ಕಾರವಾರ: ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 06, 2023 | 10:37 PM

ದೇವಸ್ಥಾನದಲ್ಲಿ ಕಳ್ಳತನ ಮಾಡಿ ಬಳಿಕ ತಪ್ಪಿಸಿಕೊಳ್ಳಲು ಹೋಗಿ ಅಪಘಾತವಾಗಿ ಕಳ್ಳರು ಸಿಕ್ಕಿಬಿದ್ದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಕ್ಕೆಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಕಾರವಾರ: ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು
ಪ್ರಾತಿನಿಧಿಕ ಚಿತ್ರ
Image Credit source: vijayavani.net
Follow us on

ಕಾರವಾರ: ದೇವಸ್ಥಾನದಲ್ಲಿ ಕಳ್ಳತನ ಮಾಡಿ ಬಳಿಕ ತಪ್ಪಿಸಿಕೊಳ್ಳಲು ಹೋಗಿ ಅಪಘಾತವಾಗಿ ಕಳ್ಳರು (Thieves) ಸಿಕ್ಕಿಬಿದ್ದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಕ್ಕೆಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಇರ್ಫಾನ್ ಹಾಗೂ ಆರೀಫ್ ಬಂಧನಕ್ಕೊಳಗಾದ ಕಳ್ಳರು. ದೇವಸ್ಥಾನದ ಬೀಗ ಮುರಿದು 55 ಸಾವಿರ ರೂ. ಹಣ ಮತ್ತು ದೇವರ ಪರಿಕರಗಳನ್ನು ಕಳ್ಳರು ಕದ್ದಿದ್ದರು. ಜನರು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಂಡು ಹೋಗಿದ್ದ ಕಳ್ಳರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಭಟ್ಕಳ ಪೊಲೀಸರಿಗೆ ಮಾಲು ಸಮೇತ ಸ್ಥಳೀಯರು ವಶಕ್ಕೆ ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವು

ತುಮಕೂರು: ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವನ್ನಪ್ಪಿದ್ದು, ಸವಾರನಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಯುವತಿ, ಗಾಯಾಳು ಯುವಕನ ಹೆಸರು ತಿಳಿದುಬಂದಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಡಿಕೇರಿ: ಸಾಲದ ಚೆಕ್​ ನೀಡಲು ಲಂಚ, ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಆಟೋ ಚಾಲಕನ ಮೇಲೆ ಕಾಡಾನೆ ದಾಳಿ

ಕೊಡಗು: ಆಟೋ ಚಾಲಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಆಟೋ ಸಂಪೂರ್ಣ ಜಖಂ ಆಗಿರುವಂತಹ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿ ನಡೆದಿದೆ. ಚಾಲಕ ಕಿರಣ್​​ಗೆ ಗಂಭೀರ ಗಾಯವಾಗಿದೆ. ಆಟೋದಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಗಾಯಾಳು ಆಟೋ ಚಾಲಕ ಕಿರಣ್ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಂಗ್ರೆಸ್ಸಿಗರಿಂದ​ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ಹೊಡೆದಾಟ ಪ್ರಕರಣಗಳು ಹೆಚ್ಚುತ್ತಿವೆ. ಬಿಜೆಪಿ ಕಾರ್ಯಕರ್ತನಿಗೆ ಕಾಂಗ್ರೆಸ್​ ಕಾರ್ಯಕರ್ತರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ನಡೆದಿದೆ. ಅಲ್ಲಿಗೆ ಶೃಂಗೇರಿಯಲ್ಲಿ ಹಾಲಿ-ಮಾಜಿ ಎಂ.ಎಲ್.ಎ. ಬೆಂಬಲಿಗರ ಹೊಡೆದಾಟ ಮುಂದುವರೆದಂತ್ತಾಗಿದೆ. ಸತೀಶ್ ಹಾಗೂ ಅವರ ಬೆಂಬಲಿಗರಿಂದ ಹಾರ್ಥೇಶ್​​ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಬೈಕ್​ ಸವಾರ ಸ್ಥಳದಲ್ಲೇ ಸಾವು: ಮತ್ತಿಬ್ಬರಿಗೆ ಗಾಯ

ಬಿಜೆಪಿಯ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್​​.ಜೀವರಾಜ್ ಪರ ಕೆಲಸ ಮಾಡುತ್ತಿರುವುದಕ್ಕೆ ಬೈಕ್​ನಲ್ಲಿ ಬರುವಾಗ ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಒಂದೇ ವಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಎರಡು ಭಾರಿ ಹಲ್ಲೆ ಮಾಡಲಾಗಿದೆ. ಕಳೆದ ವಾರ ಎನ್​.ಆರ್​.ಪುರದಲ್ಲಿ ಬಿಜೆಪಿ ಕಾರ್ಯಕರ್ತ ಶಿವು ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಬಾಳೆಹೊನ್ನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.