ಮಡಿಕೇರಿ: ಸಾಲದ ಚೆಕ್ ನೀಡಲು ಲಂಚ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಲಂಚ ಪಡೆಯುತ್ತಿದ್ದಾಗ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ.
ಕೊಡಗು: ಲಂಚ (bribe) ಪಡೆಯುತ್ತಿದ್ದಾಗ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ (Madikeri) ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳಾದ ಚಂದ್ರಶೇಖರ್, ಚೆಲುವಾಂಬ ಬಲೆಗೆ ಬಿದ್ದ ಅಧಿಕಾರಿಗಳು. ಸಾಲದ ಚೆಕ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, 10 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಸದ್ಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ
ದಾವಣಗೆರೆ: ಜಿಲ್ಲೆಯಲ್ಲಿ ಲಂಚ ಸ್ವೀಕರಿಸುವಾಗ ಸರ್ಕಾರಿ ವಿಶೇಷ ಅಭಿಯೋಜಕಿ(Special public prosecutor) ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ದಾವಣಗೆರೆಯ ಪಿಜೆ ಬಡಾವಣೆಯಲ್ಲಿ ನಡೆದಿದೆ. ರೇಖಾ ಕೊಟ್ರಗೌಡರ ಲೋಕಾಯುಕ್ತ ಬಲೆಗೆ ಬಿದ್ದ ಅಭಿಯೋಜಕಿ. ಲೋಕಾಯುಕ್ತ SP ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ದಾಳಿ ವೇಳೆ ರೇಖಾ ಪಡೆದಿದ್ದ ಖಾಲಿ ಚೆಕ್ ಮತ್ತು 1.87 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮದನ್ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು, ಕೇಸ್ನಲ್ಲಿ ಅನುಕೂಲ ಮಾಡುವುದಾಗಿ ಹೇಳಿ ಎಸ್ಪಿಪಿ ರೇಖಾ ಕೊಟ್ರಗೌಡರ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ 1.13 ಲಕ್ಷ ಲಂಚ ಪಡೆದಿದ್ದರು. ಆದರೆ ಇಂದು ಬಾಕಿ 1.87 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದಿದ್ದು, ರೇಖಾ ಕೊಟ್ರಗೌಡರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂಓದಿ: Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಸ್ಥಳದಲ್ಲೇ ಸಾವು: ಮತ್ತಿಬ್ಬರಿಗೆ ಗಾಯ
ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿ: ಶಿರಸಿ ಪೊಲೀಸರಿಂದ ಕೈದಿಗಾಗಿ ಶೋಧ
ಕಾರವಾರ: ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿಯಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾರಾಗೃಹದಲ್ಲಿ ನಡೆದಿದೆ. ಯಲ್ಲಾಪುರದ ಪ್ರಕಾಶ್ ಸಿದ್ದಿ ಕಾರಾಗೃಹದಿಂದ ಪರಾರಿಯಾಗಿರುವ ವಿಚಾರಣಾಧೀನ ಕೈದಿ. ದರೋಡೆ ಪ್ರಕರಣದಲ್ಲಿ ಪ್ರಕಾಶ್ ಸಿದ್ದಿ ಜೈಲುಪಾಲಾಗಿದ್ದ. ವಿಚಾರಣೆ ನಡೆಯುತ್ತಿದ್ರೂ ಜೈಲರ್ ಮಂಜು ಜೈಲಿನಿಂದ ಹೊರಕ್ಕೆ ಕಳಿಸಿದ್ದರು. ಜೈಲರ್ ಮಂಜು ನಿರ್ಲಕ್ಷ್ಯದಿಂದ ಕೈದಿ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರುವ ಕೈದಿಗಾಗಿ ಶಿರಸಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಶಿರಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR
ಬೆಂಗಳೂರು: ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಕಂಪನಿ ಪಾರ್ಟನರ್ ಆಗಿರುವ ಪ್ರಭಾವತಿ ಎಂಬುವವರಿಂದ ದೂರು ನೀಡಲಾಗಿದೆ. ಪಾರ್ಟನರ್ಗೆ ವಂಚಿಸಿ ಅಕ್ರಮವಾಗಿ 23 ಸೈಟ್ ಮಾರಾಟ ಆರೋಪ ಕೇಳಿಬಂದಿದೆ. ಆರ್.ಶಂಕರ್ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದು, ಕಂಪನಿ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು.
ಇದನ್ನೂ ಓದಿ: ಶೃಂಗೇರಿಯಲ್ಲಿ ಮುಂದುವರೆದ ಹಾಲಿ-ಮಾಜಿ ಎಂಎಲ್ಎ ಬೆಂಬಲಿಗರ ಹೊಡೆದಾಟ: ಕಾಂಗ್ರೆಸ್ಸಿಗರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ
ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.