Bengaluru: ಸರಗಳ್ಳತನ ಮಾಡುತ್ತಿದ್ದ ಖದೀಮರ ಬಂಧನ; 42 ಗ್ರಾಂ ತೂಕದ 2 ಚಿನ್ನದ ಸರ ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 04, 2023 | 12:32 PM

ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುವವರನ್ನ ಟಾರ್ಗೆಟ್ ಮಾಡಿ, ಅವರಿಂದ ಚಿನ್ನಾಭರಣ, ಹಣ ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

Bengaluru: ಸರಗಳ್ಳತನ ಮಾಡುತ್ತಿದ್ದ ಖದೀಮರ ಬಂಧನ; 42 ಗ್ರಾಂ ತೂಕದ 2 ಚಿನ್ನದ ಸರ ವಶಕ್ಕೆ
ಸರಗಳ್ಳರು ಅರೆಸ್ಟ್​
Follow us on

ಬೆಂಗಳೂರು ಗ್ರಾಮಾಂತರ: ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮರನ್ನ ಆನೇಕಲ್(Anekal) ಉಪವಿಭಾಗದ ಹೆಬ್ಬಗೋಡಿ ಪೋಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ಕೊಪ್ಪ ಗೇಟ್ ನಿವಾಸಿಗಳಾದ ಹರೀಶ್ ಅಲಿಯಾಸ್ ಗೆಂಡೆ(24), ಸಲ್ಮಾನ್ (24) ಬಂಧಿತ ಆರೋಪಿಗಳು. ಬಂಧಿತರಿಂದ 42 ಗ್ರಾಂ ತೂಕದ ಎರಡು ಚಿನ್ನದ ಸರ ಸೇರಿದಂತೆ 2 ದ್ವಿಚಕ್ರ ವಾಹನ ಮತ್ತು 2 ಮೊಬೈಲ್ ಪೋನ್​ನ್ನು ವಶಕ್ಕೆ ಪಡೆಯಲಾಗಿದೆ.

ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುವವರನ್ನ ಟಾರ್ಗೆಟ್ ಮಾಡುತ್ತಿದ್ದ ಅಸಾಮಿಗಳು

ಇನ್ನು ಈ ಖತರ್ನಾಕ್​ ಕಳ್ಳರು ಕ್ಷಣಾರ್ಧದಲ್ಲಿ ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುವವರನ್ನ ಟಾರ್ಗೆಟ್ ಮಾಡಿ, ಕೈಚಳಕ ತೋರಿಸಿ ಎಸ್ಕೇಪ್ ಆಗುತ್ತಿದ್ದರು. ಈ ಹಿಂದೆ ಇದೇ ರೀತಿಯ ಹಲವು ಕೃತ್ಯಗಳನ್ನ ಎಸಗಿ ಜೈಲಿಗೂ ಕೂಡ ಈ ಆರೋಪಿಗಳು ಹೋಗಿದ್ದರು. ಆದರೂ, ಹಳೆ ಚಾಳಿಯನ್ನು ಬಿಡದೇ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದರು. ಕಳೆದ 3ನೇ ತಾರೀಖಿನಂದು ಹುಲಿಮಂಗಲ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುಮಾರನ್ ಎಂಬುವವರನ್ನ ಅಡ್ಡಗಟ್ಟಿ ರಾಬರಿ ಮಾಡಿದ್ದರು. ಈ ವೇಳೆ 30 ಗ್ರಾಂ ತೂಕದ ಚಿನ್ನದ ಚೈನ್, ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ:ನೆಲಮಂಗಲ: ಪೊಲೀಸ್ ಠಾಣೆ ಬಳಿಯೇ ಕಳ್ಳರ ಕರಾಮತ್ತು, ಮೀನಿನ ವ್ಯಾಪಾರಿಯ ಮನೆ ಬೀಗ ಮುರಿದು ಕಳ್ಳತನ

ಪೋಲೀಸರ ತನಿಖೆಯಲ್ಲಿ ಮತ್ತಷ್ಟು ಪ್ರಕರಣಗಳು ಬೆಳಕಿಗೆ

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೆಬ್ಬಗೋಡಿ ಪೋಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಪೋಲೀಸರ ತನಿಖೆಯಲ್ಲಿ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಲವು ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಇದೀಗ ಆರೋಪಿಗಳನ್ನ ಬಂಧಿಸಿ ಹೆಬ್ಬಗೋಡಿ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.

ದೇವಸ್ಥಾನವನ್ನೇ ಟಾರ್ಗೆಟ್​ ಮಾಡಿದ ಕಳ್ಳರು; ಆರು ತಿಂಗಳಲ್ಲಿ ಎರಡು ಸಲ ಕಳ್ಳತನ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ಹೊರ ವಲಯದ ಮಲಹಾಳ್ ಬೆಟ್ಟದ ರಂಗನಾಥ ಸ್ವಾಮೀ ದೇವಸ್ಥಾನವನ್ನ ಟಾರ್ಗೆಟ್ ಮಾಡಿದ ಕಳ್ಳರು. ಆರು ತಿಂಗಳಲ್ಲಿ ಎರಡು ಸಲ ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಎಸಗಿದ್ದಾರೆ. ಕಳೆದ ಜನವರಿ 16 ರಂದು ಹುಂಡಿ ಒಡೆದು ಹತ್ತು ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದರು. ಇದೀಗ ನಿನ್ನೆ(ಜು.3) ರಾತ್ರಿ ದೇವಸ್ಥಾನ ಹುಂಡಿ ಒಡೆದು ಸುಮಾರ ಒಂದುವರೆಯಿಂದ ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿದೆ. ಇನ್ನು ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಅದು ಕೆಲಸ ಮಾಡುತ್ತಿಲ್ಲ. ಒಂದೇ ದೇವಸ್ಥಾನದಲ್ಲಿ ಎರಡು ಸಲ ಕಳ್ಳತನವಾದರೂ ಪೊಲೀಸರು ಮಾತ್ರ ಕೈ ಕಟ್ಟಿಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