಾಖಲಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Sun, 4 February 24