AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್: ತಮ್ಮ ಮೇಲೆ ದ್ವೇಷಕಾರಿ ಹಲ್ಲೆ ನಡೆದಿದೆ ಎಂದು ಸಲಿಂಗಿ ದಂಪತಿ ದೂರಿದರೆ ಅದಕ್ಕೆ ಪುರಾವೆ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಪೊಲೀಸರು!

ಬಾರ್ ನ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಅವರ ಹೇಳಿಕೆಯ ಪ್ರಕಾರ, ಹಲ್ಲೆ ನಡೆಸಿದ ವ್ಯಕ್ತಿ ಬಾರ್ ನಲ್ಲಿ ಆಯೋಜಿಸಲಾಗಿದ್ದ ಡ್ರ್ಯಾಗ್ ಶೋವೊಂದರಲ್ಲಿ ಭಾಗಿವಹಿಸಿದ್ದ ಅದರೆ ಅವನಿಂದ ಬಾರ್  ಮಹಿಳಾ ಸಿಬ್ಬಂದಿ ಕಿರಿಕಿರಿ ಅನುಭವಿಸಲಾರಂಭಿಸಿದ ಕಾರಣ ಅವನನ್ನು ಹೊರಗಡೆ ಕಳಿಸುವ ಪ್ರಯತ್ನ ಮಾಡಲಾಗಿತ್ತು.

ಯುಎಸ್: ತಮ್ಮ ಮೇಲೆ ದ್ವೇಷಕಾರಿ ಹಲ್ಲೆ ನಡೆದಿದೆ ಎಂದು ಸಲಿಂಗಿ ದಂಪತಿ ದೂರಿದರೆ ಅದಕ್ಕೆ ಪುರಾವೆ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಪೊಲೀಸರು!
ಕೇಸಿ ಫಿಟ್ಜ್​ಪ್ರ್ಯಾಟ್ರಿಕ್ ಮತ್ತು ನಿಕೊಲಾಸ್ ರೂಯಿಜ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2022 | 7:59 AM

ತಮ್ಮ ಒಡೆತನದ ಬಾರ್ ಹೊರಗಡೆ ಲೈಂಗಿಕ ಆದ್ಯತೆಯ (sexuality) ಹಿನ್ನೆಲೆಯಲ್ಲಿ ತಮ್ಮಿಬ್ಬರನ್ನು ಥಳಿಸಲಾಗಿದೆ ಎಂದು ಸಲಿಂಗಕಾಮಿ ದಂಪತಿ (gay couple) ಪೊಲಿಸರಿಗೆ ನೀಡಿದ ಘಟನೆ ಅಮೆರಿಕದ ಕನೆಕ್ಟಿಕಟ್ ನಲ್ಲಿ (Connecticut) ಕಳೆದ ತಿಂಗಳು ಜರುಗಿದೆ. ಆದರೆ ಪೊಲೀಸರು ಅವರಿಬ್ಬರ ಸೆಕ್ಸುವಾಲಿಟಿ ವಿರೋಧಿಸಿ ಹಲ್ಲೆ ನಡೆದಿದೆ ಅಂತ ಸಾಬೀತುಗೊಳಿಸುವ ಯಾವುದೇ ಪುರಾವೆ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಒಬ್ಬ ಪುರುಷ ಹಲ್ಲೆಕೋರ ತಮ್ಮ ಟ್ರೂಪ್ 429 ಬಾರ್ ಎದುರು ತಮ್ಮ ಮೇಲೆ ಹಲ್ಲೆ ನಡೆಸಿದ ಎಂದು ಕೇಸಿ ಪಿಟ್ಜ್ ಪ್ರ್ಯಾಟ್ರಿಕ್ ಮತ್ತು ನಿಕೊಲಾಸ್ ರೂಯಿಜ್ ದೂರು ಸಲ್ಲಿಸಿದ್ದಾರೆ.

