ಆ ಯುವಕನ ಮರ್ಡರ್ ನಡೆದ ಮರುದಿನ ಆ ಕೊಲೆಗೆ ಬಣ್ಣ ಕಟ್ಟಲಾಗಿದೆಯಾ…? ಅಮಾಯಕ ಯುವಕನ ಸಾವಿನಲ್ಲೂ (JJ Nagar Chandru Murder) ರಾಜಕೀಯದ ದುರುದ್ದೇಶ ದಳ್ಳುರಿ (Araga Jnanendra) ತನ್ನ ಬೇಳೆ ಬೇಯಿಸಿಕೊಳ್ತಿದೆಯಾ ಅನ್ನೋ ಅನುಮಾನ ಕಾಡಲಾರಂಭಿಸಿದೆ (Kamal Pant). ಇಷ್ಟಕ್ಕೂ ಈ ಅನುಮಾನ ಕಾಡಲು ಕಾರಣವೇನು…? ನಿಜವಾಗಿಯೂ ಆಗಿರೋದು ಏನು….? ಟಿವಿ9 ಇನ್ಸೈಡ್ ಮಾಹಿತಿ ಇಲ್ಲಿದೆ (TV9 Inside Story). ಈ ಇಡೀ ಕೇಸ್ಗೆ ಮೂರು ಬಣ್ಣ ಇದೆ.. ರಾಜಕೀಯ ಬಣ್ಣ.. ಖಾಕಿ ಬಣ್ಣ.. ಕೋಮು ಬಣ್ಣ. ಅದೇನು ಅನ್ನೋದನ್ನ ಎಳೆ ಎಳೆಯಾಗಿ ಇಲ್ಲಿ ಬಿಚ್ಚಿಡಲಾಗಿದೆ )Bangalore Police).
ಯೆಸ್…ಏಪ್ರಿಲ್ 4 ಸೋಮವಾರ ತಡರಾತ್ರಿ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಗುಡ್ಡದಹಳ್ಳಿಯಲ್ಲಿ ನಡೆದ ಯುವಕ ಚಂದ್ರು ಕೊಲೆ ಪ್ರಕರಣ ಕಳೆದ ಎರಡ್ಮೂರು ದಿನಗಳಿಂದ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ರಾಜಕೀಯವಾಗಿ ಕೇಸ್ ನಲ್ಲಿ ಗೃಹ ಸಚಿವರ ಹೇಳಿಕೆಯಿಂದ ಸರ್ಕಾರದ ಮರ್ಯಾದೆ ಹೋಗಿದೆ. ಹೀಗಾಗಿ ಇದನ್ನ ಖಾಕಿ ಮೇಲೆ ತಿರುಗಿಸ್ತಿದ್ದಾರೆ ಅನ್ನೋ ಅನುಮಾನ ಮೂಡಲಾರಂಭಿಸಿದ್ದು, ಸಿಟಿ ರವಿ ಪೊಲೀಸರೇ ಸುಳ್ಳು ಹೇಳಿಸಿದ್ರೂ ಹೇಳಿಸಿರಬಹುದು ಎಂದಿದ್ರು.
ಈಗ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಸಹ ಇದನ್ನೇ ಹೇಳಿದ್ದಾರೆ. ಮರ್ಯಾದೆ ಉಳಿಸಿಕೊಳ್ಳೋಕೆ ಖಾಕಿ ಕಡೆ ತಿರುಗಿಸ್ತಿದ್ದಾರೆ. ಇಷ್ಟಕ್ಕೂ ಇವತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಹೇಳಿದ್ದೇನು ಅಂದರೆ ಚಂದ್ರುವಿನ ಹತ್ಯೆಗೆ ಉರ್ದು ಬರಲಿಲ್ಲ ಎಂಬುದೇ ಕಾರಣವಾಯಿತು ಎಂದು ಅವರ ಮನೆಯವರೇ ಹೇಳಿದ್ದಾರೆ. ನಾವು ಚಂದ್ರು ನಿವಾಸಕ್ಕೆ ಭೇಟಿ ನೀಡಿದಾಗ ಇದೆಲ್ಲಾ ಹೇಳಿದರು ಎಂದಿದ್ದಾರೆ.
