ತುಮಕೂರು: ಪ್ರೀತಿಸಿದವಳನ್ನೇ ಕೊಲೆ ಮಾಡಿದ ಪ್ರಿಯತಮ; ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

ಇನ್ನೂ ಬದುಕಿ ಬಾಳಬೇಕಿದ್ದ ಬಾಲೇ. ಆದರೆ, ಪ್ರೀತಿ ಗೀತಿ ಎಂದು ಹೋಗಿ ಪ್ರಿಯಕರನಿಂದ ಕೊಲೆಯಾಗಿ ಹೋಗಿದ್ದಾಳೆ. ಒತ್ತಾಯಪೂರ್ವಕವಾಗಿ ಪ್ರಿಯಕರನ ಜೊತೆ ಬಂದು ಕೊಲೆಯಾಗಿ ಹೋಗಿದ್ದ ಆಕೆ, ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದಾದ ಮೇಲೆ ಕೊಲೆ ಮಾಡಿದ್ದವನನ್ನ ಹಿಡಿದ್ದಿದ್ದೂ ಕೂಡ ರಣರೋಚಕ.

ತುಮಕೂರು: ಪ್ರೀತಿಸಿದವಳನ್ನೇ ಕೊಲೆ ಮಾಡಿದ ಪ್ರಿಯತಮ; ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ
ಆರೋಪಿ ಪ್ರಿಯತಮ, ಮೃತ ಯುವತಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 10:38 PM

ತುಮಕೂರು, ಏ.12: ಇದೆ ಏಪ್ರಿಲ್ 1ರ ಬೆಳ್ಳಂಬೆಳಿಗ್ಗೆ ದೊಡ್ಡಗುಣಿ (Doddaguni) ರಸ್ತೆ ಬಳಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಯಾರೋ ಅಪರಿಚಿತರು ಕೊಲೆ ಮಾಡಿ ಬಿಸಾಡಿ ಹೋಗಿರುವುದು ಖಚಿತವಾಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಚೇಳೂರು ಪೊಲೀಸರು ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತುಮಕೂರು ಎಸ್​ಪಿ ಅಶೋಕ್ ವೆಂಕಟ್ ಮಾರ್ಗದರ್ಶನದಲ್ಲಿ ಶಿರಾ ಡಿವೈಎಸ್​ಪಿ ಬಿಕೆ ಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಿ, ಇದೀಗ ಕೊಲೆ‌ ಪ್ರಕರಣದ ರಹಸ್ಯವನ್ನ ಬಯಲು ಮಾಡಿದ್ದಾರೆ.

ಪತ್ತೆಯಾದ ಮಹಿಳೆ ಸುಟ್ಟ ಪರಿಸ್ಥಿತಿಯಲ್ಲಿ ಇದ್ದಳು. ಆದರೆ, ಬಟ್ಟೆ, ಕಾಲು ಉಂಗುರ ಸರಿಯಾಗಿ ಸುಟ್ಟಿರಲಿಲ್ಲ. ಜೊತೆಗೆ ಮಹಿಳೆಯನ್ನ ಸಾಯಿಸಲು ಬಳಸಿದ್ದ ಪೆಟ್ರೋಲ್ ಬಾಟಲ್​ನಿಂದ ಆರೋಪಿ ಪತ್ತೆಗೆ ಸಹಕಾರ ಆಗಿದೆ. ಇದೆಲ್ಲವೂ ಸೀಜ್ ಮಾಡಿದ ಪೊಲೀಸರು ಕೂಡಲೇ ಆರೋಪಿಗಾಗಿ ಹಾಗೂ ಮೃತ ಮಹಿಳೆ ಯಾರು ಎಂದು ಪತ್ತೆ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ಕಳೆದ ಎರಡು ತಿಂಗಳ ಹಿಂದೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಮ್ ಸಿ ನಗರದ ರುಕ್ಸಾನ 21 ಕಾಣಿಯಾಗಿದ್ದರು. ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ಕಾಣೆಯಾಗಿದ್ದ ರುಕ್ಸಾನಗೂ ತುಮಕೂರಿನ ದೊಡ್ಡಗುಣಿ ಬಳಿ ಸಿಕ್ಕ ಶವಕ್ಕೂ ಸಾಮ್ಯತೆ ಇರುವ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ರುಕ್ಸಾನ ತಾಯಿ ಸಂಬಂಧಿಕರನ್ನ ಕರೆಸಿ ಶವ ತೋರಿಸಿದಾಗ ಕಾಲುಂಗರ ಹಾಗೂ ಬಟ್ಟೆಯಿಂದ ಈಕೆ ರುಕ್ಸಾನ ಎನ್ನುವುದು ಖಚಿತವಾಗಿದೆ. ಅಲ್ಲದೇ ರುಕ್ಸಾನ ಚಲನವಲನ ಹಾಗೂ ಆಕೆ ಯಾರನ್ನೋ ಇಷ್ಟ ಪಡುತ್ತಿದ್ದಳು ಎನ್ನುವ ವಿಚಾರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ;​ ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಅರೆಸ್ಟ್