ಆಸ್ಪತ್ರೆಯೊಂದರಲ್ಲಿ ಹಿಡಿದಿರುವ ಫೋಟೋವೊಂದರಲ್ಲಿ ಮುಖದ ಮೇಲೆ ಅಳವಾದ ಗಾಯ ಮತ್ತು ಎದೆಭಾಗದಲ್ಲಿ ರಕ್ತ್ತ ಕಲೆಗಳಿರುವ ಉಡುಪಿನಲ್ಲಿ ಬೆಡ್ ಮೇಲೆ ರೂಯಿಜ್ ಮಲಗಿರುವುದು ಕಾಣುತ್ತದೆ.

Nicholas Ruiz in hospital

ಆಸ್ಪತ್ರೆಯಲ್ಲಿ ನಿಕೊಲಾಸ್ ರೂಯಿಜ್

‘ಸಲಿಂಗಕಾಮದ ವಿರುದ್ಧ ಅವನು ನಮ್ಮನ್ನು ಅಪಹಾಸ್ಯ ಮಾಡುತ್ತಾ ಬೈದಾಡಿದ ಮತ್ತು ರೂಯಿಜ್ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ. ಅವನ ಗಾಯಕ್ಕೆ 50 ಹೊಲಿಗೆಗಳನ್ನು ಹಾಕಬೇಕಾಯಿತು ಮತ್ತು ಪ್ಲಾಸ್ಟಿಕ್ ಸರ್ಜರಿಗಾಗಿ ಸುಮಾರು 16.5 ಲಕ್ಷ ರೂ. ಖರ್ಚು ಮಾಡಬೇಕಾಯಿತು,’ ಅಂತ ಸಲಿಂಗಿ ದಂಪತಿ ಹೇಳಿದ್ದಾರೆ.

ಬಾರ್ ನ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಅವರ ಹೇಳಿಕೆಯ ಪ್ರಕಾರ, ಹಲ್ಲೆ ನಡೆಸಿದ ವ್ಯಕ್ತಿ ಬಾರ್ ನಲ್ಲಿ ಆಯೋಜಿಸಲಾಗಿದ್ದ ಡ್ರ್ಯಾಗ್ ಶೋವೊಂದರಲ್ಲಿ ಭಾಗಿವಹಿಸಿದ್ದ ಅದರೆ ಅವನಿಂದ ಬಾರ್  ಮಹಿಳಾ ಸಿಬ್ಬಂದಿ ಕಿರಿಕಿರಿ ಅನುಭವಿಸಲಾರಂಭಿಸಿದ ಕಾರಣ ಅವನನ್ನು ಹೊರಗಡೆ ಕಳಿಸುವ ಪ್ರಯತ್ನ ಮಾಡಲಾಗಿತ್ತು.

ಅದರೆ ಅವನು ಹೊರಗೆ ಹೋಗಲು ನಿರಾಕರಿಸಿದ ಮತ್ತು ಎಲ್ ಜಿ ಬಿಟಿ ಕ್ಯೂ-ವಿರೋಧಿ ಪದಗಳನ್ನು ಬಳಸುತ್ತಾ ಇದ್ದಕ್ಕಿದ್ದಂತೆ ಹಿಂಸಾ ಪ್ರವೃತ್ತಿ ಪ್ರದರ್ಶಿಸಲಾರಂಭಿಸಿದ ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

‘ಅವನು ನಿಕೊಲಾಸ್ ರೂಯಿಜ್ ಮುಖದ ಮೇಲೆ ಮುಷ್ಠಿಯಿಂದ ಪ್ರಹಾರ ನಡೆಸಿದ ಮತ್ತು ಅವನನ್ನು ನೆಲಕ್ಕೆ ಕೆಡವಿ ಎದೆ ಮೇಲೆ ಕೂತು ಬಟ್ಟೆ ಹರಿದು ಹಾಕಿದ,’ ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ.

‘ನಮ್ಮ ಮೇಲೆ ನಡೆದ ಹಲ್ಲೆ ದ್ವೇಷಕಾರಿ ಅಪರಾಧವಲ್ಲದೆ ಮತ್ತೇನೂ ಆಲ್ಲ ಮತ್ತು ಹಲ್ಲೆ ಪ್ರಕರಣವನ್ನು ನಗರ ಮತ್ತು ನೊರ್ವಾಕ್ ಪೊಲೀಸ್ ಸೂಕ್ತವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ,’ ಎಂದು ದಂಪತಿ ಹೇಳಿದ್ದಾರೆ.

