Uttar Pradesh Crime: ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಮಾಡಿ ಸೆಪ್ಟಿಕ್​ ಟ್ಯಾಂಕ್​ ಒಳಗೆ ಎಸೆದಿದ್ದ ಮಹಿಳೆಯ ಬಂಧನ

|

Updated on: Jun 16, 2023 | 10:43 AM

ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿ ಸೆಪ್ಟಿಕ್ ಟ್ಯಾಂಕ್​ಗೆ ಎಸೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Uttar Pradesh Crime: ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಮಾಡಿ ಸೆಪ್ಟಿಕ್​ ಟ್ಯಾಂಕ್​ ಒಳಗೆ ಎಸೆದಿದ್ದ ಮಹಿಳೆಯ ಬಂಧನ
ಸೆಪ್ಟಿಕ್ ಟ್ಯಾಂಕ್(ಸಾಂದರ್ಭಿಕ ಚಿತ್ರ)
Follow us on

ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿ ಸೆಪ್ಟಿಕ್ ಟ್ಯಾಂಕ್​ಗೆ ಎಸೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಂಡಲ್ ಗ್ರಾಮದ ಸಾಗರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿ ಆಶಿಯಾ ಮತ್ತು ಆಕೆಯ ಪ್ರಿಯಕರ ಸುಹೇಲ್ ಅವರನ್ನು ಗುರುವಾರ ಬಂಧಿಸಲಾಗಿದೆ.

ಸಾಗರ್ ಜೂನ್ 6 ರಂದು ನಾಪತ್ತೆಯಾಘಿದ್ದರು, ನಂತರ ಪೊಲೀಸರು ಆತನ ಶವವನ್ನು ಸೆಪ್ಟಿಕ್​ ಟ್ಯಾಂಕ್​ನಲ್ಲಿ ಪತ್ತೆ ಮಾಡಿದ್ದರು. ಪ್ರಿಯಕರ ಸುಹೇಲ್ ಸಹಾಯದಿಂದ ಪತಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್​ಗೆ ಎಸೆದಿರುವುದಾಗಿ ಆಶಿಯಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Crime News: ಚಿತ್ರದುರ್ಗದ ವ್ಯಕ್ತಿಯ ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್; ಪತ್ನಿ, ಪ್ರಿಯಕರ ಸೇರಿ ಪತಿಯ ಹತ್ಯೆ

ಸುಹೇಲ್​ ಜತೆಗೆ ಪತ್ನಿಗೆ ಸಂಬಂಧವಿದೆ ಎಂದು ತಿಳಿದ ಬಳಿಕ ಹೇಗಾದರೂ ಮಾಡಿ ಪತಿಯನ್ನು ಹತ್ಯೆ ಮಾಡಬೇಕು ಎಂದು ಯೋಚಿಸಿ ಮೊದಲೇ ಪ್ಲ್ಯಾನ್​ ಮಾಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಸಾಗರ್​ನನ್ನು ಹತ್ಯೆ ಮಾಡಿದ್ದಾರೆ.

ಬಳಿಕ ಯಾರಿಗೂ ಕಾಣದಂತೆ ಸೆಪ್ಟಿಕ್ ಟ್ಯಾಂಕ್​ಗೆ ಹಾಕಿ, ಏನೂ ತಿಳಿಯದವರಂತೆ ವರ್ತಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮುಗ್ಧರಂತೆ ವರ್ತಿಸಿದ್ದರು. ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