AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸ್ತಾರೋ, ಇಲ್ಲವೋ ಗೊತ್ತಿಲ್ಲ! ಆದರೆ ಜೆಡಿಎಸ್ ಕ್ಯಾಂಡಿಡೇಟ್ ಹಾಕಿದ ಹೆಚ್​ಡಿ ಕುಮಾರಸ್ವಾಮಿ

Badami Assembly constituency : ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹನುಮಂತ್​​ ಮಾವಿನ‌ಮರದ್​ ಅವರ ಹೆಸರನ್ನು ಬಾದಾಮಿ ತಾಲೂಕಿನ ಚುಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಹೆಚ್​ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸ್ತಾರೋ, ಇಲ್ಲವೋ ಗೊತ್ತಿಲ್ಲ! ಆದರೆ ಜೆಡಿಎಸ್ ಕ್ಯಾಂಡಿಡೇಟ್ ಹಾಕಿದ ಹೆಚ್​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸ್ತಾರೋ ಇಲ್ಲವೋ ಗೊತ್ತಿಲ್ಲ; ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
TV9 Web
| Updated By: ಸಾಧು ಶ್ರೀನಾಥ್​|

Updated on:May 09, 2022 | 4:33 PM

Share

ಬಾಗಲಕೋಟೆ: ಜೆಡಿಎಸ್ ಪಕ್ಷದ (JDS) ನೂತನ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ​ಜೊತೆಗೂಡಿ ಪಕ್ಷದ ಉಚ್ಛ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಅದೇ ಉತ್ಸಾಹದಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ (Karnataka Assembly Elections 2023) ಜಿಲ್ಲೆಯ ಬಾದಾಮಿ ಕ್ಷೇತ್ರದ (Badami) ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಕುತಃಉಲದ ಸಂಗತಿಯೆಂದರೆ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ​ ಅವರು ಇದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಾರೋ ಅಥವಾ ಬೆಂಬಲಿಗರ ಒತ್ತಡಕ್ಕೆ ಮಣಿದು, ಜೊತೆಗೆ ಸ್ವತಃ ಅವರೇ ಆಗಾಗ ಹೇಳಿದಂತೆ ಕ್ಷೇತ್ರವು ತುಂಬಾ ದೂರದಲ್ಲಿದೆ ಎಂಬ ಕಾರಣಕ್ಕೆ ಮತ್ತೆ ಇಲ್ಲಿಂದ ಸ್ಪರ್ಧಿಸ್ತಾರೋ, ಇಲ್ಲವೋ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಈ ಮಧ್ಯೆ ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹನುಮಂತ್​​ ಮಾವಿನ‌ಮರದ್​ ಅವರ (Hanumanth Mavinamarad) ಹೆಸರನ್ನು ಬಾದಾಮಿ ತಾಲೂಕಿನ ಚುಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ.

ಊರಿಗೆ ಮುಂಚೆ ಕ್ಯಾಂಡಿಡೇಟ್ ಹಾಕಿ, ಸಿದ್ದು ಕಾಲೆಳೆದ ಮಾಜಿ ಸಿಎಂ ಎಚ್ ಡಿಕೆ ಅಚ್ಚರಿಯ ಬೆಳವಣಿಗೆಯಲ್ಲಿ ಊರಿಗೆ ಮುಂಚೆ ತಮ್ಮ ಅಭ್ಯರ್ಥಿಯ ಹೆಸರು ಘೋಷಿಸಿದ ಮಾಜಿ ಸಿಎಂ ಎಚ್ ಡಿಕೆ ಅವರು ಸಿದ್ದು ಇನ್ನೂ ಕ್ಷೇತ್ರ ಹುಡುಕಾಟದಲ್ಲಿ ಮುಳುಗಿದ್ದಾರೆ ಎಂದೂ ಕಾಲೆಳೆದಿದ್ದಾರೆ. ಅವರಿನ್ನೂ ಎಲ್ಲಿ ನಿಲ್ತಾರೆ ಅಂತಾ ಗೊತ್ತಿಲ್ವಲ್ಲ! ಯಾವ ಕ್ಷೇತ್ರ ಅಂತಾ ಇನ್ನೂ ಗೊತ್ತಿಲ್ಲ! ಸ್ಪಷ್ಟವಾಗಿ ಹೇಳಿದ್ದಾರಾ? ಮತ್ಯಾಕೆ, ಒಂದಿನಾ ಕೋಲಾರ ಅನ್ನೋದು, ಅದೆಲ್ಲೋ ಚಾಮರಾಜಪೇಟೆ ಅನ್ನೋದು? ಇವೆಲ್ಲ ಯಾಕೆ ಮಾತಾಡ್ತೀರಿ? ಬಾದಾಮಿಯಲ್ಲಿ ನಮ್ಮ ಕ್ಯಾಂಡಿಡೇಟ್ ಹನಮಂತ್ ಮಾವಿನ‌ಮರದ್. ಈ ಹಿಂದೆ, ಎರಡೂ ರಾಜಕೀಯ ಪಕ್ಷಗಳ ನಡುವೆ 25 ಸಾವಿರ ಓಟ್ ತಗೊಂಡಿರೋದು. ಇವತ್ತು ರಾಜ್ಯಕ್ಕೆ ಅಂತಹ ನಾಯಕನ ಅವಶ್ಯಕತೆ ಇದೆ ಎಂದು ಎಚ್ ಡಿಕೆ ಅವರು ಹನಮಂತ್ ಅವರ ಬೆನ್ನುತಟ್ಟಿದ್ದಾರೆ.

