ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್ ಆಗಿದ್ರೂ A3 ಆರೋಪಿ ವಿರೇನ್ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ.
ಕೊನೆಗೆ, ಕೋರ್ಟ್ ಮೂಲಕ ಸೂಚನೆ ನೀಡಿಸಿದ CCB ಪೊಲೀಸರು ಆತನಿಗೆ ಮೊಬೈಲ್ ಫೋನ್ ಅನ್ಲಾಕ್ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಖನ್ನಾ ಮೊಬೈಲ್ ಅನ್ಲಾಕ್ ಮಾಡಿಕೊಟ್ಟಿದ್ದು ಸದ್ಯ FSL ತಜ್ಞರಿಂದ ವಿರೇನ್ ಖನ್ನಾ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.
ಇದೀಗ, ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಖನ್ನಾ ಮೊಬೈಲ್ನಲ್ಲಿ ಪ್ರಮುಖ ಮಾಹಿತಿಗಳು, ದೊಡ್ಡ ದೊಡ್ಡವರ ಫೋನ್ ನಂಬರ್ಗಳು ಪತ್ತೆಯಾಗಿದೆ. ಜೊತೆಗೆ, WhatsApp ಚಾಟ್ ಕೂಡ ರಿಟ್ರೀವ್ ಮಾಡುತ್ತಿರುವ ತಜ್ಞರಿಗೆ ಖನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಮಾಹಿತಿಯನ್ನು ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.