Crime News: ಫೇಕ್ ಕಾಲ್ ಸೆಂಟರ್ ಮೂಲಕ ಬರೋಬ್ಬರಿ 170 ಕೋಟಿ ರೂ. ವಂಚನೆ..!

| Updated By: ಝಾಹಿರ್ ಯೂಸುಫ್

Updated on: Jul 16, 2022 | 6:16 PM

Crime News In Kannada: ಈ ಬಗ್ಗೆ ಪರಿಶೀಲಿಸಿದಾಗ ಈ ಖತರ್ನಾಕ್ ಗ್ಯಾಂಗ್​ ಸಂತ್ರಸ್ತರ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ರಿಮೋಟ್‌ನಿಂದ ನಿಯಂತ್ರಿಸಲು ವಿಶೇಷ ಸಾಫ್ಟ್‌ವೇರ್ ಬಳಸಿರುವುದು ಪತ್ತೆಯಾಗಿದೆ

Crime News: ಫೇಕ್ ಕಾಲ್ ಸೆಂಟರ್ ಮೂಲಕ ಬರೋಬ್ಬರಿ 170 ಕೋಟಿ ರೂ. ವಂಚನೆ..!
ಸಾಂದರ್ಭಿಕ ಚಿತ್ರ
Follow us on

ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಆದರೆ ಈ ತಂಡ ಮೋಸ ಮಾಡಿ ಸಂಪಾದಿಸಿದ್ದು ಮಾತ್ರ ಬರೋಬ್ಬರಿ 170 ಕೋಟಿ ರೂ. ಅಂದರೆ ಅಚ್ಚರಿಪಡಲೇಬೇಕು. ಹೌದು, ಉತ್ತರ ಪ್ರದೇಶದ ನೋಯ್ಡಾದ ಖತರ್ನಾಕ್ ಸೈಬರ್​ ದರೋಡೆಕೋರರ ಗುಂಪೊಂದು ವಿದೇಶಿಯರಿಗೆ ವಂಚಿಸಿ ಬೃಹತ್ ಕೋಟಿ ಸಂಪಾದಿಸಿದ್ದರು. ಟೆಕ್​ನಲ್ಲಿ ನುರಿತರಾಗಿದ್ದ ಈ ತಂಡವು ತೆರಿಗೆ ಮರುಪಾವತಿ ಹೆಸರಿನಲ್ಲಿ ವಿದೇಶಿ ಕಾಲ್​ ಸೆಂಟರ್ ನಡೆಸುತ್ತಿತ್ತು. ಇವರ ವಂಚನೆ ಜಾಲಕ್ಕೆ ಬೀಳುತ್ತಿದ್ದವರು ಹಣ ಕಳೆದುಕೊಳ್ಳುತ್ತಿದ್ದರು. ಹೀಗೆ ಅತ್ಯಾಧುನಿಕ ಸಾಫ್ಟ್​ವೇರ್​ಗಳನ್ನು ಬಳಸಿ ಯುಎಸ್, ಕೆನಡಾ, ಯುಕೆ, ಲೆಬನಾನ್, ಹಾಂಗ್ ಕಾಂಗ್ ಮುಂತಾದ ದೇಶಗಳಲ್ಲಿನ ಜನರನ್ನು ಗುರಿಯಾಗಿಸಿಕೊಂಡಿದ್ದರು.

