ಮಹಿಳೆಯರಿಬ್ಬರ ಆತ್ಮಹತ್ಯೆ ಪ್ರಕರಣ: ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ; ಅಧಿಕಾರಿಗಳ ಅಮಾನತಿಗೆ ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2022 | 11:32 AM

ವಿಷ ಸೇವಿಸಿ ಒದ್ದಾಡುತ್ತಿದ್ದಾಗ ನಾಟಕ ಮಾಡ್ತಾಯಿದ್ದಾರೆ ಅಂತ ಮುಂಡರಗಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದಲೂ ನಿರ್ಲಕ್ಷ್ಯ ಮಾಡಲಾಗಿದೆ. 108 ಆಂಬ್ಯುಲೆನ್ಸ್ ಗೂ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ರೆ ಮಹಿಳೆ ಬದುಕುಳಿಯುತ್ತಿದ್ದಳು.

ಮಹಿಳೆಯರಿಬ್ಬರ ಆತ್ಮಹತ್ಯೆ ಪ್ರಕರಣ: ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ; ಅಧಿಕಾರಿಗಳ ಅಮಾನತಿಗೆ ಒತ್ತಾಯ
ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು
Follow us on

ಗದಗ: ವಿಷ ಸೇವಿಸಿ ಮಹಿಳೆಯರಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರಿನಲ್ಲಿ ಘಟನೆ ನಡೆದಿದೆ. ವಿಷ (poison) ಸೇವಿಸಿದ್ದ ಓರ್ವ ರೈತ ಮಹಿಳೆ ಚಿಕಿತ್ಸೆ ಫಲಿಸದೆ ನಿರ್ಮಲಾ ಪಾಟೀಲ್(34) ಸಾವನ್ನಪ್ಪಿದ್ದಾರೆ. ಮತ್ತೋರ್ವ ರೈತ ಮಹಿಳೆ ಸರೋಜಾ ಸ್ಥಿತಿ ಗಂಭೀರವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ರೈತ ಮಹಿಳೆ ಸರೋಜಾಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ರೈತ ಮಹಿಳೆ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಆರೋಪ ಕೇಳಿಬರುತ್ತಿದೆ. ವಿಷ ಸೇವಿಸಿ ಒದ್ದಾಡುತ್ತಿದ್ದಾಗ ನಾಟಕ ಮಾಡ್ತಾಯಿದ್ದಾರೆ ಅಂತ ಮುಂಡರಗಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದಲೂ ನಿರ್ಲಕ್ಷ್ಯ ಮಾಡಲಾಗಿದೆ. 108 ಆಂಬ್ಯುಲೆನ್ಸ್ ಗೂ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ರೆ ಮಹಿಳೆ ಬದುಕುಳಿಯುತ್ತಿದ್ದಳು. ತಾಯಿಯನ್ನ ಕಳೆದುಕೊಂಡು ಇಬ್ಬರು ‌ಕಂದಮ್ಮಗಳು ಅನಾಥವಾಗಿವೆ. ರೈತ ಮಹಿಳೆ ಕಳೆದುಕೊಂಡು ಇಡೀ ‌ಗ್ರಾಮ ಕಣ್ಣೀರು ಹಾಕುತ್ತಿದ್ದು, ಕೆಲೂರ ಗ್ರಾಮದಲ್ಲಿ ಸ್ಮಶಾನಮೌನ ವಾತಾವರಣ ನಿರ್ಮಾಣವಾಗಿದೆ. ತಡರಾತ್ರಿ ಎರಡು ಗಂಟೆವರೆಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಕೂಡಿ ಹಾಕಿದ್ದು, ಹಿರಿಯ ಅಧಿಕಾರಿಗಳ ತಂಡ ಆಗಮಿಸಿ ಗ್ರಾಮಸ್ಥರ ಮನವೊಲಿಸಿ ಬಿಡಿಸಿಕೊಂಡು ಹೋಗಿದ್ದಾರೆ.

ಸದ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದು, ಕೆಲೂರು ಗ್ರಾಮದಿಂದ ಮೃತರ ಕುಟುಂಬಸ್ಥರು ಗ್ರಾಮಸ್ಥರು ಗದಗ ನತ್ತ ಪ್ರಯಾಣ ಬೆಳೆಸಿದ್ದಾರೆ. ರೈತರ ಮೇಲೆ ದೌರ್ಜನ್ಯ ಮಾಡಿದ್ದಾದೆ ಎಂದು ರೈತರು ಆರೋಪಿಸಿದ್ದು, ಅರಣ್ಯ ಇಲಾಖೆ ಎಸಿಎಫ್ ಪರಿಮಳಾ ಹಾಗೂ ಆರ್. ಎಫ್. ಓ ಪ್ರದೀಪ್ ಪವಾರ ಅವರನ್ನು ಅಮಾನತು ಮಾಡಲು ಒತ್ತಾಯಿಸಲಾಗಿದೆ. ಜೊತೆಗೆ ಮೃತಳ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕಾರ್ ಮತ್ತು ಬೈಕ್ ಮಧ್ಯೆ ಅಪಘಾತ;

ಕಾರವಾರ: ಸೇತುವೆ ಮೇಲೆ ಕಾರ್ ಮತ್ತು ಬೈಕ್ (car and bike accident)   ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ನದಿಗೆ ಬಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ. ಅಕ್ಷಯ್ (26), ಸುನೀಲ್ (27) ನದಿಗೆ ಬಿದ್ದ ಬೈಕ್ ಸವಾರರು. ಕಾರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಯುವಕರು ನದಿಗೆ ಬಿದಿದ್ದಾರೆ. ಈಜುತ್ತಾ ದಡಕ್ಕೆ ಬಂದ ಓರ್ವ ಸುನೀಲ್, ಇನ್ನೋರ್ವ ನಾಪತ್ತೆಯಾಗಿದ್ದು, ನಾಪತ್ತೆಯಾದ ಅಕ್ಷಯಗಾಗಿ ಹುಡಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಈಜು ತಜ್ಞರು, ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೊನ್ನಾವರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ:

ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಳಕೆಯಾಗುತ್ತಿರುವ Z ಸಂಕೇತದ ಅರ್ಥವೇನು