ಉರ್ದು ಬರಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ತೊಡೆಗೆ ಚುಚ್ಚಿದ್ದಾರೆ, ನಾವು ಸೈಮನ್ ಹೇಳಿದ್ದನ್ನು, ಮನೆಯವರು ಹೇಳಿದ್ದನ್ನು ನಂಬಬೇಕು. ಹತ್ಯೆ ಆಗಿರುವುದು ಹಿಂದೂ ಚಂದ್ರುವಿನದ್ದು. ಹತ್ಯೆ ಮಾಡಿರುವವರು ಮುಸಲ್ಮಾನ ಯುವಕರು. ಪೊಲೀಸರು ತಮ್ಮ ಮೇಲೆ ಹೊಣೆಗಾರಿಕೆ ಬರುತ್ತದೆ ಅಂತಾ ಮುಚ್ಚಿ ಹಾಕಲು ಹೇಳಿರಬಹುದು. ಇದರ ಬಗ್ಗೆ ತನಿಖೆ ಆಗಲಿ. ಪೊಲೀಸ್ ಕಮಿಷನರ್ ಇರಲಿ, ಇನ್ಯಾರೇ ಇರಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಚಂದ್ರು ಮನೆಗೆ ಅನ್ಯಾಯ ಆಗಿರುವುದು ನಾವು ಸಹಿಸಲ್ಲ. ಗೃಹ ಸಚಿವರ ಮೊದಲ ಸ್ಟೇಟ್ ಮೆಂಟ್ ಸತ್ಯ. ನಂತರ ಪೊಲೀಸರು ಅದನ್ನು ತಿರುಚಿರಬಹುದು. ಹಿಂದೂವಿಗೆ ಆಗಿರುವ ಅನ್ಯಾಯವನ್ನು ನಾವು ಸಹಿಸಲ್ಲ. ಪೊಲೀಸರಿಗೆ ಯಾರದ್ದೋ ಮಧ್ಯ ಪ್ರವೇಶ ಇದೆ. ಇದರ ಬಗ್ಗೆ ತನಿಖೆ ಆಗಲಿ. ಚಂದ್ರು ಹತ್ಯೆ ಆಗಿರೋದು ಉರ್ದು ಬರಲಿಲ್ಲ ಅಂತಾ – ಇದರ ಬಗ್ಗೆ ನಮ್ಮ ನಿಲುವು ಸ್ಪಷ್ಟ ಇದೆ ಅಂತಾ ಮತ್ತೆ… ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ.
ಇಷ್ಟಕ್ಕೂ ಈ ಘಟನೆ ಕುರಿತಂತೆ ಮೊದಲಿಗೆ ತನಿಖೆ ನಡೆಸಿದ ಖಾಕಿ ಪಡೆಯ ವರ್ಷನ್ ಏನು ಗೊತ್ತಾ…? ಆವತ್ತೇ ಉರ್ದು ಭಾಷೆ ಪ್ರಸ್ತಾಪಿಸಿದ್ದಕ್ಕೆ ಕಮಿಷನರ್ ಕಮಲ್ ಪಂತ್ ಕೋಪಗೊಂಡು ಮುಖ ತಿರುಗಿಸಿಕೊಂಡು ಹೋಗಿದ್ದರು ಎಂಬುದು ದಾಖಲಾರ್ಹ. ಹಾಗಿದ್ದರೆ ಈಗ ಖಾಕಿ ಏನ್ ಹೇಳುತ್ತೆ. ಖಾಕಿ ಆವತ್ತು ಹೇಳಿದ್ದೇನು…? ಜನಪ್ರತಿನಿಧಿಗಳ ಗಂಭೀರ ಆರೋಪ ಎಂಥದ್ದು…? ಈ ಆರೋಪದ ಬಳಿಕ ಮತ್ತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪುನರುಚ್ಚರಿಸಿದ್ದೇನು ಗೋತ್ತಾ…?
