ನೆಲಮಂಗಲ: ಪೊಲೀಸ್ ಠಾಣೆ ಬಳಿಯೇ ಕಳ್ಳರ ಕರಾಮತ್ತು, ಮೀನಿನ ವ್ಯಾಪಾರಿಯ ಮನೆ ಬೀಗ ಮುರಿದು ಕಳ್ಳತನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮರಳೋಣಿ ಬಡಾವಣೆಯಲ್ಲಿ ಮೀನಿನ ವ್ಯಾಪಾರಿ ವೆಂಕಟೇಶ್​ ಎಂಬವರ ಮನೆಗೆ ಬೀಗ ಮುರಿದು ನುಗ್ಗಿ ಕಳ್ಳತನ ಮಾಡಲಾಗಿದೆ.

ನೆಲಮಂಗಲ: ಪೊಲೀಸ್ ಠಾಣೆ ಬಳಿಯೇ ಕಳ್ಳರ ಕರಾಮತ್ತು, ಮೀನಿನ ವ್ಯಾಪಾರಿಯ ಮನೆ ಬೀಗ ಮುರಿದು ಕಳ್ಳತನ
ಕಳ್ಳತನ ನಡೆದಿರುವ ಮನೆಗೆ ಶ್ವಾನದಳದೊಂದಿಗೆ ತೆರಳಿದ ಪೊಲೀಸರು ಶೋಧ ನಡೆಸಿದರು
Follow us
TV9 Web
| Updated By: Ganapathi Sharma

Updated on:Jul 03, 2023 | 7:19 PM

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮರಳೋಣಿ ಬಡಾವಣೆಯಲ್ಲಿ ಮೀನಿನ ವ್ಯಾಪಾರಿ ವೆಂಕಟೇಶ್​ ಎಂಬವರ ಮನೆಗೆ ಬೀಗ ಮುರಿದು ನುಗ್ಗಿ ಕಳ್ಳತನ (Theft) ಮಾಡಲಾಗಿದೆ. 10 ಲಕ್ಷ ನಗದು, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ. ಬೀರುವಿನಲ್ಲಿ ಇಟ್ಟಿದ್ದ ಹಣ ಹಾಗೂ ಚಿನ್ನ, ಬೆಳ್ಳಿ ಕಳವಾಗಿದೆ. ಕಳ್ಳತನವಾಗಿರುವ ಮನೆ ನೆಲಮಂಗಲ ಟೌನ್​​ ಪೊಲೀಸ್ ಠಾಣೆ ಬಳಿಯೇ ಇದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಳ್ಳತನದ ವೇಳೆ ಬೀರುವಿನಲ್ಲಿದ್ದ ನಕಲಿ ಒಡವೆಗಳನ್ನು ಕಳ್ಳರು ಅಲ್ಲೇ ಬಿಟ್ಟಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Mon, 3 July 23