ಸ್ನೇಹಿತನ ಬರ್ತಡೆ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಕೊಲೆ, ಚಿಂತಾಮಣಿಯಲ್ಲಿ ದುರ್ಗೇಶನ ಕತ್ತು ಕೊಯ್ದು ಬರ್ಬರ ಹತ್ಯೆ

ಸ್ನೇಹಿತನ ಬರ್ತಡೆ ಪಾರ್ಟಿಗೆ ಕರೆಸಿ ಕಂಠಪೂರ್ತಿ ಕುಡಿಸಿ, ಅದ್ಯಾರು, ಅದ್ಯಾಕೆ ಕೊಲೆ ಮಾಡಿದ್ರು, ಕೋಳಿ ಕೊಯ್ಯುವ ಹಾಗೆ ಬರ್ಬರವಾಗಿ ಹತ್ಯೆ ಮಾಡುವಂಥ ದ್ವೇಷ ಏನಿತ್ತು ಅನ್ನುವ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ನೇಹಿತನ ಬರ್ತಡೆ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಕೊಲೆ, ಚಿಂತಾಮಣಿಯಲ್ಲಿ ದುರ್ಗೇಶನ ಕತ್ತು ಕೊಯ್ದು ಬರ್ಬರ ಹತ್ಯೆ
ಸ್ನೇಹಿತನ ಬರ್ತಡೆ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಕೊಲೆ, ಚಿಂತಾಮಣಿಯಲ್ಲಿ ದುರ್ಗೇಶನ ಕತ್ತು ಕೊಯ್ದು ಬರ್ಬರ ಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 04, 2022 | 2:58 PM

ಚಿಕ್ಕಬಳ್ಳಾಪುರ: ಅವರೆಲ್ಲರೂ… ಒಂದು ಊರು ಒಂದೇ ಕೇರಿಯವರು. ಪ್ರತಿದಿನ ಆ ಪಾರ್ಟಿ-ಈ ಪಾರ್ಟಿ ಅಂತಾ ಮೋಜು ಮಸ್ತಿಯಲ್ಲಿ ಓಲಾಡುತ್ತಿದ್ದವರು. ಸ್ನೇಹಿತನ ಬರ್ತಡೇ ಪಾರ್ಟಿ ಅಂತ ನಗರದ ಹೊರಹೊಲಯದಲ್ಲಿ ಬರ್ತಡೇ ಪಾರ್ಟಿ ಮಾಡೋಕೆ ಅಂತ ಎಲ್ಲರೂ ಸೇರಿದ್ದರು. ಬರ್ತಡೇ ಪಾರ್ಟಿ ಅಂದ್ರೆ ಕೇಳಬೇಕಾ… ಕಂಠಪೂರ್ತಿ ಕುಡಿದು ತೇಲಾಡುತ್ತಿದ್ರು, ಆದ್ರೆ ಪಾರ್ಟಿಯಲ್ಲೆ ಅದೇನ್ ಆಯಿತೊ ಏನೊ… ಪಾರ್ಟಿಗೆ ಬಂದವನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರು ಏನು? ಈ ವರದಿ ನೋಡಿ!!

ಪೋಟೊದಲ್ಲಿ ಹೀರೊ ರೀತಿ ಪೋಸ್ ಕೊಡ್ತಾತಾ… ಥೇಟ್ ಹೀರೊ ರೀತಿ ಕಾಣ್ತಿರುವ ಇವನ ಹೆಸರು… ದುರ್ಗೇಶ. ಇನ್ನೂ ಈಗ 24 ವರ್ಷ ವಯಸ್ಸು. ಮದುವೆಯಾಗಿ ಎರಡು ವರ್ಷವಾಗಿದೆ. ಈತ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯ ನಿವಾಸಿ. ನಿನ್ನೆ ರಾತ್ರಿ ಸ್ನೇಹಿತ ಹೇಮಂತ್ ನ ಬರ್ಡೇ ಪಾರ್ಟಿ ಇದೆ ಅಂತ, ಸ್ನೇಹಿತರ ಗ್ಯಾಂಗ್ ನೊಂದಿಗೆ ನಗರದ ಕನ್ನಂಪಲ್ಲಿ ಬಳಿ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ನನಗಿಷ್ಟು ನೀನಗಿಷ್ಟು ಅಂತ ಕಂಠಪೂರ್ತಿ ಕುಡಿದು ಸ್ನೇಹಿತನ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಪರಿಚಯಸ್ಥ ಶ್ರವಣ್ ಜೊತೆ ಕಿರಿಕ್ ಆಗಿದೆ, ಮನೆಗೆ ಬಂದು ವಾಪಸ್ ಪಾರ್ಟಿ ಸ್ಥಳಕ್ಕೆ ಹೋದ ದುರ್ಗೇಶ ರಾತ್ರಿ 11 ಗಂಟೆ ಸಮಯದಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ.

ದುರ್ಗೇಶ ನಗರದಲ್ಲಿ ಸ್ನೇಹಿತರ ದೊಡ್ಡ ದಂಡನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಅಂತ ಓಡಾಡ್ತಿದ್ದನಂತೆ, ಯಾವಾಗಲೂ ಸ್ನೇಹಿತರ ಜೊತೆ ಆ ಪಾರ್ಟಿ ಈ ಪಾರ್ಟಿ ಅಂತಿದ್ದನಂತೆ. ಇದ್ರಿಂದ ತಂದೆ ತಾಯಿ ಪತ್ನಿ ಬುದ್ದಿವಾದ ಹೇಳಿ ಯಾವ ಸ್ನೇಹಿತರೂ ಬೇಡ ನಮ್ಮ ಪಾಡಿಗೆ ನಾವು ಇರೋಣ ಅಂತ ಬುದ್ದಿವಾದ ಹೇಳಿದ್ದರಂತೆ. ರಾತ್ರಿ ಸ್ನೇಹಿತರ ಮಧ್ಯೆ ಅದೇನ್ ನಡೆಯಿತೊ ಗೊತ್ತಿಲ್ಲ… ಪಾರ್ಟಿ ಮಾಡಿದ ಸ್ಥಳದಲ್ಲೆ ಬರ್ಬರವಾಗಿ ಹತ್ಯೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ, ಎಎಸ್ಪಿ ಕುಶಾಲ್ ಚೌಕ್ಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯಕ್ಕೆ ಅನುಮಾನ ಇರುವ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸ್ನೇಹಿತನ ಬರ್ತಡೆ ಪಾರ್ಟಿಗೆ ಕರೆಸಿ ಕಂಠಪೂರ್ತಿ ಕುಡಿಸಿ, ಅದ್ಯಾರು, ಅದ್ಯಾಕೆ ಕೊಲೆ ಮಾಡಿದ್ರು, ಕೋಳಿ ಕೊಯ್ಯುವ ಹಾಗೆ ಬರ್ಬರವಾಗಿ ಹತ್ಯೆ ಮಾಡುವಂಥ ದ್ವೇಷ ಏನಿತ್ತು ಅನ್ನುವ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