ಸೀತಾಪುರ: ಉತ್ತರ ಪ್ರದೇಶದ (Uttar Pradesh) ಸೀತಾಪುರದ ಉದ್ಯಮಿಯೊಬ್ಬರು ತನ್ನ ತಾಯಿ, ಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ತನ್ನ ಕುಟುಂಬದ ಐವರನ್ನು ಕೊಲೆ (Murder) ಮಾಡಿ, ಕೊನೆಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸರ ಪ್ರಕಾರ, 45 ವರ್ಷದ ಆರೋಪಿ ಅನುರಾಗ್ ಸಿಂಗ್ ಕುಡಿತದ ಚಟ ಹೊಂದಿದ್ದ. ಈ ಚಟದಿಂದಾಗಿಯೇ ಆತ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.
ಈ ಘಟನೆಯಲ್ಲಿ ಮೃತಪಟ್ಟವರನ್ನು ಅನುರಾಗ್ ಸಿಂಗ್ ಅವರ ತಾಯಿ ಸಾವಿತ್ರಿ ದೇವಿ (60), ಅವರ ಪತ್ನಿ ಪ್ರಿಯಾಂಕಾ (40), ಮತ್ತು ಅವರ ಮೂವರು ಪುತ್ರಿಯರಾದ ಅಶ್ವಿನಿ (12), ಅಶ್ವಿ (10), ಮತ್ತು ಮಗ ಅದ್ವೈತ್ (6) ಎಂದು ಗುರುತಿಸಲಾಗಿದೆ.
ಇಂದು (ಶನಿವಾರ) ಮುಂಜಾನೆ ಸೀತಾಪುರದ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಾಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ತಕ್ಷಣವೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳ ಶವಗಳು ಹೊರಗೆ ಮತ್ತು ಇತರರ ಶವಗಳು ಮನೆಯೊಳಗೆ ಪತ್ತೆಯಾಗಿದೆ. ಅವರಲ್ಲಿ ಇಬ್ಬರ ದೇಹದಲ್ಲಿ ಬುಲೆಟ್ ಗಾಯಗಳಾಗಿದ್ದರೆ, ಇನ್ನಿತರರನ್ನು ಚೂಪಾದ ವಸ್ತುವಿನಿಂದ ಗಾಯಗೊಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
VIDEO | UP’s Sitapur Murder Case: “Today, police received information from Palapur village that a mentally ill person, named Anurag Singh aged 45 years, has allegedly killed five people of his family before committing suicide. While investigating, police found that he killed his… pic.twitter.com/HKXjBk5Tng
— Press Trust of India (@PTI_News) May 11, 2024
ಗುಂಡೇಟಿನ ಗಾಯಗಳು ಅನುರಾಗ್ ಮತ್ತು ಅವರ ಪತ್ನಿಯ ದೇಹದ ಮೇಲೆ ಮಾತ್ರ ಕಂಡುಬಂದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ತಾಯಿಯ ತಲೆಯನ್ನು ಸುತ್ತಿಗೆಯಿಂದ ಹೊಡೆದು, ಮಕ್ಕಳನ್ನೂ ಸುತ್ತಿಗೆಯಿಂದ ಹೊಡೆದು, ನಂತರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ನೆಲ ಮಹಡಿಗೆ ಎಸೆಯಲಾಗಿದೆ.
ಮಾದಕ ವ್ಯಸನ ಮತ್ತು ಮದ್ಯದ ಚಟ ಹೊಂದಿದ್ದ ಅನುರಾಗ್ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದ. ಆತನನ್ನು ಮನೆಯವರು ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಲು ಉದ್ದೇಶಿಸಿದ್ದರು ಎಂದು ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಕೊಲೆಯಾಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾ ರುಂಡ ಪತ್ತೆ
ಅನುರಾಗ್ ಸಿಂಗ್ ಅವರು ತಮ್ಮ ಗ್ರಾಮದಲ್ಲಿ 100 ಬಿಘಾ ಜಮೀನು ಹೊಂದಿದ್ದು, ಅಲ್ಲಿಯೇ ಉಳಿದುಕೊಂಡು ಕೃಷಿ ಮಾಡುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಅವರ ಪತ್ನಿ ಪ್ರಿಯಾಂಕಾ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಕುಟುಂಬ ಲಕ್ನೋದ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿತ್ತು. ಇಬ್ಬರು ಮಕ್ಕಳು ಲಕ್ನೋದ ಪ್ರಸಿದ್ಧ ಶಾಲೆಯಲ್ಲಿ ಓದುತ್ತಿದ್ದರು. ಶುಕ್ರವಾರ, ಪ್ರಿಯಾಂಕಾ ಹಳ್ಳಿಯಲ್ಲಿರುವ ತನ್ನ ಗಂಡನ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು.
ಈ ಘಟನೆಯ ವೇಳೆ ಅನುರಾಗ್ ಅವರ ಸಹೋದರ ಅಜಿತ್ ಕೂಡ ಮನೆಯಲ್ಲಿದ್ದರು ಎಂದು ಸ್ಥಳೀಯ ಮೂಲಗಳು ಹೇಳಿವೆ. ಗುಂಡಿನ ಸದ್ದು ಕೇಳಿ ಆತ ತನ್ನ ಕೊಠಡಿಯಿಂದ ಹೊರಗೆ ಬಂದು ನೋಡಿದಾಗ ಅನುರಾಗ್ ಕುಟುಂಬ ಸದಸ್ಯರನ್ನು ಒಬ್ಬೊಬ್ಬರಾಗಿ ಸಾಯಿಸುತ್ತಿರುವುದು ಕಂಡು ಬಂದಿದೆ. ಅಜಿತ್‌ನನ್ನು ನೋಡಿದ ಅನುರಾಗ್ ಅವನ ಕಡೆಗೆ ಬಂದಿದ್ದಾನೆ. ಆದರೆ ಅಜಿತ್ ತನ್ನ ಕೋಣೆಗೆ ಬೀಗ ಹಾಕಿಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