ಇನ್ನು ಮೈಸೂರಿನ ಮೇಟಗಳ್ಳಿ ಪ್ರಕರಣ ಒಂದಾದರೆ, ಮತ್ತೊಂದು ಒಂದು ತಿಂಗಳ ಗಂಡು ಮಗು ನೆಲಮಂಗಲ ಬಳಿ ಯಾರೋ ಬಿಸಾಡಿ ಹೋಗಿರುವುದು ಕೂಡ ಪ್ರಕರಣ ದಾಖಲಾಗಿತ್ತು. ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೆಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಆರೋಪಿ ಯಾರು?, ಯಾಕೆ ಕೊಲೆ ಮಾಡಿದ ಎನ್ನುವುದು ಬಯಲಿಗೆ ಬಂದಿದೆ. ಮೃತ ರುಕ್ಸಾನ ಇನ್ನೂ 21 ವರ್ಷದ ಯುವತಿ, ಮೈಸೂರಿನಲ್ಲಿ ಪೇಯಿಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡಿ, ಪ್ರತಿದಿನ ರಾತ್ರಿಗೆ ಮನೆ ಸೇರುತ್ತಿದ್ದಳು. ಈ ನಡುವೆ ಪೇಯಿಂಟ್ ಕಂಪನಿಯಲ್ಲಿ ಪ್ರದೀಪ್ ನಾಯಕ್ ಎಂಬ ವ್ಯಕ್ತಿ ಪರಿಚಯ ಆಗಿದ್ದಾನೆ. ಆತ ಮೂಲತಃ ಚಿಕ್ಕಮಾಲೂರು ಜಿಲ್ಲೆಯ ಕಡೂರಿನವ, ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲದೇ ಈತನಿಗೆ ಮದುವೆಯಾಗಿ ಮಕ್ಕಳು ಕೂಡ ಇದ್ದಾರಂತೆ.

ಹೀಗಿರುವಾಗ ರುಕ್ಸಾನ​, ಪ್ರದೀಪ್ ನಾಯಕ್ ಮೇಲೆ ಸ್ನೇಹ ಬೆಳಸಿ, ಮುಂದೆ ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದಳಂತೆ. ಆದರೆ, ಪ್ರದಿಪ್ ನಾಯಕ್, ‘ನಾನು ಮದುವೆ ಆಗಿದಿನಿ ಅಂದರೂ ಕೂಡ, ಇರಲಿ ಪರವಾಗಿಲ್ಲ ನಿಮ್ಮ ಜೊತೆ ನಾನು ಇರುತ್ತಿನಿ ಎಂದಿದ್ದಳಂತೆ. ಮೂರ್ನಾಲ್ಕು ವರ್ಷಗಳ ಕಾಲ ಪ್ರೀತಿ ಎಂದು ತಿರುಗಿಕೊಂಡು ಇದ್ದರಂತೆ. ಈ ನಡುವೆ ಪ್ರದಿಪ್ ನಾಯಕ್ ಇತ್ತಿಚೆಗೆ ಮೈಸೂರು ಖಾಲಿ ಮಾಡಿಕೊಂಡು ಬೆಂಗಳೂರಿನ ಪಿಣ್ಯಗೆ ಬಂದು ಕಂಪನಿಗೆ ಕೆಲಸ ಸೇರಿಕೊಂಡಿದ್ದ. ಬೆಂಗಳೂರಿಗೆ ಬಂದರೂ ಕೂಡ ರುಕ್ಸಾನ ಪ್ರದೀಪ್​ಗೆ ಕಾಲ್ ಮಾಡಿ ಟಾರ್ಚರ್ ಕೊಡ್ತಿದ್ದಳಂತೆ. ಮೈಸೂರಿಗೆ ಬಾ ಎಂದು ಪೀಡಿಸುತ್ತಿದ್ದಳಂತೆ. ಇತ್ತ ಪ್ರದಿಪ್ ಕೂಡ ರುಕ್ಸಾನ ಕಾಟ ತಡೆಯಲಾರದೇ ಹೋಗಿ ಬರುತ್ತಿದ್ದನಂತೆ. ಹೀಗಿರುವಾಗ ರುಕ್ಸಾನ ಗರ್ಭಿಣಿ ಆಗಿದ್ದಾಳೆ.

