Crime News: ಚಿತ್ರದುರ್ಗದ ವ್ಯಕ್ತಿಯ ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್; ಪತ್ನಿ, ಪ್ರಿಯಕರ ಸೇರಿ ಪತಿಯ ಹತ್ಯೆ

. ಏಪ್ರಿಲ್ 20ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿಯ ಗೋಪಾಲನಾಯ್ಕ್(42) ಹತ್ಯೆ ನಡೆದಿತ್ತು. ತರಕಾರಿ ವ್ಯಾಪಾರಕ್ಕೆ ತೆರಳಿದ್ದ ವೇಳೆ ಪತ್ನಿ, ಪ್ರಿಯಕರ ಸೇರಿ ಗೋಪಾಲನಾಯ್ಕ್ ಹತ್ಯೆ ಮಾಡಿದ್ದರು.

Crime News: ಚಿತ್ರದುರ್ಗದ ವ್ಯಕ್ತಿಯ ಅನುಮಾನಾಸ್ಪದ ಸಾವಿಗೆ ಟ್ವಿಸ್ಟ್; ಪತ್ನಿ, ಪ್ರಿಯಕರ ಸೇರಿ ಪತಿಯ ಹತ್ಯೆ
ಆರೋಪಿ ಚಂದ್ರಕಲಾ ಮತ್ತು ಮೃತ ವ್ಯಕ್ತಿ ಗೋಪಾಲನಾಯ್ಕ್
Follow us
TV9 Web
| Updated By: ಆಯೇಷಾ ಬಾನು

Updated on:May 09, 2022 | 3:00 PM

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ‌ ಬಳಿ ವ್ಯಕ್ತಿಯ ಅನುಮಾನಾಸ್ಪದ ಸಾವು ಕೇಸ್ಗೆ ಸಂಬಂಧಿಸಿ ತರಕಾರಿ ವ್ಯಾಪಾರಿಯ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಹತ್ಯೆ ಮಾಡಿರುವ ಸತ್ಯ ಬಯಲಾಗಿದೆ. ಏಪ್ರಿಲ್ 20ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿಯ ಗೋಪಾಲನಾಯ್ಕ್(42) ಹತ್ಯೆ ನಡೆದಿತ್ತು. ತರಕಾರಿ ವ್ಯಾಪಾರಕ್ಕೆ ತೆರಳಿದ್ದ ವೇಳೆ ಪತ್ನಿ, ಪ್ರಿಯಕರ ಸೇರಿ ಗೋಪಾಲನಾಯ್ಕ್ ಹತ್ಯೆ ಮಾಡಿದ್ದರು. ಬಳಿಕ ಮೂರ್ಚೆ ರೋಗದಿಂದ ಬಿದ್ದು ಸಾವು ಎಂದು ಪತ್ನಿ ಬಿಂಬಿಸಿದ್ದಳು. ಪೊಲೀಸ್‌ ತನಿಖೆಯಿಂದ ಹತ್ಯೆ ಪ್ರಕರಣ ಬಯಲಾಗಿದೆ. ಮೃತನ ಪತ್ನಿ ಚಂದ್ರಕಲಾ, ಪ್ರಿಯಕರ ರಾಜಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ. ಚಳ್ಳಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಕಾರು ಬೈಕ್ ನಡುವೆ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ ಮಾರುತಿ ಗಾಯಕ್ವಾಡ್ (25) ಮೃತ ದುರ್ದೈವಿ. ಬೈಕ್ ಹಿಂಬದಿ ಸವಾರ ಬೀರಪ್ಪ ಸಲಗರ ಅದೃಷ್ಟವಶಾತ್ ಪಾರಾಗಿದ್ದಾರೆ. ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬನ್ನೇರುಘಟ್ಟ ಉದ್ಯಾನವನದ ಹುಲಿ ಶಿವ ಸಾವು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಐದು ವರ್ಷ ಆರು ತಿಂಗಳ‌ ಪ್ರಾಯದ ಜಂಗಲ್ ಸಫಾರಿಯಲ್ಲಿದ್ದ ಬೆಂಗಾಲ್ ಟೈಗರ್ ಶಿವು ಮೃತಪಟ್ಟಿದೆ. ಹೇನು ರೋಗಕ್ಕೆ ತುತ್ತಾಗಿರುವ ಅನುಮಾನ ವ್ಯಕ್ತವಾಗಿದೆ. ಇಂಥಾದ್ದೇ ರೋಗಕ್ಕೆ ಈ ಹಿಂದೆ ಹುಲಿಯೊಂದು ತುತ್ತಾಗಿತ್ತು. ಈಗಲೂ ಅಂಥದ್ದೇ ಖಾಯಿಲೆಯಿಂದ ಶಿವ ಹುಲಿ ಕೂಡ ಮೃತಪಟ್ಟಿರುವ ಬಗ್ಗೆ ಪಶು ವೈದ್ಯರು ಅನುಮಾನ ಹೊರ ಹಾಕಿದ್ದಾರೆ. ಚರ್ಮ ಮತ್ತು ಎಲುಬಿಗೆ ಈ ಖಾಯಿಲೆ ಬರುತ್ತದೆ. ಕಳೆದ ಹಲವು ದಿನಗಳಿಂದ ಹುಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದಿದೆ. ವನ್ಯ ಜೀವಿ ಕಾಯ್ದೆಯಂತೆ ಹುಲಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಬಿದ್ದೇ ಬಿಡ್ತು ಬಹುದೊಡ್ಡ ಹೋರ್ಡಿಂಗ್ ಸರ್ಜಾಪುರದಲ್ಲಿ ಗಾಳಿಗೆ ಹೋರ್ಡಿಂಗ್ ಉಡೀಸ್ ಆಗಿದೆ. ಹೋಲ್ಡಿಂಗ್ಸ್ ಬಿದ್ದ ಪರಿಣಾಮ ವಿದ್ಯುತ್ ಕಂಬ ವಾಲಿದೆ. ಬಿಲ್ಡಿಂಗ್ ನಿವಾಸಿಗಳು ಜೀವಭಯದಲ್ಲಿದ್ದಾರೆ. ಸರ್ಜಾಪುರ ನಿವಾಸಿ ಮುತ್ತುಸ್ವಾಮಿಗೆ ಸೇರಿದ ಜಾಗದಲ್ಲಿ ತಿಂಗಳಿಗೆ 10 ಸಾವಿರ ರೆಂಟ್ ಮೇಲೆ ಜಾಹಿರಾತು ಎಜೆನ್ಸಿ ಹೋರ್ಡಿಂಗ್ ಅಳವಡಿಸಿತ್ತು. ಆದ್ರೆ ಭಾರಿ ಗಾಳಿಯ ರಭಸಕ್ಕೆ ಹೋರ್ಡಿಂಗ್ ಬಿದ್ದಿದೆ.

Published On - 3:00 pm, Mon, 9 May 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