Mysore News: ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ; ಆರೋಪಿ ಪರಾರಿ
ಮೈಸೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಯುವಕನೊಬ್ಬನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೇಮಂತ್ ಅಲಿಯಾಸ್ ಸ್ವಾಮಿ(23)ಕೊಲೆಯಾದ ವ್ಯಕ್ತಿ.
ಮೈಸೂರು: ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಯುವಕನೊಬ್ಬನನ್ನ ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ಹೇಮಂತ್ ಅಲಿಯಾಸ್ ಸ್ವಾಮಿ(23)ಕೊಲೆಯಾದ ವ್ಯಕ್ತಿ. ಸಾಗರ್, ಪ್ರತಾಪ್, ಮಂಜು ಎಂಬುವರಿಂದ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಹೇಮಂತ್ ಸಹೋದರಿಯನ್ನ ಆರೋಪಿ ಸಾಗರ್ ಪ್ರೀತಿಸುತ್ತಿದ್ದನೆಂದು ಕೇಳಿಬಂದಿದ್ದು, ಇದೇ ವಿಚಾರಕ್ಕೆ ಹೇಮಂತ್ನ ನಡುವೆ ವೈಷಮ್ಯ ಏರ್ಪಟಿದೆ. ಈ ಹಿನ್ನಲೆ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಕ್ಕೆ ಕಾರು ಡಿಕ್ಕಿ; ಓರ್ವ ವ್ಯಕ್ತಿ ಸ್ಥಳದಲ್ಲೆ ಸಾವು
ಮೈಸೂರು: ತಮಿಳುನಾಡಿನ ಬಣ್ಣಾರಿ ಹೆದ್ದಾರಿಯಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಹುಣಸೂರು ತಾಲೂಕಿನ ರತ್ನಪುರಿಯ ನಾಸೀರ್(46) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರಿನಲ್ಲಿದ್ದ ಸಿಕಂದರ್, ಮುಜೀಬ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಕೆಲಸದ ನಿಮಿತ್ತ ಕೊಯಿಮತ್ತೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:Bengaluru News: ತಂದೆಯನ್ನೇ ಹತ್ಯೆಗೈದ ಮಗ, ಮಧ್ಯರಾತ್ರಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಸೇತುವೆ ಬಳಿ ಕಾಲು ಜಾರಿಬಿದ್ದು ಕುರಿಗಾಹಿ ಸಾವು
ಚಿತ್ರದುರ್ಗ: ಹಿರಿಯೂರು ತಾಲೂಕಿನ ಶಿಡ್ಲಯ್ಯನಕೋಟೆ ಬಳಿ ಕುರಿ ತೊಳೆಯಲು ಹೋಗಿದ್ದ ಕುರಿಗಾಹಿ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದಾನೆ. ರಾಮಣ್ಣ(52)ಮೃತ ವ್ಯಕ್ತಿ. ವೇದಾವತಿ ನದಿ ಸೇತುವೆ ಬಳಿ ಈ ಘಟನೆ ನಡೆದಿದ್ದು, ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