‘ನಮ್ಮ ಮೇಲೆ ಹಲ್ಲೆ ನಡೆದು ಎರಡೂವರೆ ವಾರ ಕಳೆದರೂ ಅಕ್ಟೋಬರ್ 11ರವರೆಗೆ ಎಫ್ ಐ ಆರ್ ದಾಖಲಾಗಿಲ್ಲ ಮತ್ತು ಶಂಕಿತನನ್ನು ಬಂಧಿಸಿಲ್ಲ,’ ಎಂದು ಅವರು ಹೇಳಿದ್ದಾರೆ.

‘ಕಳೆದ ಎರಡು ವಾರಗಳಲ್ಲಿ, ನಾರ್ವಾಕ್ ಪೊಲೀಸರಿಗೆ ವೀಡಿಯೊ ಫುಟೇಜ್ ಮತ್ತು ಟ್ರಾನ್ಸ್ ಸ್ಕ್ರಿಪ್ಟ್ ಮತ್ತು ನಮ್ಮ ವೈದ್ಯಕೀಯ ದಾಖಲೆಗಳು ನೀಡಲಾಗಿದೆ. ನಾನು ಕಳೆದ ವಾರ ಪ್ರತಿ ರಾತ್ರಿ ನೊರ್ವಾಕ್ ಪೊಲೀಸ್ ಠಾಣೆಗೆ ಇಮೇಲ್ ಮಾಡಿದ್ದೇನೆ, ಕರೆ ಮಾಡಿದ್ದೇನೆ ಮತ್ತು ಖುದ್ದಾಗಿಯೂ ಭೇಟಿ ನೀಡಿದ್ದೇನೆ’ ಎಂದು ಕೇಸಿ ಹೇಳಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ ಮತ್ತು ದಾಳಿಯ ರಾತ್ರಿ ಅಲ್ಲಿದ್ದ ಜನರೊಂದಿಗೆ ನಾವು ನಡೆಸಿದ ಸಂಭಾಷಣೆಗಳನ್ನು ಆಧರಿಸಿ, ನೊರ್ವಾಕ್ ಪೊಲೀಸರು ಹಲವಾರು ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬನೊಂದಿಗೂ ಮಾತಾಡಿಲ್ಲ,’ ಎಂದು ಕೇಸಿ ಹೇಳಿದ್ದಾರೆ.

ದಂಪತಿ ಮಾಡಿರುವ ಆರೋಪಗಳನ್ನು ನಿರಾಕರಿಸಿರುವ ನೊರ್ವಾಕ್ ಪೊಲೀಸರು, ಪ್ರಮಾಣಿತ ಹೇಳಿಕೆಗಳನ್ನು ದಾಖಲಿಸಲು ನಾವು ನೀಡಿದ ಸಮಯಕ್ಕೆ ಅವರು ಆಗಮಿಸಿಲಿಲ್ಲ ಎಂದು ಎನ್ ಬಿ ಸಿ ತಿಳಿಸಿದ್ದಾರೆ.

ಎಲ್ ಜಿ ಬಿ ಟಿ ಕ್ಯೂ ವಿರೋಧಿ ಭಾವನೆ ಪ್ರೇರಿತ ಆಕ್ರಮಣ ನಡೆದಿದೆ ಅಂತ ಸಾಬೀತು ಮಾಡುವ ಯಾವುದೇ ಅಂಶ ನಮ್ಮ ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

“ಬಾರ್ ಒಳಗಿನ ವೀಡಿಯೊ ಫುಟೇಜ್ ಪರಿಶೀಲಿಸಿ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಇಬ್ಬರು ಸಂತ್ರಸ್ತರಿಂದ ಪ್ರಮಾಣಿತ ಹೇಳಿಕೆಗಳನ್ನು ದಾಖಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್ ಇಲಾಖೆಗೆ ಬಂಧನದ ವಾರಂಟ್ ಹೊರಡಿಸುವ ಆದೇಶ ನೀಡುತ್ತಾರೆ,’ ಎಂದು ಪೊಲೀಸರು ಎನ್ ಬಿ ಸಿಗೆ ಹೇಳಿದ್ದಾರೆ.