ವಿಜಯಪುರ ಕಾಂಗ್ರೆಸ್ ಜಲಾಂದೋಲನ ಸಮಾವೇಶದಲ್ಲಿ ಇಬ್ಬರಿಗೆ ಚಾಕು ಇರಿತ ಆರೋಪ

ಕಾಂಗ್ರೆಸ್ ಜಲಾಂದೋಲನ ಸಮಾವೇಶದಲ್ಲಿ ಇಬ್ಬರಿಗೆ ಚಾಕು ಇರಿತ ಹಾಗೂ ರಾಡ್​ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ವಿಜಯಪುರ ಕಾಂಗ್ರೆಸ್ ಜಲಾಂದೋಲನ ಸಮಾವೇಶದಲ್ಲಿ ಇಬ್ಬರಿಗೆ ಚಾಕು ಇರಿತ ಆರೋಪ
ಕಾಂಗ್ರೆಸ್ ಜಲಾಂದೋಲನ ಸಮಾವೇಶ
Edited By:

Updated on: Dec 30, 2022 | 9:17 PM

ವಿಜಯಪುರ: ಕಾಂಗ್ರೆಸ್ (Congress) ಜಲಾಂದೋಲನ ಸಮಾವೇಶದಲ್ಲಿ ಇಬ್ಬರಿಗೆ ಚಾಕು (stabbing) ಇರಿತ ಹಾಗೂ ರಾಡ್​ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯಲ್ಲಿ ಇಂದು(ಡಿ.30) ದರ್ಬಾರ್​ ಮೈದಾನದಲ್ಲಿ ಆಯೋಜಿಸಿದ್ದ ಜಲಾಂದೋಲನ ಸಮಾವೇಶದಲ್ಲಿ ಘಟನೆ ನಡೆದಿದೆ. ಸಮಾವೇಶಕ್ಕಾಗಿ ಬ್ಯಾನರ್ ಅಳವಡಿಸುವ ವೇಳೆ ಘಟನೆ ಜರುಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮುಖಂಡ ಇರ್ಫಾನ್ ಶೇಖ್, ಹನಾನ್ ಶೇಖ್ ಸೇರಿದಂತೆ 7 ಮುಖಂಡರ ವಿರುದ್ಧ ಆರೋಪ ಮಾಡಲಾಗಿದೆ. ನಹೀಮ್ ಮೆಹಬೂಬ್‌ಸಾಬ್ ತಾಂಬೋಲಿ, ನೇಹಾಲ್ ಮೆಹಬೂಬ್‌ಸಾಬ್ ತಾಂಬೋಲಿ ಹಲ್ಲೆ ಆರೋಪ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಬಾಂಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ನಾವು ತಾಂಬೋಲಿ ಸಹೋದರರ ಮೇಲೆ ಹಲ್ಲೆ ಮಾಡಿಲ್ಲ. ಅವರೇ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಇರ್ಫಾನ್ ಶೇಖ್ ಆರೋಪಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇಬ್ಬರು ಡ್ರಗ್ ಪೆಡ್ಲರ್​ಗಳ ಬಂಧನ

ಬೆಂಗಳೂರು: ನಗರದಲ್ಲಿ ಇಬ್ಬರು ಡ್ರಗ್ ಪೆಡ್ಲರ್​ಗಳ ಬಂಧನ ಮಾಡಿದ್ದು, 10 ಲಕ್ಷ ಮೌಲ್ಯದ 10 ಕೆಜಿ ಗಾಂಜಾ, 1‌ ಕೆಜಿ ಹ್ಯಾಶಿಷ್ ಆಯಿಲ್, ಕಾರು, ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಸವನಗುಡಿ ಪೊಲೀಸರಿಂದ ಆರೋಪಿ ಸೀನಪ್ಪ, ನಾಗೇಶ್​ನನ್ನ ಅರೆಸ್ಟ್​ ಮಾಡಿದ್ದಾರೆ. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಡ್ರಗ್ಸ್​ ಮಾರುತ್ತಿದ್ದರು.