ಇದನ್ನೂ ಓದಿ:ಗಂಡ-ಹೆಂಡತಿ ಜಗಳ; ಎರಡನೇ ಪತ್ನಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ

ರುಕ್ಸಾನ ಗರ್ಬೀಣಿ ಆದ ಬಳಿಕ ಪ್ರದೀಪ್ ರುಕ್ಸಾನ ಕಾಟ ತಾಳಲಾರದೆ ಕಡೂರಿಗೆ ತಂದು ರೂಮ್ ಮಾಡಿ ಇಟ್ಟಿದ್ದನಂತೆ. ರುಕ್ಸಾನ ಗರ್ಭಿಣಿ ಆಗಿದಿನಿ ಮದುವೆಯಾಗು ಎಂದು ಪೀಡಿಸುತ್ತಿದ್ದಳಂತೆ. ಆದರೂ ಪ್ರದೀಪ್ ಸೊಪ್ಪು ಹಾಕದೇ ಸುಮ್ಮನೇ ಇದ್ದನಂತೆ. ಎರಡು ತಿಂಗಳ ಹಿಂದೆ ರುಕ್ಸಾನ ತನ್ನ ಖಾತೆಯಲ್ಲಿ ಇದ್ದ ಹಣದಲ್ಲಿ ಒಡವೆ ಕೂಡ ತೆಗೆದುಕೊಂಡು ಪ್ರದೀಪ್ ಬಳಿ ಬಂದಿದ್ದಾಳೆ. ಇನ್ನೂ ಕಳೆದ ಒಂದು ತಿಂಗಳ ಹಿಂದೆ ರುಕ್ಸಾನ ಹೆರಿಗೆ ಆಗಿದ್ದು, ಪ್ರದೀಪ್ ನಾಯಕ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದನಂತೆ. ಈ ವೇಳೆ ವೈದ್ಯರಿಗೆ ರುಕ್ಸಾನ ಅವಿವಾಹಿತೆ ಎಂದು ಹೇಳಿದಾಗ ರುಕ್ಸಾನಗೆ ಬೈದಿದ್ದಾರೆ. ಆಗ ತಂದೆ ಹೆಸರು ಪ್ರದಿಪ್ ನಾಯಕ್ ಎಂದು ಬರೆಯಿಸಿ ಹೆರಿಗೆ ಮಾಡಿಸಿದ್ದಾರಂತೆ.

ಆಗಲೇ ರುಕ್ಸಾನಗೆ ಡೌಟ್ ಶುರುವಾಗಿತ್ತಂತೆ. ಇವನು ನನ್ನ ಮದುವೆ ಆಗಲ್ಲ. ಮಧ್ಯ ದಾರಿಯಲ್ಲಿ ಕೈ ಬಿಡ್ತಾನೆಂಬ ಭಯ ಶುರುವಾಗಿದೆ. ಆದರೂ ರುಕ್ಸಾನ ಸಮಾಜಕ್ಕೆ ಹೆದರಿ ಕಾಲುಂಗರ ಧರಿಸಿದ್ದಳು ಎನ್ನಲಾಗಿದೆ. ಇನ್ನು ಹೆರಿಗೆ ಬಳಿಕ ಕಡೂರಿನಲ್ಲಿ ರುಕ್ಸಾನನ್ನ ಇರಿಸಿದ್ದನಂತೆ. ಆಗಲಿಂದಲೂ ಕೂಡ ರುಕ್ಸಾನ ಪ್ರದಿಪ್ ನಾಯಕ್​ಗೆ ಮದುವೆಯಾಗು ದಯವಿಟ್ಟು, ನನಗೆ ಅನ್ಯಾಯ ಮಾಡಬೇಡ. ನಿನ್ನ ಮೊದಲ ಪತ್ನಿಯನ್ನ ಬಿಟ್ಟುಬಿಡು ಎಂದು ಟಾರ್ಚರ್ ಕೊಡ್ತಿದ್ದಳಂತೆ. ಸತತ ಒಂದು ತಿಂಗಳಿನಿಂದ ಪ್ರದೀಪ್ ರುಕ್ಸಾನ ಕಾಟ ತಡೆದುಕೊಂಡಿದ್ದಾನೆ. ಇವಳ ಕಾಟ ಏನಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಪ್ರದಿಪ್ ನಾಯಕ್ ರುಕ್ಸಾನ ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಇದನ್ನೂ ಓದಿ:ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ

