ಮಂಗಳೂರು, ಜ.30: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ (Venoor) ಪಟಾಕಿ ಘಟಕದಲ್ಲಿ ಸಂಭವಿಸಿದ ಸ್ಫೋಟದಿಂದ ಮೂವರ ಸಾವನ್ನಪ್ಪಿದ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ನಿಯಮ ಮೀರಿ ಗನ್ ಪೌಡರ್ ದಾಸ್ತಾನು ಮಾಡಿದ್ದೇ ಸ್ಫೋಟಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಪಟಾಕಿಗಾಗಿ ಪೊಟ್ಯಾಸಿಯಂ ಕ್ಲೋರೈಟ್, ಪೊಟ್ಯಾಸಿಯಂ ನೈಟ್ರೇಟ್ ಬಳಕೆ ಮಾಡಲಾಗುತ್ತದೆ. ಅದರಂತೆ, ಪಟಾಕಿ ತಯಾರಿಕಾ ಘಟಕದ ಮಾಲೀಕ ಬಶೀರ್ 15 ಕೆಜಿ ಗನ್ ಪೌಡರ್ ದಾಸ್ತಾನಿಗೆ ಅನುಮತಿ ಕೇಳಿದ್ದನು. ಆದರೆ, ಈ ನಿಯಮ ಉಲ್ಲಂಘಿಸಿ 100 ಕೆಜಿ ಗನ್ ಪೌಡರ್ ದಾಸ್ತಾನು ಮಾಡಿದ್ದನು. ಪಟಾಕಿ ಲೋಡಿಂಗ್ ವೇಳೆ ಒತ್ತಡ ಉಂಟಾಗಿ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ವೇಣೂರು ದುರಂತ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟಾಕಿ ತಯಾರಿಕ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ
ಅತಿಯಾದ ಸ್ಪೋಟಕ ದಾಸ್ತಾನು ಇಟ್ಟಿದ್ದು ಸ್ಫೋಟ ಹಾಗೂ ಅದರ ತೀವ್ರತೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಸದ್ಯ ಎಫ್ಎಸ್ಎಲ್ ತಂಡ ಚಾರ್ಕೋಲ್, ಗಂಧಕ, ಅಲ್ಯೂಮಿನಿಯಂ ಪೌಡರ್ ಸಹಿತ 85ಕ್ಕೂ ಹೆಚ್ಚು ವಸ್ತುಗಳ ಸ್ಯಾಂಪಲ್ ವಶಕ್ಕೆ ಪಡೆದುಕೊಂಡಿದೆ.
ಮೈಸೂರು ಜಿಲ್ಲೆಯಲ್ಲಿರುವ ಸುತ್ತೂರು ಮಠದ ಜಾತ್ರೆಗೆ ಪಟಾಕಿ ಪೂರೈಕೆ ಮಾಡಲು ಭಾರೀ ಪ್ರಮಾಣದಲ್ಲಿ ಪಟಾಕಿ ತಯಾರಿ ಮಾಡಲಾಗುತ್ತಿತ್ತು. ಹೀಗಾಗಿ ನಿಯಮ ಉಲ್ಲಂಘಿಸಿ ರಾಸಾಯನಿಕ ದಾಸ್ತಾನು ಇಡಲಾಗಿತ್ತು. ಆದರೆ ಫೈರ್ ಸೇಫ್ಟಿ ಬಳಕೆ ಮಾಡದೇ ನಿಯಮ ಉಲ್ಲಂಘಿಸಿ ಪಟಾಕಿ ತಯಾರಿ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