ಕೆಎಸ್​ಆರ್​ಟಿಸಿ ಕಂಟ್ರೋಲರ್ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ!

ಶಂಕರ್ ಕುಮಾರ್​ಗೆ ಕೌಟುಂಬಿಕ ಕಲಹ ಇದ್ದು ಆತನ ಸಾವಿಗೆ ಅದೆ ಕಾರಣ ಇರಬಹುದು ಎಂದು ಮೃತನ ಸಹೋದರ ಸುಜೀತ್ ಕುಮಾರ್ ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾನೆ.

ಕೆಎಸ್​ಆರ್​ಟಿಸಿ ಕಂಟ್ರೋಲರ್ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ!
ಶಂಕರ್ ಕುಮಾರ್ ಮೃತ ದುರ್ದೈವಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2022 | 7:19 PM

ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಯೊಂದರಲ್ಲಿ ಕಾರ್ಪೇಂಟರ್ ಕೆಲಸ ಮಾಡಲು ಬಂದಿದ್ದ ಬಿಹಾರ ಮೂಲದ ಕಾರ್ಮಿಕನೊರ್ವ, ತಾನು ತಂಗಿದ್ದ ಸರ್ಕಾರಿ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಹಾರ ಮೂಲದ ಶಂಕರ್ ಕುಮಾರ್ ಮೃತ ದುರ್ದೈವಿ. ಚಿಕ್ಕಬಳ್ಳಾಪುರ ಜಿಲ್ಲಾ KSRTC ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಸಿವಿಲ್ ವರ್ಕ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಕೆಲಸಕ್ಕೆ ಎಂದು ಹತ್ತು ದಿನಗಳ ಹಿಂದೆ ಬಿಹಾರ ಮೂಲದ ಶಂಕರ್ ಕುಮಾರ್ ಹಾಗೂ ಆತನ ಸ್ನೇಹಿತರು ಕಾರ್ಪೇಂಟರ್ ಕೆಲಸ ಮಾಡಲು ಬಂದಿದ್ದರು. ಸೆಪ್ಟಂಬರ್ 30ರ ರಾತ್ರಿ 12 ಗಂಟೆ ಸಮಯದಲ್ಲಿ ಶಂಕರ್ ಕುಮಾರ್​ಗೆ ಪತ್ನಿಯಿಂದ ದೂರವಾಣಿ ಕರೆ ಬಂದಿದೆ. ಆಗ ಎದ್ದು ಆಚೆ ಹೋಗಿದ್ದ ಶಂಕರ್ ಕುಮಾರ್, ಪೋನ್ ಸ್ಥಗಿತಗೊಂಡ ಕೆಲವು ನಿಮಿಷಗಳಲ್ಲಿ ಕಚೇರಿಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಂಕರ್ ಕುಮಾರ್​ಗೆ ಕೌಟುಂಬಿಕ ಕಲಹ ಇದ್ದು ಆತನ ಸಾವಿಗೆ ಅದೆ ಕಾರಣ ಇರಬಹುದು ಎಂದು ಮೃತನ ಸಹೋದರ ಸುಜೀತ್ ಕುಮಾರ್ ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾನೆ. ಇನ್ನೂ ಮೃತನ ದುಡಿದ ಹಣವನ್ನು ತನ್ನ ತಾಯಿಗೆ ನೀಡುತ್ತಿದ್ದ ಇದರಿಂದ ಆತನ ಪತ್ನಿ ಯಾವಾಗಲೂ ಗಲಾಟೆ ಮಾಡುವುದು ಹಿಯಾಳಿಸುವುದು ಮಾಡುತ್ತಿದ್ದಳು. ಅದೆ ಕಾರಣದಿಂದ ನೊಂದಿದ್ದ ಎಂದು ಮೃತನ ಸಹೋದರ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮಗು ಕಳ್ಳತನವಾಗಿದೆ ಎಂದು ತಾಯಿ ಹೈಡ್ರಾಮಾ

