ಜಾರ್ಖಂಡ್​ನಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಸೈನಿಕರಿಗೆ ಗಾಯ; ರಾಂಚಿಗೆ ಚಿಕಿತ್ಸೆಗೆ ಏರ್​ಲಿಫ್ಟ್​

| Updated By: ಸುಷ್ಮಾ ಚಕ್ರೆ

Updated on: Feb 11, 2022 | 7:02 PM

ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಬುಲ್ಬುಲ್-ಪೆಶ್ರಾರ್ ಪ್ರದೇಶದಲ್ಲಿ ಐಇಡಿ ಸ್ಫೋಟದಲ್ಲಿ ಕೋಬ್ರಾ ಸೈನಿಕರಾದ ದಿಲೀಪ್ ಕುಮಾರ್ ಮತ್ತು ನಾರಾಯಣ ದಾಸ್ ಗಾಯಗೊಂಡಿದ್ದಾರೆ.

ಜಾರ್ಖಂಡ್​ನಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಸೈನಿಕರಿಗೆ ಗಾಯ; ರಾಂಚಿಗೆ ಚಿಕಿತ್ಸೆಗೆ ಏರ್​ಲಿಫ್ಟ್​
ಪ್ರಾತಿನಿಧಿಕ ಚಿತ್ರ
Follow us on

ರಾಂಚಿ: ಜಾರ್ಖಂಡ್‌ನ ಲೋಹರ್ದಗಾ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಇಬ್ಬರು ಕೋಬ್ರಾ (CoBRA) ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಮಾನದ ಮೂಲಕ ರಾಂಚಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಲ್​ಬುಲ್-ಪೇಶ್ರಾರ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಕೋಬ್ರಾ ವಿಶೇಷ ಕಾರ್ಯಾಚರಣೆಯ ಘಟಕವಾಗಿರುವ ಸಿಆರ್​ಪಿಎಫ್- ಜಾರ್ಖಂಡ್ ಪೊಲೀಸರು ಮಾವೋವಾದಿಗಳ ವಿರುದ್ಧ ಕೋಬ್ರಾ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸುವುದರಲ್ಲಿ ತಲ್ಲೀನರಾಗಿದ್ದರು.

CoBRA ವಿಶೇಷ ಕಾರ್ಯಾಚರಣೆ ಘಟಕವಾಗಿರುವ ಸಿಆರ್‌ಪಿಎಫ್‌ನ ಜಂಟಿ ತಂಡ ಮತ್ತು ಜಾರ್ಖಂಡ್ ಪೊಲೀಸರು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲ್ ಪ್ರಭಾವಿತ ಬುಲ್‌ಬುಲ್-ಪೆಶ್ರಾರ್ ಪ್ರದೇಶದಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

“ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಬುಲ್ಬುಲ್-ಪೆಶ್ರಾರ್ ಪ್ರದೇಶದಲ್ಲಿ ಐಇಡಿ ಸ್ಫೋಟದಲ್ಲಿ ಕೋಬ್ರಾ ಸೈನಿಕರಾದ ದಿಲೀಪ್ ಕುಮಾರ್ ಮತ್ತು ನಾರಾಯಣ ದಾಸ್ ಗಾಯಗೊಂಡಿದ್ದಾರೆ” ಎಂದು ಪೆಶ್ರಾರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ರಿಷಿ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರನ್ನು ಹೆಲಿಕಾಪ್ಟರ್‌ನಲ್ಲಿ ರಾಂಚಿಗೆ ಕರೆದೊಯ್ಯಲಾಯಿತು. ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ನಕ್ಸಲ್ ತೀವ್ರವಾದಿಗಳ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇದೀಗ ಆ ನಕ್ಸಲರನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Arunachal Pradesh Avalanche: ಅರುಣಾಚಲ ಪ್ರದೇಶದ ಹಿಮಪಾತದಲ್ಲಿ ಸಿಲುಕಿದ್ದ 7 ಸೈನಿಕರ ಮೃತದೇಹ ಪತ್ತೆ

ಪಾಕ್‌ ಗಡಿಯಲ್ಲಿ ಕೊರೆಯುವ ಚಳಿ, ಮಂಜು, ಹಿಮದಲ್ಲೂ ದೇಶ ಕಾಯುವ ಭಾರತದ ಸೈನಿಕರು

Published On - 4:59 pm, Fri, 11 February 22