ಕೇರಳ: ಕೇರಳದ ತಿರುವನಂತಪುರಂನಲ್ಲಿ ಮಾಜಿ ಸೈನಿಕರೊಬ್ಬ ವೃದ್ಧ ದಂಪತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ನಂತರ ಬೆಂಕಿ ಹಚ್ಚಿ ಕೊಂದಿದ್ದಾನೆ. ಪೊಲೀಸರ ಪ್ರಕಾರ, 30 ವರ್ಷಗಳ ಹಳೆಯ ಸೇಡು ಈ ಘಟನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಮೃತರಾದ ಪ್ರಭಾಕರ ಕುರುಪ್ ಮತ್ತು ಅವರ ಪತ್ನಿ ವಿಮಲಾ ಕುಮಾರಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯನ್ನು ಶಶಿಧರನ್ ನಾಯರ್ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ದಂಪತಿಗಳ ದೇಹ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಳ್ಳಿಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
30 ವರ್ಷದ ವೈರತ್ವ
ಶಶಿಧರನ್ ನಾಯರ್ ಅವರ ಮಗ ಸುಮಾರು ಮೂವತ್ತು ವರ್ಷಗಳ ಹಿಂದೆ ಬಹ್ರೇನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕುರುಪ್ ಅವರು ನಾಯರ್ ಅವರ ಮಗನಿಗೆ ವಿದೇಶಕ್ಕೆ ಹೋಗಲು ಸಹಾಯ ಮಾಡಿದ್ದರು, ಆದರೆ ಅವರು ಬಯಸಿದ ಕೆಲಸ ಸಿಕ್ಕಿಲ್ಲ. ಇದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು ನಂತರ ಸ್ವಲ್ಪ ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಯರ್ ಪೊಲೀಸರಿಗೆ ದೂರು ನೀಡಿದ್ದು, ಕುರುಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದರು.
ಹಲವು ವರ್ಷಗಳ ಕಾಲ ಈ ಪ್ರಕರಣವನ್ನು ಎಳೆದಾಡಿದ್ದ ನ್ಯಾಯಾಲಯ ಕುರುಪ್ ಅವರನ್ನು ದೋಷಮುಕ್ತಗೊಳಿಸಿದೆ. ಇದರಿಂದ ಕೋಪಗೊಂಡ ನಾಯರ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಶನಿವಾರ ನಡೆದ ತೀವ್ರ ವಾಗ್ವಾದವು ಕುರುಪ್ ಮತ್ತು ನಾಯರ್ ನಡುವೆ ಜಗಳಕ್ಕೆ ತಿರುಗಿತು. ವಿಮಲಾ ಕುಮಾರಿ ಕುರುಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೆ ಆದರೆ ನಾಯರ್ ಸುತ್ತಿಗೆಯನ್ನು ತೆಗೆದುಕೊಂಡು ಅವರ ತಲೆಗೆ ಹೊಡೆದಿದ್ದಾರೆ.
ಇದನ್ನು ಓದಿ: ತಿರುಚ್ಚಿ ಮಾರುಕಟ್ಟೆಯಲ್ಲಿ ಹೀಲಿಯಂ ಟ್ಯಾಂಕ್ ಸ್ಫೋಟ, ಓರ್ವ ಸಾವು, ಹಲವು ಮಂದಿಗೆ ಗಾಯ
ಬಳಿಕ ದಂಪತಿ ಮೇಲೆ ಬಾಟಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಮತ್ತು ಹೊಗೆಯನ್ನು ನೋಡಿದ ನೆರೆಹೊರೆಯವರು ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅವರು ಗಾಯಗೊಂಡರು. ಸುಟ್ಟಗಾಯಗಳಾಗಿರುವ ಶಶಿಧರನ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Published On - 3:24 pm, Mon, 3 October 22