ಚಿನ್ನಾಭರಣ ಪ್ರದರ್ಶನ ವೇಳೆ 200 ಗ್ರಾಂ ಚಿನ್ನ ಎಗರಿಸಿದ ಐನಾತಿ ಮಹಿಳೆಯರು!
ಬೆಂಗಳೂರು: ಚಿನ್ನಾಭರಣ ಪ್ರದರ್ಶನ ವೇಳೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಜನವರಿ 18ರಿಂದ 20ರವರೆಗೂ ರಾಜಕುಮಾರ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ವಿಶಾಖಪಟ್ಟಣಂ ಮೂಲದ ವೈಭವ್ ಜ್ಯುವೆಲ್ಲರಿ ಮಳಿಗೆ ಮಾಲೀಕರು ಚಿನ್ನಾಭರಣ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿದ್ದರು. ಆಗ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ 196.720 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. 5 ಮಂದಿ ಖದೀಮರ ತಂಡ: ಘಟನೆ ನಡೆದ ವೇಳೆ ಯಾರಿಗೂ ಚಿನ್ನ ಕದ್ದಿರುವ […]
ಬೆಂಗಳೂರು: ಚಿನ್ನಾಭರಣ ಪ್ರದರ್ಶನ ವೇಳೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಜನವರಿ 18ರಿಂದ 20ರವರೆಗೂ ರಾಜಕುಮಾರ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ವಿಶಾಖಪಟ್ಟಣಂ ಮೂಲದ ವೈಭವ್ ಜ್ಯುವೆಲ್ಲರಿ ಮಳಿಗೆ ಮಾಲೀಕರು ಚಿನ್ನಾಭರಣ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿದ್ದರು. ಆಗ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ 196.720 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ.
5 ಮಂದಿ ಖದೀಮರ ತಂಡ: ಘಟನೆ ನಡೆದ ವೇಳೆ ಯಾರಿಗೂ ಚಿನ್ನ ಕದ್ದಿರುವ ವಿಚಾರ ಅರಿವಿಗೆ ಬಂದಿರಲಿಲ್ಲ. ಚಿನ್ನಾಭರಣ ಪ್ರದರ್ಶನ ಮುಗಿದ ಬಳಿಕ ಲೆಕ್ಕಾಚಾರದ ವೇಳೆ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅನುಮಾನಗೊಂಡು ಹೋಟೆಲ್ನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಐನಾತಿ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ವೈಭವ್ ಚಿನ್ನದ ಮಳಿಗೆ ಮಾಲೀಕರು ಸುಬ್ರಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಂಡಿದ್ದಾರೆ. ಕಳ್ಳರ ಗ್ಯಾಂಗಿನಲ್ಲಿ ಒಟ್ಟು 5 ಮಂದಿ ಇರಬಹುದು ಎಂದು ಶಂಕಿಸಲಾಗಿದೆ.
Published On - 2:58 pm, Thu, 30 January 20