ಅದರಂತೆ ಕಳೆದ ಮಾರ್ಚ್ 31 ರ ರಾತ್ರಿ ಕಡೂರಿನಲ್ಲಿ ಪರಸ್ಪರ ಕಿತ್ತಾಟ ನಡೆಸಿಕೊಂಡಿದ್ದಾರೆ. ಬಳಿಕ ಒಂದು ತಿಂಗಳ ಮಗು ಸಮೇತ ರುಕ್ಸಾನ ಕರೆದುಕೊಂಡು ಪ್ರದಿಪ್ ನಾಯಕ್ ಬೆಂಗಳೂರಿಗೆ ಹೊರಟಿದ್ದಾನೆ‌. ದಾರಿ ಮಧ್ಯೆ ರುಕ್ಸಾನ ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಮನೆಯಲ್ಲಿ ಗಲಾಟೆ ಮಾಡಿ ಆರೋಪಿ ಪ್ರದಿಪ್ ಅಡ್ವಾನ್ಸ್​ ಆಗಿ ರುಕ್ಸಾನ ಪೋನ್ ಒಡೆದು ಹಾಕಿ ಸ್ವೀಚ್ ಆಪ್ ಮಾಡಿ ಅಲ್ಲೆ ಬಿಸಾಡಿದ್ದಾನೆ. ಪ್ರದಿಪ್ ಪೋನ್ ಕೂಡ ಮನೆಯಲ್ಲಿ ಸ್ವೀಚ್ ಆಪ್ ಮಾಡಿ ಬೆಂಗಳೂರು ಕಡೆ ಹೊರಟಿದ್ದಾನೆ.

ದಾರಿ ಮಧ್ಯೆ ಡಿಯೋ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ಹೆಚ್ಚುವರಿಯಾಗಿ ಎರಡು ಲೀಟರ್ ಪೆಟ್ರೋಲ್ ಬಾಟಲ್​ಗೆ ಹಾಕಿಸಿಕೊಂಡಿದ್ದಾನೆ. ಆಗ ರುಕ್ಸಾನ ಪ್ರಶ್ನೆ ಹೆಚ್ಚುವರಿ ಪೆಟ್ರೋಲ್​ ಯಾಕೆ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ಪ್ರದಿಪ್ ನಾಯಕ್ ನಾವು ದೂರ ಹೋಗ್ತಿದಿವಿ, ಪೆಟ್ರೋಲ್ ಖಾಲಿಯಾದರೇ ಬೇಕಲ್ವಾ ಎಂದು ಹೇಳಿದ್ದಾನೆ. ಬಳಿಕ ದಾರಿ ಮಧ್ಯೆ ಮದುವೆ ವಿಚಾರಕ್ಕೆ ಪರಸ್ಪರ ಜಗಳ ಆಡಿಕೊಂಡು ಬಂದಿದ್ದಾರೆ. ಮಧ್ಯ ರಾತ್ರಿ ವೇಳೆಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಬಂದಾಗ ಮೂತ್ರ ವಿಸರ್ಜನೆ ಮಾಡಲು ಬೈಕ್‌ ನಿಲ್ಲಿಸಿದ್ದಾರೆ.

