Jaipur: ಖಾಲಿ ಲಿಫ್ಟ್ ಶಾಫ್ಟ್‌ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

ಜೈಪುರದಲ್ಲಿ ಖಾಲಿ ಲಿಫ್ಟ್ ಶಾಫ್ಟ್‌ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ ಮೈ ಹವೇಲಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

Jaipur: ಖಾಲಿ ಲಿಫ್ಟ್ ಶಾಫ್ಟ್‌ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
Jaipur: College student dies after falling into empty lift shaft
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 03, 2022 | 4:11 PM

ರಾಜಸ್ಥಾನ: ಜೈಪುರದಲ್ಲಿ ಖಾಲಿ ಲಿಫ್ಟ್ ಶಾಫ್ಟ್‌ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ ಮೈ ಹವೇಲಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಮೃತರನ್ನು ಕುಶಾಗ್ರಾ ಮಿಶ್ರಾ ಎಂದು ಗುರುತಿಸಲಾಗಿದ್ದು, ವಾರಣಾಸಿ ನಿವಾಸಿಯಾಗಿದ್ದು, ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು.

ಅವರು ಅಜ್ಮೀರ್ ರಸ್ತೆಯಲ್ಲಿರುವ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾನುವಾರ ರಾತ್ರಿ 11ನೇ ಮಹಡಿಯಿಂದ ಕೆಳಗಿಳಿಯಲು ಲಿಫ್ಟ್‌ಗೆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಲಿಫ್ಟ್‌ನ ಬಾಗಿಲು ತೆರೆಯಿತು, ಆದರೆ ಒಳಗೆ ಲಿಫ್ಟ್ ಇರಲಿಲ್ಲ. ಇದನ್ನು ನೋಡದೇ ಆತ ಕಾಲು ಹಾಕಿದ್ದಾನೆ, ಇದರಿಂದ 11ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಲಿಫ್ಟ್ ಒಡೆದು ಹೋಗಿದೆ ಎಂದು ಕಾಂಪ್ಲೆಕ್ಸ್ ನಲ್ಲಿ ವಾಸವಿದ್ದವರು ಹೇಳಿದರೂ ಬಿಲ್ಡರ್ ಇತ್ತ ಗಮನಹರಿಸಿ ಸರಿಪಡಿಸಿಲ್ಲ ಎಂದು ಕಾಂಪ್ಲೆಕ್ಸ್ ನಲ್ಲಿ ವಾಸವಿದ್ದವರು ಹೇಳಿದ್ದಾರೆ.

ಇದನ್ನು ಓದಿ; 30 ವರ್ಷಗಳ ದ್ವೇಷಕ್ಕಾಗಿ ವೃದ್ಧ ದಂಪತಿಗೆ ಬೆಂಕಿ ಹಚ್ಚಿದ ಮಾಜಿ ಸೈನಿಕ

ಪೊಲೀಸರು ಮೃತದೇಹವನ್ನು ಶವಾಗಾರದಲ್ಲಿರಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಪಾರ್ಟ್‌ಮೆಂಟ್ ನಿವಾಸಿಗಳು ಬಿಲ್ಡರ್ ವಿರುದ್ಧ ದೂರು ದಾಖಲಿಸಿದ್ದಾರೆ.

Published On - 4:11 pm, Mon, 3 October 22