AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್ ಹಬ್ಬದಂದು ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ: 707 ಜಾನುವಾರು ರಕ್ಷಣೆ, 67 ಮಂದಿ ಅರೆಸ್ಟ್

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗಿವೆ. ಒಟ್ಟು 60 ಎಫ್​ಐಆರ್​ಗಳು ದಾಖಲಾಗಿದ್ದು, 707 ಜಾನುವಾರು ರಕ್ಷಣೆಯೊಂದಿಗೆ 67 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಕ್ರೀದ್ ಹಬ್ಬದಂದು ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ: 707 ಜಾನುವಾರು ರಕ್ಷಣೆ, 67 ಮಂದಿ ಅರೆಸ್ಟ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 12, 2022 | 2:30 PM

Share

ಬೆಂಗಳೂರು: ಬಕ್ರೀದ್ ಹಬ್ಬ(Bakrid Festival)ದ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ(Anti Cow Slaughter Act) ಉಲ್ಲಂಘನೆಯಾಗಿದ್ದು, ಹಬ್ಬದ ದಿನದಂದು ಒಟ್ಟು 60 ಎಫ್​ಐಆರ್​ಗಳು ದಾಖಲಾಗಿದ್ದು,  707 ಜಾನುವಾರು ರಕ್ಷಣೆಯೊಂದಿಗೆ 67 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಸಾಯಿಖಾನೆಗೆ ಹೋಗುತ್ತಿದ್ದ ಸುಮಾರು 700ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ವಿವಿಧ ಗೋಶಾಲೆಗಳಿಗೆ ರವಾನಿಸಲಾಗಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ಬಕ್ರೀದ್ ಹಬ್ಬದಂದು ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ನಡೆಸಿದ ಹಿನ್ನೆಲೆ 60 ಎಫ್​ಐಆರ್​ಗಳು  ದಾಖಲಾಗಿದ್ದು, 67 ಆರೋಪಿಗಳನ್ನು ಬಂಧಿಸಿಲಾಗಿದೆ. ಒಟ್ಟು 707 ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದು, ಈ ಪೈಕಿ, 551 ಗೋವುಗಳು, 144 ಎಮ್ಮೆ ಮತ್ತು ಕೋಣಗಳು, 12 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ಅತಿ ಹೆಚ್ಚು ಗೋವುಗಳನ್ನು ಕಲಬುರಗಿಯಲ್ಲಿ ರಕ್ಷನೆ ಮಾಡಲಾಗಿದೆ.

ಇದನ್ನೂ ಓದಿ: Fake IPL: ಗುಜರಾತ್‌ನ ಗದ್ದೆಯಲ್ಲಿ ನಕಲಿ ಐಪಿಎಲ್‌ ಸೆಟ್ ಸೃಷ್ಟಿಸಿ ಬುಕಿಗಳಿಗೆ ವಂಚನೆ: ಖತರ್​ನಾಕ್ ಗ್ಯಾಂಗ್ ಅರೆಸ್ಟ್

ಕಲಬುರಗಿಯಲ್ಲಿ 193 ಗೋವು, 4 ಎಮ್ಮೆಗಳನ್ನು ರಕ್ಷಣೆ ಮಾಡಲಾಗಿದ್ದು, ಬೀದರ್ ಜಿಲ್ಲೆಯಲ್ಲಿ 92 ಗೋವು ಮತ್ತು ‌35 ಎಮ್ಮೆಗಳನ್ನು, ತುಮಕೂರು ಜಿಲ್ಲೆಯಲ್ಲಿ 90 ಗೋವು ಮತ್ತು 20 ಎಮ್ಮೆಗಳನ್ನು, ಬೆಂಗಳೂರು ನಗರದಲ್ಲಿ 66 ಗೊವು ಮತ್ತು 11 ಎಮ್ಮೆ, ಮೈಸೂರು ಜಿಲ್ಲೆಯಲ್ಲಿ 33 ಗೋವು, 15 ಎಮ್ಮೆ, ಹಾವೇರಿ ಜಿಲ್ಲೆಯಲ್ಲಿ 23 ಎಮ್ಮೆ, 2 ಗೋವು, ಕೋಲಾರದಲ್ಲಿ 21 ಗೋವು, ರಾಯಚೂರಿನಲ್ಲಿ 26 ಎಮ್ಮೆ, ಹಾಸನ 19, ಚಿಕ್ಕಬಳ್ಳಾಪುರದಲ್ಲಿ 10 ಎಮ್ಮೆ, ಚಿತ್ರದುರ್ಗ 7, ಉಡುಪಿ 6, ಶಿವಮೊಗ್ಗ 2, ಬೆಂಗಳೂರು ಗ್ರಾಮಾಂತರ ‌6, ದಕ್ಷಿಣ ಕನ್ನಡ 21 ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 6 ಒಂಟೆಗಳಂತೆ ಒಟ್ಟು 12 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಹಿಂದೂ ಯುವತಿಯರನ್ನು ಚುಡಾಯಿಸುತ್ತಿದ್ದ ಅನ್ಯ ಕೋಮಿನ ಯುವಕರು; ಪ್ರಶ್ನಿಸಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಎಲ್ಲೆಲ್ಲಿ ಎಷ್ಟು ಪ್ರಕರಣ ದಾಖಲು

ಅತಿ ಹೆಚ್ಚು ಗೋವುಗಳನ್ನು ಕಲಬುರಗಿ ಜಿಲ್ಲೆಯಲ್ಲಿ 16 ಪ್ರಕರಣಗಳನ್ನು ಪೊಲೀಸರು ದಾಖಲಿಸಿ 18 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಬೀದರ್ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಿ 6 ಜನರ ಬಂಧಿಸಿದರೆ, ತುಮಕೂರು ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿ 6 ಜನರನ ಬಂಧಿಸಲಾಗಿದೆ.

20 ಸಾವಿರಕ್ಕೂ ಅಧಿಕ ಗೋವುಗಳ ರಕ್ಷಣೆ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ನಂತರ ಕಸಾಯಿಖಾನೆಗಳಿಗೆ ಪೊಲೀಸರು ದಾಳಿ ನಡೆಸಲಾಗುತ್ತಿದೆ. ಅಲ್ಲದೆ ವಿವಿಧ ಕಾರ್ಯಾಚರಣೆಗಳನ್ನು ಕೈಗೊಂಡು ಸಾಗಾಟ ಮಾಡುತ್ತಿದ್ದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ. ಗೊಹತ್ಯೆ ಕಾಯ್ದೆ ಬಂದ ನಂತರ ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಗೋವುಗಳ ರಕ್ಷಣೆ ಮಾಡಲಾಗಿದ್ದು, ಸುಮಾರು 100 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

Published On - 1:45 pm, Tue, 12 July 22