ಸಿದ್ದರಾಮಯ್ಯರನ್ನ ನಾನೇ ಬಾದಾಮಿಗೆ ಕರೆತಂದಿದ್ದು ಎಂದ ಸಿಎಂ ಇಬ್ರಾಹಿಂ ನೀಡಿರುವ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅದು ಮತ್ತೊಂದು ಹೊಸ ಬದಲಾವಣೆ. ಇಬ್ರಾಹಿಂ ಅವರ ಆಕರ್ಷಣೆಯ ಶಕ್ತಿ ಇದೆಯಲ್ಲ, ಹೋದ ಚುನಾವಣೆಯಲ್ಲಿ ನಮಗೆ ಆ ಕೊರತೆ ಇತ್ತು. ಆ ಶಕ್ತಿ ಈ ಬಾರಿ ನಮ್ಮ ಅಭ್ಯರ್ಥಿ ಹನಮಂತಪ್ಪ ಅವರ ಪರವಾಗಿರುತ್ತೆ ಎಂದೂ ಭರವಸೆಯ ಮಾತನ್ನಾಡಿದರು.

10 ಕೆಜಿ ಅಕ್ಕಿ ಕೊಟ್ಟು ನಾವು ನಿಮ್ಮನ್ನ ಭಿಕಾರಿ‌ ಮಾಡಲ್ಲ: 10 ಕೆಜಿ ಅಕ್ಕಿ ಕೊಟ್ಟು ನಾವು ನಿಮ್ಮನ್ನ ಭಿಕಾರಿ‌ ಮಾಡಲ್ಲ. ಸೀರೆ ಕೊಡ್ತಾರಂತೆ ಸೀರೆ. ನಿಮ್ಮ ಯಜಮಾನರು ಸೀರೆ ಕೊಡಿಸದ ಸ್ಥಿತಿ ತಂದಿದ್ದಾರೆ ಎಂದು ಸಿದ್ದರಾಮಯ್ಯಗೆ H.D.ಕುಮಾರಸ್ವಾಮಿ ಟಕ್ಕರ್ ಕೊಟ್ಟರು.

ಪಿಎಸ್​ಐ ಡೀಲ್ ಎಲ್ಲಿಗೆ ತಂದು ನಿಲ್ಲಿಸಿದೆ. ಜೆಡಿಎಸ್​ಗೆ ಒಂದೇ ಒಂದು ಅವಕಾಶ ಕೊಟ್ಟು ನೋಡಿ. ಯಾರಿಗೆ ಮನೆಯಿಲ್ಲ ಅವರಿಗೆ ಮನೆ ಕಟ್ಟಿಸಿ ಕೊಡುತ್ತೇನೆ. ಹೇಳಿದಂತೆ ಮಾಡದಿದ್ರೆ ನಿಮ್ಮ ಬಳಿ ಮತ ಕೇಳಲು ಬರಲ್ಲ‌ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಹೆಚ್​​ಡಿಕೆ ಪುನರುಚ್ಚರಿಸಿದರು.

ಜೆ ಡಿ ಎಸ್ ಜನತಾ ಜಲಧಾರೆ ಸಂಕಲ್ಪ ಸಮಾವೇಶ‌ದಲ್ಲಿ ಮಾತನಾಡಿದ ಜೆಡಿಎಸ್ ನೇತಾರ ಹೆಚ್ ಡಿ ಕೆ ಪಂಚರತ್ನ ಯೋಜನೆ ಜೆ ಡಿ ಎಸ್ ನಲ್ಲಿದೆ. ಖಾಸಗಿ ಶಾಲೆಗಳ ಹಾವಳಿ ಮೆಟ್ಟಿನಿಲ್ಲಲು ಪಬ್ಲಿಕ್ ಶಾಲೆ ಅಂತಾ ಘೋಷಣೆ ಮಾಡಿದೆ. ಆದರೆ ಬಿಜೆಪಿ ಸರಕಾರ ಅದನ್ನು ಜಾರಿ ಮಾಡಲಿಲ್ಲ. ಹಳ್ಳಿ ಹಳ್ಳಿಯಲ್ಲಿ ಸರಕಾರಿ ಪಬ್ಲಿಕ್ ಶಾಲೆ ತೆರೆಯುತ್ತೇವೆ. ಉಚಿತ ಶಿಕ್ಷಣ ನೀಡೋದು ನಮ್ಮ ಪಂಚರತ್ನಗಳಲ್ಲೊಂದು ಎಂದು ಭರವಸೆ ನೀಡಿದರು.

ಕರ್ನಾಟಕದ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

C.M Ibrahim: ನಾನು ಸಾರಥಿ.. ಕುಮಾರಸ್ವಾಮಿ ಅರ್ಜುನ ಬಾಣ ಬಿಡೋದು ಅವ್ರೇ

Published On - 3:57 pm, Mon, 9 May 22

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