ಅಯ್ಯೋ ವಿಧಿಯೇ..! ರೇವಣಸಿದ್ದೇಶ್ವರ ಬೆಟ್ಟದಲ್ಲಿ ಯಾರೋ ಹಚ್ಚಿದ ಬೆಂಕಿಗೆ ಆಹುತಿಯಾದ ಪಾದಯಾತ್ರಿ
ರೇವಣಸಿದ್ದೇಶ್ವರ ಬೆಟ್ಟದಲ್ಲಿ ಯಾರೋ ಹಚ್ಚಿದ ಬೆಂಕಿಗೆ ಪಾದಯಾತ್ರಿ ಬಲಿಯಾಗಿದ್ದಾರೆ. ಇನ್ನು ಗೋಕರ್ಣ ಮುಖ್ಯ ಕಡಲತೀರದಲ್ಲಿ ಪ್ರವಾಸಿಗ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಪಿಕ್ನಿಕ್‌ಗೆ ತೆರಳಿದ್ದ ಬಸ್ ಪಲ್ಟಿಯಾಗಿ ಐವರು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ತುಮಕೂರು: ರೇವಣಸಿದ್ದೇಶ್ವರ ಬೆಟ್ಟದಲ್ಲಿ (Revanasiddeshwara Betta) ಪಾದಯಾತ್ರಿಯೋರ್ವರು ಬೆಂಕಿಗೆ ಆಹುತಿಯಾದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಬಳಿಯ ಬೆಟ್ಟದಲ್ಲಿ ನಡೆದಿದೆ. ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ಕಿಡಿಗೇಡಿಗಳು ಹುಲ್ಲಿಗೆ ಬೆಂಕಿಯಿಟ್ಟಿದ್ದಾರೆ. ದುರ್ವೈವ ಅಂದ್ರೆ ಈ ಬೆಂಕಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬಂದಿದ್ದ ಪಾದಯಾತ್ರಿಗೆ ತಗುಲಿ ಸಾವನ್ನಪ್ಪಿದ್ದಾರೆ.
ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪಾದಯಾತ್ರಿ ಯಾರು?ಎಲ್ಲಿಯವರು ಎಂದು ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ: Shivamogga: ಪ್ರೇಯಸಿಯೊಂದಿಗೆ ಲಾಡ್ಜ್ನಲ್ಲಿ ತಂಗಿದ್ದ ಪ್ರಿಯಕರ ಬೆಳಗ್ಗೆ ಶವವಾಗಿ ಪತ್ತೆ
ಗೋಕರ್ಣ ಮುಖ್ಯ ಕಡಲತೀರದಲ್ಲಿ ಪ್ರವಾಸಿಗ ಸಾವು
ಉತ್ತರ ಕನ್ನಡ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಗೋಕರ್ಣ ಹೋಗಿದ್ದ ಯುವಕ ಗೋಕರ್ಣ ಮುಖ್ಯ ಕಡಲತೀರದಲ್ಲಿ ಸಾವನ್ನಪ್ಪಿದ್ದಾನೆ. ಹಾವೇರಿ ಮೂಲದ ಸಂತೋಷ್ ಗಾಣಿಗೇರ (23) ಸಾವನ್ನಪ್ಪಿದ ಯುವಕ. ನೀರಿನಿಂದ ಮೇಲೆ ಬಂದು ದಡದಲ್ಲಿ ಮಲುಗಿದ್ದ ವೇಳೆ ಸಂತೋಷ್ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕಿಸಲಾಗಿದ್ದು, ಸದ್ಯ ಯುವಕನ ಮೃತ ದೇಹವನ್ನ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಪಿಕ್ನಿಕ್‌ಗೆ ತೆರಳಿದ್ದ ಬಸ್ ಪಲ್ಟಿಯಾಗಿ ಐವರು ವಿದ್ಯಾರ್ಥಿಗಳಿಗೆ ಗಾಯ
ಹಾಸನ/ಚಿಕ್ಕಮಗಳೂರು: ಪಿಕ್ನಿಕ್‌ಗೆ ತೆರಳಿದ್ದ ಬಸ್ ಪಲ್ಟಿಯಾಗಿ ಐವರು ವಿದ್ಯಾರ್ಥಿಗಳಿಗೆ ಗಾಯವಾಗಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡದಲ್ಲಿ ಸಂಭವಿಸಿದೆ. ದೇವರಮನೆ ಗುಡ್ಡದಿಂದ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
ಮುತ್ತಿಗೆಪುರದ ಹರೀಶ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಬಳಿಕ ಬಸ್ ಪಲ್ಟಿಯಾಗಿದೆ. ಗಾಯಾಳು ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:39 pm, Sun, 15 January 23