ಈ ವೇಳೆ ಒಂದು ತಿಂಗಳ ಪಾಪು ಇಟ್ಟುಕೊಂಡು ರುಕ್ಸಾನ ಕುತಿದ್ದಾಗ ಹಿಂಭಾಗದಿಂದ ಪ್ರದಿಪ್ ನಾಯಕ್ ಕುತ್ತಿಗೆಯಲ್ಲಿದ್ದ ವೇಲಿನಿಂದ ರುಕ್ಸಾನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಮಗು ಜಾರಿ ಕೆಳಗಡೆ ಬಿದ್ದಿದೆ. ಇನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ನಿಂದ ಸುಟ್ಟು ಬೆಂಗಳೂರು ಕಡೆ ಹೊರಟಿದ್ದಾನೆ. ಡಿಯೋ ಬೈಕಿನ ಮಧ್ಯೆ ಏನು ಅರಿಯದ ಕಂದಮ್ಮನನ್ನ ಕುರಿಸಿಕೊಂಡು ಪ್ರಯಾಣ ಮುಂದುವರೆಸಿದ್ದಾನೆ. ನೆಲಮಂಗಲ ಸಮೀಪ ಬಂದು ರಸ್ತೆ ಬದಿಗೆ ಮಗುವನ್ನ ಪಾಪಿ ಪ್ರದಿಪ್ ನಾಯಕ್ ಬಿಸಾಡಿ ಮುಂದೆ ಹೋಗಿದ್ದಾನೆ.

ಇದನ್ನೂ ಓದಿ:ಮಂಗಳೂರು: ಅವಳಿ ಕೊಲೆ ಕೇಸ್​ನಲ್ಲಿ ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ನಾಪತ್ತೆಯಾದ ಪ್ರಕರಣ ಹಾಗೂ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ಕೊಲೆಗೂ ಹಾಗೂ ನೆಲಮಂಗಲ ಬಳಿ ಪತ್ತೆಯಾದ ಮಗು ಬಗ್ಗೆ ಪೊಲೀಸರು ತನಿಖೆ ಮಾಡಿದ್ದಾರೆ. ಕಡೂರಿನಿಂದ ನೆಲಮಂಗಲಕ್ಕೆ ಹೋಗುವ ಟೋಲ್ ಗಳನ್ನ ಪರೀಶಿಲನೆ ಮಾಡಿದಾಗ ಆರಂಭದಲ್ಲಿ ಮೂವರು ಇದ್ದ ಡಿಯೋ ಬೈಕ್ ತುಮಕೂರು, ಅಂದರೆ ಕೊಲೆಯಾದ ಸ್ಥಳದಿಂದ ಒಂದು ಮಗು ವ್ಯಕ್ತಿ, ನೆಲಮಂಗಲ ಬಳಿಕ‌ ಓರ್ವ ವ್ಯಕ್ತಿ ಮಾತ್ರ ಪಾಸ್ ಆಗಿರುವುದು ಟೋಲ್ ನಲ್ಲಿ ಸೆರೆಯಾಗಿದೆ. ಇದರ ಹಿಂದೆ ಬಿದ್ದ ಪೊಲೀಸರಿಗೆ ಆರೋಪಿ ಬಂಧಿಸಲು ಸಹಕಾರಿಯಾಗಿದೆ.

ಇನ್ನು ಮಗುವನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಮಹಿಳಾ ಮಕ್ಕಳ ಕಲ್ಯಾಣ ಇಳಾಖೆ ಅಡಿಯಲ್ಲಿ ಮಗು ಇದೆ. ಇತ್ತ ಆರೋಪಿ‌ಬಂದನ ವಾಗಿದೆ..ಇನ್ನೂ ತನ್ನ ಮಗಳನ್ನ ಕಳೆದುಕೊಂಡ ತಾಯಿ ಹಾಗೂ ಸಂಬಂದಿಕರು ಆರೋಪಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ. ತನ್ನ ಮಗಳು ಗರ್ಭಿಣಿ ಆಗಿರುವ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ ಲವ್ ಬಗ್ಗೆಯೂ ತಿಳಿದಿರಲಿಲ್ಲ. ಒಂದು ವೇಳೆ ಇಷ್ಟ ಇಲ್ಲಾಂದ್ರೆ ವಾಪಸ್ ಕಳಿಸಬಹುದಿತ್ತು. ಕೊಲೆ ಮಾಡಿದ್ದು ಅಪರಾಧ ಎಂದು ಗೋಳಾಡಿದ್ದಾರೆ. ಹುಚ್ಚು ಪ್ರೀತಿಯ ಹಿಂದೆ ಬಿದ್ದ ಯುವತಿ ಪ್ರಿಯಕರಿನಿಂದಲೇ ಕೊಲೆಯಾಗಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