ಪಶ್ಚಿಮ ಬಂಗಾಳ: ಸ್ನೇಹಿತನ ಅಪಹರಿಸಿ, ರಸಗುಲ್ಲಾ ತಿನ್ನಬೇಕೆನ್ನುವ ಕೊನೆಯ ಆಸೆ ಈಡೇರಿಸಿ ಹತ್ಯೆ ಮಾಡಿದ ಅಪ್ರಾಪ್ತ ಬಾಲಕರು

ಅಪ್ರಾಪ್ತ ಬಾಲಕರು ಸ್ನೇಹಿತನ್ನು ಅಪಹರಿಸಿ, ರಸಗುಲ್ಲಾ ತಿನ್ನುವ ಕೊನೆಯ ಆಸೆಯನ್ನು ಈಡೇರಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 14 ವರ್ಷದ ಬಾಲಕನ್ನು ಕೊಂದಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಘುರ್ನಿ ಪ್ರದೇಶದಲ್ಲಿ ಘಟನೆ ನಡೆದಿದೆ

ಪಶ್ಚಿಮ ಬಂಗಾಳ: ಸ್ನೇಹಿತನ ಅಪಹರಿಸಿ, ರಸಗುಲ್ಲಾ ತಿನ್ನಬೇಕೆನ್ನುವ ಕೊನೆಯ ಆಸೆ ಈಡೇರಿಸಿ ಹತ್ಯೆ ಮಾಡಿದ ಅಪ್ರಾಪ್ತ ಬಾಲಕರು
ಸಾಂದರ್ಭಿಕ ಚಿತ್ರ

Updated on: Aug 28, 2023 | 10:16 AM

ಅಪ್ರಾಪ್ತ ಬಾಲಕರು ಸ್ನೇಹಿತನ್ನು ಅಪಹರಿಸಿ, ರಸಗುಲ್ಲಾ ತಿನ್ನುವ ಕೊನೆಯ ಆಸೆಯನ್ನು ಈಡೇರಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 14 ವರ್ಷದ ಬಾಲಕನ್ನು ಕೊಂದಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಘುರ್ನಿ ಪ್ರದೇಶದಲ್ಲಿ ಘಟನೆ ನಡೆದಿದೆ. ಈ ಮೂವರು ಬಾಲಕರು ಆಟವಾಡಲು ಕಂಪ್ಯೂಟರ್ ಖರೀದಿಸಲು ಬಯಸಿದ್ದರು, ತಮ್ಮ ಸ್ನೇಹಿತನನ್ನು ಅಪಹರಿಸಿದರು ಬಳಿಕ ಆತನ ತಾಯಿಗೆ ಕರೆ ಮಾಡಿ ಬಳಿಕ ಬಾಲಕನ್ನು ಕೊಂದಿದ್ದಾರೆ.

ಆಗಸ್ಟ್ 25 ರಂದು 8 ನೇ ತರಗತಿಯ ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರ ಕೈಯಲ್ಲಿ ಹತನಾಗಿದ್ದಾನೆ. ಮೃತ ಬಾಲಕ ಘುರ್ನಿ ನಿವಾಸಿಯಾಗಿದ್ದು, ಶುಕ್ರವಾರ ಮಧ್ಯಾಹ್ನ ಕೆಲವು ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗೆ ಹೋಗುತ್ತಿದ್ದಾಗ ಕಾಣೆಯಾಗಿದ್ದ. ಬೆಳಗ್ಗೆ ಆತನ ತಾಯಿಗೆ 3 ಲಕ್ಷ ರೂ ನೀಡುವಂತೆ ಕರೆ ಬಂದಿದ್ದು, ಆಕೆ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶನಿವಾರದ ನಂತರ ಕೃಷ್ಣನಗರ ನಗರದ ಹೊರವಲಯದಲ್ಲಿರುವ ಹಿಜುಲಿ ಪ್ರದೇಶದ ಕೊಳದಿಂದ ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಬಾಲಕನ ಶವವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಮೃತ ಬಾಲಕ ಓದುತ್ತಿದ್ದ ಶಾಲೆಯಲ್ಲೇ 10ನೇ ತರಗತಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಓದಿ: ಕೋಲಾರದಲ್ಲಿ ಮರ್ಯಾದ ಹತ್ಯೆ: ತಂದೆಯಿಂದಲೇ ಮಗಳ ಕೊಲೆ

ಬಾಲಕನನ್ನು ಕೊಂದು ಆತನ ದೇಹವನ್ನು ಕೊಳದಲ್ಲಿ ಎಸೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೃತರ ತಂದೆ ಬಹಳ ಹಿಂದೆಯೇ ತೀರಿಕೊಂಡಿದ್ದರು, ತಾಯಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ತಾಯಿ-ಮಗ ಇಬ್ಬರೂ ತಮ್ಮ ತಾಯಿಯ ಚಿಕ್ಕಪ್ಪನ ಮನೆಯಲ್ಲಿಯೇ ಇದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us