ಇದನ್ನೂ ಓದಿ: ಚಿಕಿತ್ಸೆ ಫಲಿಸದೆ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ IPS​ ಅಧಿಕಾರಿ ಆರ್. ದಿಲೀಪ್

ಮಂಡ್ಯದಲ್ಲಿ ನಿಂತಿದ್ದ ಟಿಪ್ಪರ್​​ಗೆ ಡಿಕ್ಕಿ ಹೊಡೆದ ಶಾಲಾ ವಾಹನ

ಮಂಡ್ಯ: ನಿಂತಿದ್ದ ಟಿಪ್ಪರ್​ಗೆ ಶಾಲಾ ವಾಹನ ಡಿಕ್ಕಿ ಹೊಡೆದಿದ್ದು, 22 ಮಕ್ಕಳು ಹಾಗೂ ಇಬ್ಬರು ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ನಗರದ ಜ್ಯೋತಿ ಇಂಟರ್ನ್ಯಾಷನಲ್ ಹೋಟೆಲ್ ಬಳಿ ನಡೆದಿದೆ. ರಸ್ತೆಯಲ್ಲಿ ಯೂಟರ್ನ್ ತೆಗೆದುಕೊಳ್ಳುವ ವೇಳೆ ಅವಘಡ ಉಂಟಾಗಿದೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಚಿನ್ಮಯ ವಿದ್ಯಾಲಯದ ಶಾಲಾ ವಾಹನ ವಾಹನದಲ್ಲಿ 42 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಪ್ರಯಾಣ ಮಾಡುತ್ತಿದ್ದರು. ಟಿಪ್ಪರ್​ಗೆ ಡಿಕ್ಕಿಯಾದ ಪರಿಣಾಮ ಮಕ್ಕಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ತೆರಚಿದ ಗಾಯಗಳಾಗಿವೆ. ಮಂಡ್ಯ ಮಿಮ್ಸ್​ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಮಕ್ಕಳ ವಾರ್ಡ್​ಗೆ ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ ಭೇಟಿ ಪರಿಶೀಲನೆ ಮಾಡಿದರು.

ಇದನ್ನೂ ಓದಿ: Crime News: ಮನೆ ಬಾಡಿಗೆ ಹಣ ಹಾಗೂ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಪಾರ್ವತಮ್ಮ ಹತ್ಯೆ, ಶರೀಫ್, ಸೈಯದ್ ಅಂದರ್​

ಆನೆದಾಳಿ ಮಹಿಳೆ ಸಾವು, ಓರ್ವನಿಗೆ ಗಂಭೀರ ಗಾಯ

ಮೈಸೂರು: ಆನೆದಾಳಿ ಮಹಿಳೆ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿಯಲ್ಲಿ ನಡೆದಿದೆ. ಸಿದ್ದೇಗೌಡ ಪತ್ನಿ ಚಿಕ್ಕಮ್ಮ (60) ಮೃತರು. ಬಿಳಿಕೆರೆ ಗ್ರಾಮದ ರವಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಜಮೀನ ಬಳಿ ಹುರುಳಿ ಕಣದಲ್ಲಿ ಚಿಕ್ಕಮ ಹಾಗೂ ಪತ್ನಿ ಸಿದ್ದೇಗೌಡ ಇದ್ದಾಗ ಈ ವೇಳೆ ಇಬ್ಬರ ಮೇಲೆ ದಾಳಿಗೆ ಆನೆ ಮುಂದಾಗಿದೆ. ಸಿದ್ದೇಗೌಡ ಓಡಿಹೋಗಿ ತಪ್ಪಿಸಿಕೊಂಡಿದ್ದು, ಓಡಲು ಸಾಧ್ಯವಾಗದೆ ಆನೆ ತುಳಿತಕ್ಕೆ ಒಳಗಾಗಿ ಚಿಕ್ಕಮ್ಮ ಮೃತಪಟ್ಟಿದ್ದಾರೆ. ಚಿಕ್ಕಬೀಚನಹಳ್ಳಿ ದಾಳಿ ಮಾಡಿದ ಬಳಿಕ ಬಿಳಿಕೆರೆ ಗ್ರಾಮದ ಬಳಿ ರವಿ ಎಂಬುವವರ ಮೇಲು ಕೂಡ ಆನೆ ದಾಳಿ ಮಾಡಿದೆ. ಸದ್ಯ ಮೃತ ಕುಟುಂಬಸ್ಥರ ಭೇಟಿ ಮಾಡಿದ ಶಾಸಕ ಜಿ.ಟಿ.ದೇವೆಗೌಡ ಸಾಂತ್ವನ ಹೇಳಿದ್ದಾರೆ. ಆನೆ ಸೆರೆ ಹಿಡಿಯುವಂತೆ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:08 pm, Fri, 30 December 22