ಆದರೆ ಈ ಬಗ್ಗೆ ವಿದೇಶದಿಂದ ದೂರು ಬಂದಿದ್ದರಿಂದ ಯುಪಿ ಎಸ್‌ಟಿಎಫ್ ಕಾರ್ಯಾಚರಣೆಗೆ ಇಳಿದಿತ್ತು. ಅದರಂತೆ ಕಾಲ್ ಸೆಂಟರ್​ ಜಾಲವನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರೂಪಿಸಲಾಗಿತ್ತು. ಇದೀಗ 10 ಸದ್ಯರ ತಂಡವನ್ನು ನೋಯ್ಡಾದ ಸೆಕ್ಟರ್ 59 ಪ್ರದೇಶದಿಂದ ಬಂಧಿಸಲಾಗಿದೆ. ಅಲ್ಲದೆ ಈ ಬಗ್ಗೆ ಪರಿಶೀಲಿಸಿದಾಗ ಈ ಖತರ್ನಾಕ್ ಗ್ಯಾಂಗ್​ ಸಂತ್ರಸ್ತರ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ರಿಮೋಟ್‌ನಿಂದ ನಿಯಂತ್ರಿಸಲು ವಿಶೇಷ ಸಾಫ್ಟ್‌ವೇರ್ ಬಳಸಿರುವುದು ಪತ್ತೆಯಾಗಿದೆ ಎಂದು ಎಸ್‌ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಲ್ ಸೆಂಟರ್​ನಂತೆ ಕಾರ್ಯ ನಿರ್ವಹಿಸುತ್ತಿದ್ದ ಈ ತಂಡವು ದೂರದಿಂದಲೇ ಬಳಕೆದಾರರ ಖಾತೆಯನ್ನು ನಿಯಂತ್ರಿಸಲು ವಿವಿಧ ತಂತ್ರಗಳನ್ನು ಬಳಸಿದೆ. ಇದಕ್ಕಾಗಿ ಮುಖ್ಯವಾಗಿ VoIP ಕರೆ ಮೂಲಕ ಈ ತಂಡವು ಕಾರ್ಯ ನಿರ್ವಹಿಸುತ್ತಿತ್ತು. VoIP ಎಂದರೆ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್. ಇದು ವಾಟ್ಸಾಪ್ ಕರೆಯಂತೆ ಕಾರ್ಯನಿರ್ವಹಿಸುತ್ತದೆ. ಮೊದಲು ಬಳಕೆದಾರರ ಮಾಹಿತಿ ಕಲೆಹಾಕಿ ಅವರ ಕಂಪ್ಯೂಟರ್​ ಅಥವಾ ಲ್ಯಾಪ್​ಟಾಪ್​ಗೆ ವೈರಸ್​ಗಳನ್ನು ಇನ್​ಸ್ಟಾಲ್​ ಮಾಡುತ್ತಿದ್ದರು. ಆ ಬಳಿಕ ಕರೆ ಮಾಡಿ ಸರಿಪಡಿಸುವ ನೆಪದಲ್ಲಿ ಖಾತೆಯ ಮೇಲೆ ಹಿಡಿತ ಸಾಧಿಸಿ ಹಣ ಲಪಟಾಯಿಸುತ್ತಿದ್ದರು.

ಇದನ್ನೂ ಓದಿ
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಇದಕ್ಕಾಗಿ 70 ಕ್ಕೂ ಹೆಚ್ಚು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಮತ್ತು ಹಲವಾರು ಮೊಬೈಲ್ ಫೋನ್‌ಗಳನ್ನು ಬಳಸಲಾಗಿದೆ. ಅಲ್ಲದೆ ಬಂಧಿತರರಿಂದ ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆ ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಯುಪಿ ಎಸ್‌ಟಿಎಫ್) ವಿಶಾಲ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಇನ್ನು ಈ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ಗಳನ್ನು ಕರಣ್ ಮೋಹನ್ ಮತ್ತು ವಿನೋದ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಕಾರ್ಯ ನಿರ್ವಹಿಸಿದ ಬಂಧಿತರನ್ನು ಧ್ರುವ ನಾರಂಗ್, ಮಯಾಂಕ್ ಗೋಗಿಯಾ, ಅಕ್ಷಯ್ ಮಲಿಕ್, ದೀಪಕ್ ಸಿಂಗ್, ಅಹುಜಾ ಪೊದ್ವಾಲ್, ಅಕ್ಷಯ್ ಶರ್ಮಾ, ಜಯಂತ್ ಸಿಂಗ್ ಮತ್ತು ಮುಕುಲ್ ರಾವತ್ ಎಂದು ತಿಳಿದು ಬಂದಿದ್ದು, ಇವರ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಎಸ್‌ಟಿಎಫ್ ತಿಳಿಸಿದೆ.