ಧಾರವಾಡ: ಮಗು ಕಳ್ಳತನವಾಗಿದೆ ಎಂದು ತಾಯಿ ಹೈಡ್ರಾಮಾ ಮಾಡಿರುವಂತಹ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ತಾಯಿಯ ಜೊತೆ ಬಂದಿದ್ದ ಬಾಲಕಿ ದಿಢೀರ್​ ನಾಪತ್ತೆಯಾಗಿದ್ದಾಳೆ. 3 ವರ್ಷದ ಬಾಲಕಿ ಫಲಕ್ ಜತೆ ಮುಸ್ಕಾನ್ ಆಗಮಿಸಿದ್ದ. ತಂಗಿಯನ್ನು ನೋಡಲು ಜಿಲ್ಲಾಸ್ಪತ್ರೆಗೆ ಮುಸ್ಕಾನ್ ಬಂದಿದ್ದಳು. ಏಕಾಏಕಿ ಬಾಲಕಿ ನಾಪತ್ತೆಯಾದ ಹಿನ್ನೆಲೆ ಮಹಿಳೆ ಹೈಡ್ರಾಮಾ ಮಾಡಿದ್ದಾಳೆ. ಬಾಲಕಿ ಹೊರ ಹೋಗಿದ್ದನ್ನು ಸ್ಥಳೀಯ ವ್ಯಾಪಾರಿ ನೋಡಿದ್ದಾರೆ. ವ್ಯಾಪಾರಿಯ ಮಾಹಿತಿ ಮೇರೆಗೆ ಪೊಲೀಸರಿಂದ ಹುಡುಕಾಟ ನಡೆಸಿದ್ದು, ಶಿವಾಜಿ ವೃತ್ತದ ಬಳಿ ಬಾಲಕಿ ಪತ್ತೆಯಾಗಿದ್ದಾಳೆ. 3 ವರ್ಷದ ಬಾಲಕಿಯನ್ನು ಮಹಿಳೆಗೆ ಪೊಲೀಸರು ಒಪ್ಪಿಸಿದರು. ಉಪನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬುದ್ಧಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿತ

ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದಲ್ಲಿ ನಿನ್ನೆ ತಡ ರಾತ್ರಿ ಭೀಕರ ಘಟನೆ ನಡೆದಿದೆ. ಬುದ್ಧಿ ಹೇಳಲು ಹೋದ ಕಾಂಗ್ರೆಸ್​​ ಮುಖಂಡ ತೌಸೀಫ್​ ಇಸ್ಮಾಯಿಲ್ & ಟೀಮ್ ಚಾಕು ಇರಿದಿದೆ. ಗಾಯಾಳು ‘ಕೈ’ ಮುಖಂಡ ತೌಸೀಫ್​ಗೆ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೌಸೀಫ್ ಕಾಲು, ಬೆನ್ನಿಗೆ ಚಾಕು ಹಾಕಿ ಹಲ್ಲೆ ನಡೆಸಲಾಗಿದ್ದು ಬೆಂಡಿಗೇರಿ ಪೊಲೀಸರು ಇಸ್ಮಾಯಿಲ್ & ಟೀಮ್​ ಬಂಧಿಸಿದ್ದಾರೆ.

ವ್ಯಾಪಾರಿಗೆ ಚಾಕು ಇರಿತ, ನಾಲ್ವರು ಅರೆಸ್ಟ್

ವ್ಯಾಪಾರಿಗೆ ಹಾಡುಹಗಲೇ ಚಾಕು ಇರಿಯಲಾಗಿದ್ದು ಕಸಬಾಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಖಾದರ್, ಬಿಲಾಲ್, ಸಾಧಿಕ್ ಹಾಗೂ ಖಾಜಾ ಬಂಧಿತ ಆರೋಪಿಗಳು. ಸೆ.28ರಂದು ಹಣ ವಸೂಲಿಗೆ ಬಂದು ವ್ಯಾಪಾರಿ ಮೊಹ್ಮದ್​ಗೆ ಚಾಕು ಇರಿದಿದ್ದರು. ಸದ್ಯ ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