AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲ್ಜಿಯಂನಿಂದ ಬಂದಿದೆ ಸ್ಪಟಿಕ ಲಿಂಗ! ರಾಯಚೂರಿನಲ್ಲಿ ದೇಶದ ಮೊದಲ ಸ್ಪಟಿಕ ಲಿಂಗ ಹಾಗೂ ಶಿವನ ಅವತಾರಗಳ ದೇವಾಲಯ

ಸ್ಪಟಿಕ ಲಿಂಗ ಸೇರಿ ಶಿವನ ಎಲ್ಲಾ ಅವತಾರಗಳನ್ನು ಹೊಂದಿರುವ ದೇಶದ ಮೊದಲ ದೇವಸ್ಥಾನ ಇದಾಗಿದೆ. ವರ್ಷಕ್ಕೆ ಎರಡು ಬಾರೀ ಮಾತ್ರ ಸ್ಪಟಿಕ ಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಬೆಲ್ಜಿಯಂನಿಂದ ಬಂದಿದೆ ಸ್ಪಟಿಕ ಲಿಂಗ! ರಾಯಚೂರಿನಲ್ಲಿ ದೇಶದ ಮೊದಲ ಸ್ಪಟಿಕ ಲಿಂಗ ಹಾಗೂ ಶಿವನ ಅವತಾರಗಳ ದೇವಾಲಯ
ಸ್ಪಟಿಕ ಲಿಂಗ
TV9 Web
| Updated By: ಆಯೇಷಾ ಬಾನು|

Updated on:May 09, 2022 | 10:49 PM

Share

ರಾಯಚೂರು: ಜಿಲ್ಲೆಗೆ ಕೋಟಿ ರೂ ಮೌಲ್ಯದ ಸ್ಪಟಿಕ ಲಿಂಗ ತರಿಸಲಾಗಿದೆ. ಬೆಲ್ಜಿಯಂನಿಂದ ಭಾರತಕ್ಕೆ ಬರೋಬ್ಬರಿ ಕೋಟಿ ರೂ.ಗೆ ಸ್ಪಟಿಕ ಲಿಂಗ ಆಮದು ಮಾಡಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿರುವ ವಿಶ್ವೇಶ್ವರ ಪಂಚಾಯತನ ಕ್ಷೇತ್ರದ ಗರ್ಭ ಗುಡಿಯಲ್ಲಿ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ಪಟಿಕೆ ಲಿಂಗ ಪ್ರತಿಷ್ಠಾಪನೆಗೆ ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಸಚಿವ ಜನಾರ್ಧನ ರೆಡ್ಡಿ ಸಾಕ್ಷಿಯಾಗಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರಿನ ವಿಶ್ವೇಶ್ವರ ಪಂಚಾಯತನ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಈ ಶಿವಲಿಂಗದ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ.. ಬೆಲ್ಜಿಯಮ್ನಿಂದ ತರಿಸಿರುವ ಈ ಸ್ಫಟಿಕ ಲಿಂಗಕ್ಕೆ 25 ಲಕ್ಷ ತೆರಿಗೆಯನ್ನೇ ಕಟ್ಟಲಾಗಿದೆ. ಇನ್ನು ಶ್ರೇಷ್ಠವಾದ ಸ್ಫಟಿಕ ಲಿಂಗದ ಆಗಮನದಿಂದ, ಶಿವನ ಎಲ್ಲಾ ರೂಪಗಳನ್ನ ಒಳಗೊಂಡಿರುವ ದೇಶದ ಮೊದಲ ದೇಗುಲವಾಗಿ ಶ್ರೀಕ್ಷೇತ್ರ ಬದಲಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಇದು. ಸ್ಫಟಿಕಲಿಂಗ ಪ್ರತಿಷ್ಠಾಪನೆ ಬಳಿಕ ಶಿವನ ಎಲ್ಲಾ ಅವತಾರಗಳನ್ನು ದೇಗುಲದಲ್ಲಿ ಸ್ಥಾಪಿಸಿದಂತಾಗಿದೆ. ಇನ್ನು, ಸ್ಫಟಿಕ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದ್ರು. ಅಂದಹಾಗೆ ಈ ಅಪರೂಪದ ಸ್ಫಟಿಕಲಿಂಗದ ದರ್ಶನ, ವರ್ಷದಲ್ಲಿ ಎರಡೇ ಬಾರಿ ಮಾತ್ರ ಸಿಗಲಿದೆ. ಕಾರ್ತಿಕ ಮಾಸ ಹಾಗೂ ಶಿವರಾತ್ರಿಯಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಉಳಿದಂತೆ, ವಿಶೇಷ ಅಭಿಷೇಕ ಮಾಡಿಸೋರು ಬೆಳಗ್ಗೆ 4 ರಿಂದ 6 ಗಂಟೆ ಒಳಗೆ ಮಾಡಿಸಬಹುದು.. ಆತ್ಮಲಿಂಗ ಸಹಿತ ಸ್ಪಟಿಕ ಲಿಂಗದ ಪ್ರತಿಷ್ಠಾಪನೆಯಲ್ಲಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಿಂದೆಲ್ಲ ಭಕ್ತರು ಆಗಮಿಸಿ ದರ್ಶನ ಪಡೆದ್ರು. ಶಿವನ ಎಲ್ಲಾ ಅವತಾರಗಳನ್ನೂ ಒಂದೇ ಗುಡಿಯಲ್ಲಿ ಕಣ್ತುಂಬಿಕೊಂಡ್ರು.

ರಾಯಚೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Mon, 9 May 22