ಆನೇಕಲ್: ಬಂಧನಕ್ಕೆ ತೆರಳಿದ್ದಾಗ ಹಲ್ಲೆ ಮಾಡಿದ್ದು, ಆರೋಪಿ (Accused) ಕಾಲಿಗೆ ಫೈರಿಂಗ್ (shot) ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಆರೋಪಿ ವರುಣ್ ಜಿಗಣಿ ಕಾಲಿಗೆ ಗುಂಡು ತಗುಲಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆನೆಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚಂದ್ರಪ್ಪರಿಂದ ಫೈರಿಂಗ್ ಮಾಡಲಾಗಿದೆ. ಈ ಹಿಂದೆ ಕೂಡ ಪೊಲೀಸ್ ಮೇಲೆ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ತೆರಳಿದ್ದಾರೆ. ಜಿಗಣಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ವರುಣ್ ಅಲಿಯಾಸ್ ಕೆಂಚ ಅಡಗಿ ಕೂತಿದ್ದ. ಪೊಲೀಸರು ಸ್ಟೇಷನ್ ಕರೆದರೆ ಬರಲು ಒಪ್ಪದ ಕೆಂಚ, ಈ ವೇಳೆ ಪಿ.ಸಿ ಶಂಕರ್ ಮೇಲೆ ವರುಣ್ ಅಟ್ಯಾಕ್ ಮಾಡಿದ್ದಾನೆ. ಹೀಗಾಗಿ ತಮ್ಮ ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಚಂದ್ರಪ್ಪ ಅವರು ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ
ಅಜಯ್ ಅಲಿಯಾಸ್ ಮೆಂಟಲ್ ಎನ್ನುವ ಮತ್ತೋರ್ವ ಆರೋಪಿಗೆ ಕೂಡ ಗುಂಡೇಟು ಬಿದ್ದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನಾಯನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ಅವಿತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಜಿಗಣಿ ಠಾಣೆ ಇನ್ಸ್‌ಪೆಕ್ಟರ್ ಮತ್ತು ತಂಡ ಆರೋಪಿ ಬಂಧನಕ್ಕೆ ಯತ್ನಿಸಿದ್ದು, ಈ ವೇಳೆ ಕ್ರೈಂ ಸಿಬ್ಬಂದಿ ಮಹೇಶ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಸುದರ್ಶನ್ರಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ವಾರ್ನಿಂಗ್ ನೀಡಿದ್ದಾರೆ. ಅದನ್ನು ಲೆಕ್ಕಿಸದೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಬಲಗಾಲಿಗೆ ಗುಂಡು ಹಾರಿಸಲಾಗಿದೆ.
ಗಾಯಾಳು ಮತ್ತು ಕ್ರೈಮ್ ಸಿಬ್ಬಂದಿ ಮಹೇಶ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜಯ್ ಅಂಡ್ ಟೀಮ್ ಕಳೆದ ಒಂದು ವಾರದಲ್ಲಿ ಸರಣಿ ಕಿಡ್ನಾಪ್ ಮತ್ತು ಡಕಾಯಿತಿ ನಡೆಸಿದ್ದರು. ಜಿಗಣಿ ಮತ್ತು ಬನ್ನೇರುಘಟ್ಟ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಸರಣಿ ಕ್ರೈಂ ಪೊಲೀಸರಿಗೆ ತಲೆ ನೋವಾಗಿತ್ತು.
ಇದನ್ನೂ ಓದಿ: Talaghattapura: 19ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಕಾರವಾರ: ದೇವರು ಹೇಳಿತೆಂದು ಅರಣ್ಯದಲ್ಲಿ ಬಾವಿ ತೆಗೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ಪೂಜೆ ಮಾಡಿ ವ್ಯಕ್ತಿ ಬಾವಿ ತೆಗೆಯುತ್ತಿದ್ದ. ಮೀಸಲು ಅರಣ್ಯ ಪ್ರದೇಶದಲ್ಲಿ ಬಾವಿ ತೆಗೆಯುತ್ತಿದ್ದ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಿ ಹಾಗೂ ಬಾವಿ ತೆಗೆಯಲು ಸಹಾಯ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.
ವಿಜಯಪುರ: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾದ ಘಟನೆ ಜಿಲ್ಲೆಯ ಬಸವಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ನಡೆದಿದೆ. ಬಹುಧಾನ್ಯಳಿಂದ ತಯಾರಿಸಿದ ಪೌಡರ್ ಪುಷ್ಠಿ ಆಹಾರ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಮನಗೂಳಿ ಪಟ್ಟಣದ ವಾರ್ಡ್ ನಂಬರ್ 15 ರ ಅಂಗನಾಡಿ ಕೇಂದ್ರಕ್ಕೆ ನೀಡಿರುವ ಪುಷ್ಠಿ ಪೌಡರ್ನಲ್ಲಿ ಹುಳುಗಳು ಪತ್ತೆಯಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Sun, 25 December 22