ಈ ಗಂಭೀರ ಆರೋಪಗಳನ್ನು ನಯವಾಗಿಯೇ ತಿರಸ್ಕರಿಸಿ ಉತ್ತರಿಸಿರುವ ಕಮಿಷನರ್ ಕಮಲ್ ಪಂತ್ ಜೆಜೆ ನಗರ ಯುವಕ ಚಂದ್ರು ಕೊಲೆ ಪ್ರಕರಣ ಸಂಬಂಧ ಕಮಿಷನರ್ ಹೇಳಿಕೆ ಸುಳ್ಳು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜತಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಹೇಳಿಕೆ ದಾಖಲಿಸಿದ್ದಾನೆ ಎಂದಿದ್ದಾರೆ. ಈ ಹಿನ್ನೆಲೆ ಕಾನೂನು ರೀತ್ಯಾ ಕೇಸ್ ದಾಖಲಿಸಿ ತನಿಖೆ ನಡೆಸಿ, ಆ ಬಳಿಕ ನಾವು ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಹೇಳುವ ಮೂಲಕ ಸಾರಸಗಟಾಗಿ ಜನಪ್ರತಿನಿಧಿಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
ಕಮಿಷನರ್ ಕಮಲ್ ಪಂತ್ ತಮ್ಮ ಹೇಳಿಕೆ ಪುನರುಚ್ಚರಿಸುವ ಮೂಲಕ ಪ್ರಕರಣದ ಅಸಲಿಯತ್ತು ತೆರೆದಿಟ್ಟಿದ್ದಾರೆ. ಘಟನೆ ನಡೆದ ದಿನದಿಂದ ಇದುವರೆಗೂ ತನಿಖೆ ಇಂಚಿಂಚೂ ಮಾಹಿತಿಯನ್ನ ಅಧಿಕಾರಿಗಳಿಂದ ಕಲೆ ಹಾಕಿದ್ದಾರೆ. ಘಟನೆ ಬಳಿಕ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಕೊಲೆ ನಡೆದ ವೇಳೆ ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಸೈಮನ್ ಹೇಳಿಕೆಯನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಿದ್ದಾರೆ. ಈ ವೇಳೆ ಸೈಮನ್ ದೂರು ದಾಖಲಿಸುವ ವೇಳೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ಇಡೀ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭಾಷೆ ವಿಚಾರವಾಗಿ ತನ್ನ ಹೇಳಿಕೆಯ ವೇಳೆ ಒಂದೂ ಪದವನ್ನು ಬಳಸಿಲ್ಲ. ಬೈಕ್ ಟಚ್ ಆಗಿದ್ದ ವಿಚಾರವನ್ನೇ ಒತ್ತಿ ಹೇಳಿ, ಅದೇ ಕಾರಣದಿಂದಲೇ ಆ ಆರೋಪಿಗಳು ಚಾಕುವಿನಿಂದ ಇರಿದಿದ್ದಾಗಿ ಹೇಳಿಕೆ ನೀಡಿದ್ದಾನೆ.
ಆ ಬಳಿಕ ಡಿಸಿಪಿ ಎಂ.ಎನ್. ಅನುಚೇತ್ ಕೂಡ ಬೈಕ್ ಟಚ್ ಆದ ವಿಚಾರಕ್ಕೆ ಕೊಲೆ ನಡೆದಿದೆ ಎಂದಿದ್ದರು. ಪ್ರಕರಣ ಕುರಿತು ತನ್ನ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡು, ಲಭ್ಯ ಪ್ರಾಥಮಿಕ ಮಾಹಿತಿ, ಸಾಕ್ಷ್ಯಾ ಧಾರಗಳ ಪರಾಮರ್ಶಿಸಿ, ಅದರ ಹಿನ್ನೆಲೆಯಲ್ಲಿಯೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂತಹ ಸೂಕ್ಷ್ಮ ವಿಚಾರದ ಕುರಿತಂತೆ ಸತ್ಯಾಂಶವನ್ನು, ಚಂದ್ರು ಕೊಲೆಗೆ ಕಾರಣವಾದ ಅಸಲಿಯತ್ತನ್ನ ಪುನರುಚ್ಚರಿಸಿದ್ದಾರೆ.
ಆದ್ರೆ ಗೃಹ ಸಚಿವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಸರಿಪಡಿಸಿಕೊಂಡು ಹೇಳಿದ ಬಳಿಕವೂ ಈ ಕೊಲೆ ಪ್ರಕರಣ ಸಂಬಂಧ ಪದೇ ಪದೇ ಹೇಳಿಕೆ ನೀಡ್ತಾ… ಹೋಂ ಮಿನಿಸ್ಟರ್ ಹೇಳಿಕೆ ಸಮರ್ಥಿಸುವ ಹುಂಬತನಕ್ಕೆ ಯತ್ನಿಸಿ ಅಮಾಯಕ ಯುವಕನ ಕೊಲೆಗೆ ಬಣ್ಣ ಕಟ್ಟುತ್ತಿರುವುದು, ಈ ಮೂಲಕ ಪ್ರಾಮಾಣಿಕ ಹಿರಿಯ ಪೊಲೀಸರ ಕಾರ್ಯವೈಖರಿಯನ್ನೇ ಅನುಮಾನದಿಂದ ಕಂಡು, ಅವರ ಆತ್ಮವಿಶ್ವಾಸವನ್ನ ಕುಗ್ಗಿಸುವ ಕೆಲಕ್ಕೆ ಮುಂದಾಗಿದ್ದಾರಾ ಅನ್ನೋ ಅಂಶ ಕಂಡು ಬರ್ತಿದ್ದು, ಈ ತಿಳಿಗೇಡಿ ರಾಜಕೀಯ ಹೇಳಿಕೆಗಳ ಹಿಂದಿನ ಮರ್ಮವೇನು ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.
ಅದೇನೆ ಇರಲಿ ಬೈಕ್ ಟಚ್ ಆದ ಕ್ಷುಲ್ಲಕ ಕಾರಣಕ್ಕೆ ಜೆಜೆ ನಗರದಲ್ಲಿ ನಡೆದ ಯುವಕನ ಕೊಲೆ ಖಂಡನೀಯ. ಆದ್ರೆ ಅದೇ ಕೊಲೆಯ ಕಾರಣವನ್ನು ತಿರುಚಿ, ಬಣ್ಣ ಬಳಿದು ಕಾರಣವನ್ನು ವೈಭವೀಕರಿಸಿ ಮತ್ತೆ… ಮತ್ತೆ ರಾಜಕೀಯ ಲಾಭಕ್ಕೆ ಜನಪ್ರತಿನಿಧಿಗಳು ಪೊಲೀಸ್ ವ್ಯವಸ್ಥೆಯನ್ನೇ ಅನುಮಾನಿಸಿ, ಪೊಲೀಸರ ಮೇಲೆ ಗೂಬೆ ಕೂರಿಸಲು ಮುಂದಾಗುತ್ತಿರೋದು ನಾಚಿಕೆಗೇಡಿನ ಸಂಗತಿ. ಇನ್ನಾದ್ರೂ ಇಂತ ಸೂಕ್ಷ್ಮ ವಿಚಾರಗಳನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು, ಜವಾಬ್ದಾರಿಯಿಂದ ಈ ಜನಪ್ರತಿನಿಧಿಗಳು ನಡೆದುಕೊಳ್ತಾರಾ….? ಇಲ್ಲವೇ ಕೋಮುದಳ್ಳುರಿಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ, ಸುಳ್ಳು ಹೇಳಿಕೆಗಳನ್ನ ಸತ್ಯವೆಂದು ನಿಜಾಂಶದ ತಲೆಯ ಮೇಲೆ ಹೊಡೆದಂತೆ ಪದೇ ಪದೇ ಹೇಳುತ್ತಾ ಸತ್ಯಾಂಶದ ಮುಂದೆ ಬೆತ್ತಲಾಗ್ತಾ ಇರುತ್ತಾರಾ? ಹಾಗಾದರೆ ಚಂದ್ರುವಿನ ಕೊಲೆ ಪ್ರಕರಣ ಮುಂದಿನ ದಿನಗಳಲ್ಲಿ ಇನ್ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
– ಶಿವಪ್ರಸಾದ್, ಟಿವಿ9, ಬೆಂಗಳೂರು
Published On - 7:49 pm, Sat, 9 April 22